More

    ಸಿದ್ದರಾಮಯ್ಯರಿಗೇಕೆ ಈಗ ಹಿಜಾಬ್ ಜಪ?

    ನವದೆಹಲಿ/ ಬೆಂಗಳೂರು: ರಾಜ್ಯದಲ್ಲಿ ಹಿಜಾಬ್​ಗೆ ಮತ್ತೆ ಅವಕಾಶ ಮಾಡಿಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವುದು ನಾಡಿನ ದುರದೃಷ್ಟ ಸಂಗತಿ. ಇದು ಮಕ್ಕಳ ಮನಸ್ಸನ್ನು ಸಹ ಕಲುಷಿತ ಮಾಡಿದೆ.

    ಕನಿಷ್ಠ ಶಾಲೆಗೆ ಹೋಗು ಮಕ್ಕಳನ್ನಾದ್ರೂ ರಾಜಕೀಯದಿಂದ ದೂರವಿಡಬೇಕು. ಹಿಜಾಬ್ ಧರಿಸಿಕೊಂಡು ಶಾಲೆಗೆ ಹೋಗೋಕೆ ಅವಕಾಶ ಕೊಡುತ್ತೇವೆ ಎಂದಿರುವ ಸಿದ್ದರಾಮಯ್ಯರ ಉದ್ದೇಶವೇನು? ಕಲಬುರಗಿಯಲ್ಲಿ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಇದೇ ಸರ್ಕಾರ ತಾಳಿ, ಕಾಲುಂಗುರ ತೆಗಿಸಿದೆ. ಮಾತು ಎತ್ತಿದೆ ಬರೀ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.

    ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಶೇ.5 ಕ್ಕೂ ಹೆಚ್ಚು ಅಲ್ಪಸಂಖ್ಯಾತರು ಶಿಕ್ಷಣ ವಂಚಿತರಾಗಿದ್ದಾರೆ. ಇಂದು ಅವರೆಲ್ಲ ಕೆಲಸವಿಲ್ಲದೆ ಓಡಾಡುತ್ತಿದ್ದಾರೆ ಎಂದರೆ ಏನರ್ಥ? ಅವರನ್ನು ಬರೀ ಮತಬ್ಯಾಂಕ್ ಆಗಿ ಬಳಸಿಕೊಂಡಿದ್ದಷ್ಟೇ. ನಮ್ಮ ಪ್ರಧಾನಿ ಅಲ್ಪಸಂಖ್ಯಾತ ಮಹಿಳೆಯರನ್ನೂ ಸಹ ಗೌರವದಿಂದ ಕಾಣಬೇಕು ಎಂದು ತ್ರಿವಳಿ ತಲಾಖ್​ನ್ನು ತೆಗೆದುಹಾಕಿದ್ದಾರೆ. ಕಾಂಗ್ರೆಸ್​ನವರು ಒಂದಾದರೂ ಇಂಥಾ ಕೆಲಸ ಮಾಡಿದ್ದಾರಾ? ಹಿಂದೆ ಬ್ರಿಟಿಷರು ಅನುಸರಿಸಿದ್ದನ್ನು ಕಾಂಗ್ರೆಸ್ ಅನುಸರಿಸುತ್ತಾ ಬಂದಿದೆ ಎಂದರು.

    ವೀರಶೈವ ಲಿಂಗಾಯತ ಧರ್ಮ ಎಂದು ಬೆಂಕಿ ಹಚ್ಚಲಾಯಿತು. ಈಗ ರಾಜ್ಯದಲ್ಲಿ ಬರಗಾಲವಿದೆ. ಆದರೆ, ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. 20 ಲೋಕಸಭೆ ಸೀಟು ಗೆಲ್ಲುತ್ತೇವೆಂದು ಕನಸು ಕಾಣುತ್ತಿದ್ದಾರೆ. ವಿಧಾನಸಭೆ ಚುನಾವಣೆ ರಿಸಲ್ಟ್ ಬಂದ ಮೇಲೆ ಮೋದಿ ಗ್ಯಾರಂಟಿಯೇ ಮುಖ್ಯ ಎನ್ನುವುದು ಸಾಬೀತಾಗಿದೆ. ಕಾಂಗ್ರೆಸ್ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಮಕ್ಕಳು ಒಳ್ಳೆ ಪ್ರಜೆಗಳಾಗಬೇಕೆಂದೇ ಶಿಕ್ಷಣ ನೀಡುವುದು ಮತ್ತು ಅದೇ ಕಾರಣಕ್ಕೆ ಸಮವಸ್ತ್ರ ಕೂಡ ಇರುವುದು ಎಂದು ಸಮರ್ಥಿಸಿಕೊಂಡರು. ಸರ್ಕಾರ ಬಂದು 6 ತಿಂಗಳಾಗಿದೆ. ಒಂದೇ ಒಂದು ಒಳ್ಳೆಯ ಯೋಜನೆ ಬಂದಿಲ್ಲ. ಈಗ ಹಿಜಾಬ್ ಭಜನೆ ಶುರು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ನಾನು ಈಗ ಪಕ್ಷದ ಅಧ್ಯಕ್ಷ ಮತ್ತು ಯಡಿಯೂರಪ್ಪನವರ ಪುತ್ರ ಎಂಬ ಅಹಂಕಾರದಿಂದ ಮಾತನಾಡುತ್ತಿಲ್ಲ. ನನಗೆ ಹೈಕಮಾಂಡ್ ಅಧಿಕಾರ ನೀಡಿದೆ. ಮುಂದಿನ ಗುರಿ ಲೋಕಸಭೆ ಚುನಾವಣೆ. ಕಾರ್ಯಕರ್ತರು ರಾಜ್ಯದಲ್ಲಿ ತಪಸ್ಸಿನ ರೀತಿಯಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಅವಮಾನ ಆಗುವ ರೀತಿಯಲ್ಲಿ ಕೆಲಸ ಮಾಡಬೇಡಿ ಎಂದು ಬಸನಗೌಡ ಪಾಟಿಲ್ ಯತ್ನಾಳ್ ಸೇರಿ ಎಲ್ಲರಲ್ಲೂ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

    ಅತಿಯಾದ ತುಷ್ಟೀಕರಣದಿಂದ 2018ರ ಚುನಾವಣೆಯಲ್ಲಿ ಸೋತಿದ್ದೀರಿ. ಈಗ ಮತ್ತೆ ಅದನ್ನೇ ಮುಂದುವರಿಸಿದರೆ ಜನರು ಪಾಠ ಕಲಿಸಲಿದ್ದಾರೆ. ಶಾಲಾ- ಕಾಲೇಜಿನ ಕೊಠಡಿಗಳಲ್ಲಿ ಧರಿಸಬಾರದೆಂದು ಸುತ್ತೋಲೆ ಹೊರಡಿಸಲಾಗಿದೆ. ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವುದಾಗಿ ಹೇಳಿದ್ದೀರಿ ನಿಮಗೆ ಕಾನೂನಿನ ಅರಿವಿದೆಯೇ?

    | ಪ್ರಲ್ಹಾದ ಜೋಶಿ ಕೇಂದ್ರ ಸಚಿವ

    ಸಿದ್ದರಾಮಯ್ಯ ಕರ್ನಾಟಕದಲ್ಲಿ ಶರಿಯಾ ಕಾನೂನು ತರಲು ಮುಂದಾಗಿದ್ದಾರೆ. ರಾಹುಲ್ ಗಾಂಧಿ, ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಭಾರತದಲ್ಲಿ ಇಸ್ಲಾಮಿಕ್ ಕಾನೂನುಗಳು ಜಾರಿಗೆ ಬರಲಿವೆ

    | ಗಿರಿರಾಜ್ ಸಿಂಗ್ ಕೇಂದ್ರ ಸಚಿವ

    ಸಮುದಾಯವನ್ನು ಗುರಿಯಾಗಿಸಿ ಕೊಂಡು ಕಾನೂನು ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಎಲ್ಲ ಸಮುದಾಯಗಳ ಸಿಎಂ. ಇತ್ತೀಚೆಗೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಂಗಳಸೂತ್ರ, ಕಾಲುಂಗುರ ಹಾಗೂ ಕಿವಿಯೋಲೆ ತೆಗೆದಿಡಬೇಕು ಎಂದು ನಿಯಮ ಬಂತು. ಮತ್ತೊಂದು ಪಂಗಡಕ್ಕೆ ಹಿಜಾಬ್ ಧರಿಸಿ ಎಂದು ಹೇಳುವುದು ಎಷ್ಟು ಸರಿ?

    | ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪೇಜಾವರ ಮಠ

    ರಾಜ್ಯದೆಲ್ಲೆಡೆ ಹಿಜಾಬ್ ನಿಷೇಧ ಆಗಿಯೇ ಇಲ್ಲ. ಎಲ್ಲಿ ಸಮವಸ್ತ್ರ ಸಂಹಿತೆಯಿ ದೆಯೋ ಅಲ್ಲಿ ಮಾತ್ರ ನಿಷೇಧ ಆಗಿದೆ. ಈ ಪ್ರಕರಣ ಈಗಾಗಲೇ ಸುಪ್ರೀಂಕೋರ್ಟ್ ವಿಚಾರಣೆಯಲ್ಲಿದೆ. ಸರ್ಕಾರದ ವೈಫಲ್ಯ ಮರೆಮಾಚಲು ಸಿಎಂ ಸಿದ್ದರಾಮಯ್ಯ ಮತ್ತೆ ಹಿಜಾಬ್ ವಿಷಯ ಪ್ರಸ್ತಾಪಿಸಿದ್ದಾರೆ.

    | ಬಸವರಾಜ ಬೊಮ್ಮಾಯಿ ಮಾಜಿ ಸಿಎಂ

    ಹಿಜಾಬ್ ಕುರಿತು ಸಿಎಂ ಹೇಳಿಕೆಗೆ ಸರ್ಕಾರ ಬದ್ಧ. ಈ ವಿಷಯದಲ್ಲಿ ಪಕ್ಷದ ನಿಲುವು ಸ್ಪಷ್ಟವಾಗಿದೆ. ಹಿಂದಿನ ಸರ್ಕಾರ ಮಾಡಿದ ತಪು್ಪ ಸರಿಪಡಿಸುವುದು ನಮ್ಮ ಸರ್ಕಾರದ ನೀತಿ.

    | ಎಚ್.ಕೆ.ಪಾಟೀಲ ಕಾನೂನು ಸಚಿವ

    ಹಿಜಾಬ್ ವಿಷಯವನ್ನು ಬಿಜೆಪಿಯವರು ಅನಗತ್ಯವಾಗಿ ಕೆಣಕಿದರು. ಉಡುಪು, ಆಹಾರ ಪದ್ಧತಿ ಪ್ರತಿಯೊಬ್ಬರ ಹಕ್ಕು. ಈ ವಿಷಯದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಬಾರದು.

    | ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

    ರಾಜ್ಯ ಸರ್ಕಾರ ಏನು ಮಾಡಿದರೂ ಸಂವಿಧಾನ ಮತ್ತು ಕಾನೂನು ಚೌಕಟ್ಟಿನಲ್ಲಿರುತ್ತದೆ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಆದ್ದರಿಂದ ಅವರು ಎಲ್ಲದರಲ್ಲೂ ಕೊಂಕು ಹುಡುಕುತ್ತಾರೆ.

    | ಪ್ರಿಯಾಂಕ್ ಖರ್ಗೆ ಐಟಿ-ಬಿಟಿ ಸಚಿವ

    ಹಿಜಾಬ್ ನಿಷೇಧ ವಿಚಾರವಾಗಿ ಸಿಎಂ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಕಾನೂನು ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಾರೆ. ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ.

    | ಮಧು ಬಂಗಾರಪ್ಪ ಶಿಕ್ಷಣ ಸಚಿವ

    ಬಿಜೆಪಿ ಅವರಿಗೆ ಕೆಲಸವಿಲ್ಲ. ಅವಕಾಶ ನೀಡಿದಾಗ ಕೆಲಸ ಮಾಡಿಲ್ಲ. ಈಗ ಕೆಲಸ ಮಾಡುತ್ತಿರುವವರ ಮೇಲೆ ಟೀಕೆ ಮಾಡುತ್ತಿದ್ದಾರೆ. ಗ್ಯಾರಂಟಿಗಳನ್ನು ಟೀಕಿಸಿದರು. ಈಗ ಹಿಜಾಬ್ ವಿಷಯ ಎತ್ತಿದ್ದಾರೆ.

    | ಶರಣ ಪ್ರಕಾಶ್ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ

    ಕೋರ್ಟ್ ಏನೇ ಆದೇಶ ಮಾಡಿದರೂ ಪಾಲಿಸುತ್ತೇವೆ. ಬಟ್ಟೆ-ಊಟದ ವಿಷಯದಲ್ಲಿ ನಿರ್ಬಂಧ ಇರಬಾರದು.

    | ಶಿವರಾಜ ತಂಗಡಗಿ ಹಿಂ.ವರ್ಗಗಳ ಕಲ್ಯಾಣ ಸಚಿವ

    ಹೆಚ್ಚಾಗಲಿದೆ ಜೆಎನ್​.1 ಪ್ರಕರಣಗಳ ಸಂಖ್ಯೆ, ಹೆದರುವ ಅಗತ್ಯವಿಲ್ಲ: ಹೀಗೆಂದು ಹೇಳಿದೆ ಉನ್ನತ ವೈದ್ಯಕೀಯ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts