More

    ನಾವ್ಯಾಕೆ ಮೋದಿ ಹೆಸರನ್ನು ಹೇಳುತ್ತಿರುತ್ತೇವೆ? ಮೋದಿಯವರ ಗುರಿ ಮುಂದಿನ ಚುನಾವಣೆಯಲ್ಲ: ಸಂಸದೆ ಶೋಭಾ ಕರಂದ್ಲಾಜೆ

    ಬೆಂಗಳೂರು: ಬಿಜೆಪಿಯವರು ಯಾವಾಗಲೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಹೇಳುತ್ತಿರುತ್ತಾರೆ, ಪ್ರಧಾನಿ ಮೋದಿಯವರ ಹೆಸರು ಉಲ್ಲೇಖಿಸದೆ ಏನನ್ನೂ ಹೇಳುವುದಿಲ್ಲ ಎಂಬ ಮಾತಿದೆ. ಆದರೆ ಅದು ಯಾಕೆ ಎನ್ನುವ ಕುರಿತಂತೆ ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.

    ರಾಜ್ಯ ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕಿಯೂ ಆಗಿರುವ ಶೋಭಾ ಕರಂದ್ಲಾಜೆ ಅವರು ಇಂದು ನಗರದಲ್ಲಿ ಆಯೋಜಿಸಿದ್ದ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳೊಂದಿಗಿನ ‘ಸ್ನೇಹ ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

    ದೇಶದಲ್ಲಿ ಆಗುತ್ತಿರುವ ಪ್ರಗತಿಪರ ಬದಲಾವಣೆ ಮತ್ತು ಅಭಿವೃದ್ಧಿಯ ವೇಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಆಗಿರುವುದರಿಂದ ನಾವು ಪದೇಪದೆ ಮೋದಿಯವರ ಹೆಸರನ್ನು ಹೇಳುತ್ತೇವೆ. ಆ ಬದಲಾವಣೆ-ಬೆಳವಣಿಗೆಗಳನ್ನು ಅವರ ಹೆಸರು ಇಲ್ಲದೆಯೂ ಹೇಳಬಹುದು. ಆದರೆ ಅವರ ಹೆಸರನ್ನು ಉಲ್ಲೇಖಿಸಿ ಹೇಳಿದಾಗ ನಮ್ಮ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಮತ್ತಷ್ಟು ಕೆಲಸ ಮಾಡುವ ಹುರುಪು ಬರುತ್ತದೆ ಎಂಬ ಕಾರಣಕ್ಕೆ ಆಗಾಗ ಮೋದಿಯವರ ಹೆಸರನ್ನು ಹೇಳುತ್ತಿರುತ್ತೇವೆ ಎಂದರು.

    ಇದನ್ನೂ ಓದಿ: 5 ಮತ್ತು 8ನೇ ತರಗತಿ ಬೋರ್ಡ್ ಎಕ್ಸಾಮ್​ಗೆ ಕೊನೆಗೂ ಸಿಕ್ತು ಹಸಿರು ನಿಶಾನೆ; ಪರೀಕ್ಷೆ ಯಾವತ್ತು? ಇಲ್ಲಿದೆ ಮಾಹಿತಿ

    ಅಲ್ಲದೆ, ಮೋದಿಯವರ ಕನಸು ಮುಂದಿನ ಚುನಾವಣೆಯಲ್ಲ ಎಂಬ ಸಂಗತಿಯನ್ನೂ ಅವರು ಪ್ರಸ್ತಾಪಿಸಿದರು. ಪ್ರಧಾನಿ ಮೋದಿಯವರು ಎಂದೂ ನಮ್ಮನ್ನು ಮುಂದಿನ ಚುನಾವಣೆಯನ್ನು ಗುರಿ ಆಗಿರಿಸಿಕೊಂಡು ಮಾತನಾಡಿಲ್ಲ. ಅವರ ಗುರಿ ಏನಿದ್ದರೂ ಸ್ವಾತಂತ್ರ್ಯದ ಶತಮಾನೋತ್ಸವದ ಸಂದರ್ಭದಲ್ಲಿ ಭಾರತ ಹೇಗಿರಬೇಕು ಎಂಬುದಾಗಿದೆ. ಅದಕ್ಕಾಗಿ ಪ್ರತಿಸಲ ಸಚಿವರು, ಆಯಾ ಇಲಾಖೆಗಳ ಮುಖ್ಯಸ್ಥರನ್ನು ಕೂರಿಸಿಕೊಂಡು ಮಾತನಾಡುವಾಗ ಅವರು, ಸ್ವಾತಂತ್ರ್ಯದ ಶತಮಾನೋತ್ಸವದ ಸಂದರ್ಭದಲ್ಲಿ ಕನಸಿನ ಭಾರತ ನಿರ್ಮಾಣಕ್ಕೆ ನಿಮ್ಮ ಇಲಾಖೆ ಏನು ಮಾಡುತ್ತದೆ ಎಂದು ಕೇಳುವ ಜತೆಗೆ ಏನು ಮಾಡಬೇಕು ಎಂಬ ನಿರ್ದೇಶನವನ್ನೂ ನೀಡುತ್ತಿರುತ್ತಾರೆ ಎಂದು ಮೋದಿಯವರ ಗುರಿ ಮತ್ತು ಕಾರ್ಯವೈಖರಿ ಕುರಿತು ಶೋಭಾ ಮಾಹಿತಿ ನೀಡಿದರು.

    ಮುದ್ರಣ, ವಿದ್ಯುನ್ಮಾನದ ಜತೆಗೆ ಈಗ ಡಿಜಿಟಲ್ ಮಾಧ್ಯಮ ವೇಗವಾಗಿ ಬೆಳೆಯುತ್ತಿದ್ದು, ಬಹಳ ಬೇಗ ಸುದ್ದಿಯನ್ನು ತಲುಪಿಸುವ ಕೆಲಸವನ್ನೂ ಮಾಡುತ್ತಿದೆ. ಡಿಜಿಟಲ್ ಮಾಧ್ಯಮದ ಓದುಗ ವರ್ಗವೇ ಬೇರೆ ಇರಬಹುದು ಅಥವಾ ಒಂದೊಂದು ಡಿಜಿಟಲ್ ಮಾಧ್ಯಮ ಒಂದು ನಿರ್ದಿಷ್ಟ ವರ್ಗಕ್ಕೆ ಸೀಮಿತವಾಗಿ ಇರಬಹುದು. ಅದಾಗ್ಯೂ ಈ ಮಾಧ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಅಭಿಪ್ರಾಯ ಪಟ್ಟ ಅವರು ಅದೇ ಕಾರಣಕ್ಕೆ ತಮ್ಮ ಪಕ್ಷ ಡಿಜಿಟಲ್ ಮಾಧ್ಯಮಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಹೇಳಿದರು. ಅಲ್ಲದೆ ಡಿಜಿಟಲ್ ಮಾಧ್ಯಮಕ್ಕೆ ಸರ್ಕಾರದ ಕಡೆಯಿಂದ ಆಗಬೇಕಾದ ಅನುಕೂಲಗಳ ಕುರಿತಾಗಿಯೂ ಪಕ್ಷದಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.

    ಇದನ್ನೂ ಓದಿ: ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಗಳ ಮಧ್ಯಂತರ ವರದಿ ಸಲ್ಲಿಕೆ: ಜಯಪ್ರಕಾಶ್ ಹೆಗ್ಡೆ

    ಇತ್ತೀಚೆಗೆ ಸಂಶೋಧನಾತ್ಮಕ ಬರಹಗಳಿಗಿಂತ ಜಾಸ್ತಿ ಬ್ರೇಕಿಂಗ್​ ನ್ಯೂಸ್​ಗಳು ಬರುತ್ತಿವೆ. ಆದರೆ ಬ್ರೇಕಿಂಗ್​ಗಿಂತ ಜಾಸ್ತಿ ಸಂಶೋಧನಾತ್ಮಕ ಬರಹಗಳು ಬರಬೇಕಿವೆ. ಬ್ರೇಕಿಂಗ್​ಗೆ ಟಿಆರ್​ಪಿ ಬಂದರೂ ಅದು ಶಾರ್ಟ್​ಟೈಮ್​ನದ್ದಾಗಿರುತ್ತದೆ. ಅದೇ ಸಂಶೋಧನಾತ್ಮಕವಾಗಿ ಬರೆದಾಗ ಜನರಿಗೆ ಹೆಚ್ಚು ವಿಷಯ ವಿವರವಾಗಿ ತಿಳಿಯುತ್ತದೆ. ಹೀಗಾಗಿ ಏನೇ ಬರೆದರೂ ತುಲನಾತ್ಮಕವಾಗಿ ಅಂಕಿ-ಅಂಶ ಸಹಿತ ಪ್ರಕಟಿಸಿ. ಯಾವುದೇ ಒಂದು ಕ್ಷೇತ್ರ ಹಿಂದೆ ಹೇಗಿತ್ತು ಈಗ ಹೇಗಿದೆ ಎಂಬ ಬಗ್ಗೆ ಹೋಲಿಸಿ ಸುದ್ದಿ ಪ್ರಕಟಿಸಿ, ಆಗ ಜನರಿಗೂ ಬೆಳವಣಿಗೆಯ ಅರಿವಾಗುತ್ತದೆ ಎಂದರು.

    ಇದನ್ನೂ ಓದಿ: ಕಲ್ಯಾಣಮಂಟಪಕ್ಕೂ ಕುಡಿದೇ ಬಂದ ವರ, ಮದುವೆಯೇ ಬೇಡ ಎಂದ ವಧು!

    ನಾವ್ಯಾಕೆ ಡಬಲ್ ಇಂಜಿನ್ ಸರ್ಕಾರ ಎಂದು ಆಗಾಗ ಹೇಳುತ್ತಿರುತ್ತೇವೆ ಎಂಬ ಬಗ್ಗೆ ಬಿಜೆಪಿ ತಮಿಳುನಾಡು ಅಧ್ಯಕ್ಷ ಹಾಗೂ ಕರ್ನಾಟಕದ ಸಹ-ಪ್ರಭಾರಿ ಕೆ.ಅಣ್ಣಾಮಲೈ ಸ್ಪಷ್ಟನೆ ನೀಡುವ ಜತೆಗೆ ಡಬಲ್ ಇಂಜಿನ್ ಸರ್ಕಾರದ ಪ್ರಯೋಜನದ ಕುರಿತೂ ಹೇಳಿದರು. ಡಬಲ್ ಇಂಜಿನ್ ಸರ್ಕಾರ ಯಾಕೆ ಬೇಕು ಎಂಬುದಕ್ಕೆ ಜಲಜೀವನ್​ ಮಿಷನ್​ ಒಂದು ಉದಾಹರಣೆಯಾಗಿ ಹೇಳಬಹುದು. 2019ರಲ್ಲಿ ಕರ್ನಾಟಕದಲ್ಲಿ ಮನೆಮನೆಗೂ ಕುಡಿಯುವ ನೀರಿನ ಸಂಪರ್ಕ ಶೇ. 24ರಷ್ಟಿತ್ತು. ಆದರೆ ಈಗ ಅದು ಶೇ. 64ಕ್ಕೆ ತಲುಪಿದೆ. ಆದರೆ ಪಕ್ಕದ ತಮಿಳುನಾಡಿನಲ್ಲಿ ಇನ್ನೂ ಅದು ಶೇ. 47ರಲ್ಲೇ ಇದೆ ಎಂದು ಉದಾಹರಿಸಿದರು.

    ಮಾಜಿ ಸಂಸದ, ರಾಷ್ಟ್ರೀಯ ವಕ್ತಾರ ಸೈಯದ್ ಜಾಫರ್ ಇಸ್ಲಾಂ ಕೂಡ ಉಪಸ್ಥಿತರಿದ್ದರು. ಕರ್ನಾಟಕದಲ್ಲಿನ ಡಿಜಿಟಲ್ ಸೇರಿದಂತೆ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts