More

    ಹೆಣ್ಣು ಮಕ್ಕಳು ಮದುವೆಯಾದ ಬಳಿಕ ಹೆಚ್ಚು ಆಕರ್ಷಿತರಾಗಿ ಕಾಣುವುದಕ್ಕೆ ಇದೇ ಕಾರಣನಾ!

    ನವದೆಹಲಿ: ಸಾಮಾನ್ಯವಾಗಿ ಎಲ್ಲರೂ ಗಮನಿಸಿರುವಂತೆ ಮದುವೆಯಾಗದ ಹುಡುಗಿಯರಿಗೆ ಹೋಲಿಸಿದರೆ ಮದುವೆ ಆದ ಹೆಣ್ಣು ಮಕ್ಕಳು ಹೆಚ್ಚು ಸುಂದರವಾಗಿ ಕಾಣುತ್ತಾರೆ. ಇದು ನಿಜಾನಾ ಎನ್ನುವರು ಮುಂದೆ ಓದಿ… ನಿಮಗೂ ಇದು ಸತ್ಯ ಎನಿಸುತ್ತೆ…

    ಮದುವೆಯಾದ ನಂತರ ಹೆಣ್ಣು ಮಕ್ಕಳಲ್ಲಿ ತೀವ್ರ ಬದಲಾವಣೆಗಳಾಗುತ್ತವೆ. ಮುಖದ ಕಾಂತಿ, ಅವರ ಹಾವ ಭಾವಗಳಲ್ಲಿನ ಬದಲಾವಣೆಗಳಷ್ಟೇ ಅಲ್ಲದೆ ತಮಗೆ ಅರಿವಿಲ್ಲದೆಯೇ ಅವರಲ್ಲಿ ಬರುವ ಪ್ರಬುದ್ಧತೆಯಂಥ ಅಂಶಗಳು ಅವರನ್ನು ಹೆಚ್ಚು ಆಕರ್ಷಿತರನ್ನಾಗಿಸುತ್ತದೆ.

    ಹೆಚ್ಚಿನ ಕಾಳಜಿ: ಮದುವೆಯಾದ ನಂತರ ಮಹಿಳೆಯರು ತಮ್ಮ ಮೇಲೆ ಹೆಚ್ಚು ಕಾಳಜಿ ವಹಿಸುತ್ತಾರೆ. ತನ್ನ ಪತಿಯ ಮುಂದೆ ತಾನು ಚೆಂದವಾಗಿ ಕಾಣಿಸಿಕೊಳ್ಳಬೇಕು ಎಂಬ ಇಚ್ಛೆ ಒಂದೆಡೆಯಾದರೆ ಇತರ ಮಹಿಳೆಯರಿಗಿಂತ ನಾನು ಸುಂದರವಾಗಿ ಕಾಣಬೇಕು ಎಂಬ ಇಂಗಿತವೂ ಇದ್ದು, ವಿವಾಹಿತೆಯರು ಹೆಚ್ಚು ಆಕರ್ಷಿತವಾಗಿ ಕಾಣಲು ಕಾಳಜಿ ವಹಿಸುತ್ತಾರೆ.

    ಆತ್ಮ ವಿಶ್ವಾಸ: ಅವಿವಾಹಿತ ಯುವತಿಯರಿಗಿಂತ ವಿವಾಹಿತ ಮಹಿಳೆಯರಲ್ಲಿ ಹೆಚ್ಚು ಆತ್ಮ ವಿಶ್ವಾಸವಿರುತ್ತದೆ. ಮದುವೆ ನಂತರದ ಜವಾಬ್ದಾರಿಗಳಿಂದಲೋ ಅಥವಾ ಕೆಲ ಸನ್ನಿವೇಶಗಳಿಂದಲೋ ಅವರ ಪ್ರಬುದ್ಧತೆ ಮತ್ತು ಆತ್ಮವಿಶ್ವಾಸ ತಾನಾಗಿಯೇ ಹೆಚ್ಚಾಗುತ್ತದೆ. ಈ ಪ್ರಬುದ್ಧತೆ ಮತ್ತು ಆತ್ಮವಿಶ್ವಾಸವೇ ಪುರುಷರನ್ನು ಮತ್ತಷ್ಟು ಆಕರ್ಷಿಸುತ್ತದೆ.

    ದೇಹದಲ್ಲಿನ ಬದಲಾವಣೆ: ಮದುವೆಯಾದ ನಂತರ ಮಹಿಳೆಯರಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಯು ಅವರ ಚರ್ಮದ ಕಾಂತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹಾಗೂ ಹೆಣ್ಣುಮಕ್ಕಳು ಮಾನಸಿಕವಾಗಿ ಸಂತೋಷವಾದಾಗ ಖಂಡಿತವಾಗಿಯೂ ಅವಿವಾಹಿತ ಮಹಿಳೆಯರಿಗಿಂತಲೂ ಹೆಚ್ಚು ಆಕರ್ಷಿತಳಾಗಿ ಕಾಣುತ್ತಾಳೆ.

    ಈ ಎಲ್ಲಾ ಅಂಶಗಳು ಒಂದೆಡೆಯಾದರೆ, ಮದುವೆಯಾದ ಹೆಣ್ಣು ಮಕ್ಕಳು ಹೆಚ್ಚು ಸಕ್ರಿಯರಾಗಿರುತ್ತಾರೆ. ಮನೆಗೆಲಸದ ಜತೆಜತೆಗೆ, ಒಂದೊಮ್ಮೆ ಕೆಲಸಕ್ಕೆ ಹೋದರೆ ಕಚೇರಿ ಕೆಲಸ, ಮಕ್ಕಳು, ಅತ್ತೆ-ಮಾವ, ತಂದೆ-ತಾಯಿಯ ಆರೈಕೆ… ಎಲ್ಲಾ ಕೆಲಸಗಳನ್ನು ಮಾಡುತ್ತಾ ಚಟುವಟಿಕೆಯಿಂದ ಕೂಡಿರುತ್ತಾರೆ. ಮೈಗಳ್ಳತನ ಮಾಡುವ ಹೆಂಗಸರಿಗಿಂತ ಚಟುವಟಿಕೆಯಿಂದಿರುವ ಹೆಂಗಸರೇ ಪುರುಷರಿಗೆ ಹೆಚ್ಚು ಇಷ್ಟವಾಗುತ್ತಾರೆ.

    ಆರ್​ಸಿಬಿಗೆ ಇಂದು ಪಂಜಾಬ್​ ಕಿಂಗ್ಸ್​ ಚಾಲೆಂಜ್​, ಆರನೇ ಗೆಲುವಿನತ್ತ ಕೊಹ್ಲಿ ಪಡೆ ಗಮನ

    ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸವಾಲಾಗದ ಕೆಕೆಆರ್; 7 ವಿಕೆಟ್ ಜಯ ದಾಖಲಿಸಿದ ರಿಷಭ್ ಪಂತ್ ಪಡೆ

    ಎಕ್ಸಿಟ್ ಪೋಲ್: ಪುದುಚೇರಿಯಲ್ಲಿ ಎನ್‌ಡಿಎ ದರ್ಬಾರ್; ಕೇರಳದಲ್ಲಿ ಮತ್ತೆ ಲೆಫ್ಟ್ ಕಮಾಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts