More

    ಬೂಸ್ಟರ್​ ಡೋಸ್​ ತೆಗೆದುಕೊಂಡವರಿಗೆ ಬರುವುದಿಲ್ಲ ಕರೊನಾ: ಅಧ್ಯಯನ

    ನವದೆಹಲಿ: ಸದ್ಯ ದೇಶದಲ್ಲಿ ಕರೊನಾ 4ನೇ ಅಲೆಯ ಆತಂಕ ಶುರುವಾಗಿದ್ದು, ಈ ನಡುವೆ ಲಸಿಕೆ ಹಾಕಿಸಿಕೊಂಡವರು ಮಾತ್ರ ಸ್ವಲ್ಪ ಮಟ್ಟಿಗೆ ನಿರಾಳ ಪಡೆದುಕೊಳ್ಳಬಹುದು.

    ಈ ನಡುವೆ ಬೂಸ್ಟರ್ ಡೋಸ್​ ಪಡೆದುಕೊಂಡ ಶೇ.70 ರಷ್ಟು ಮಂದಿಗೆ ಕರೊನಾ ಸೋಂಕು ತಗುಲುವುದಿಲ್ಲ ಎಂಬ ವಿಷಯ ಅಧ್ಯಯನದಿಂದ ತಿಳಿದುಬಂದಿದೆ.

    ದೇಶಾದ್ಯಂತ ಬೂಸ್ಟರ್​ ಲಸಿಕೆ ಪಡೆದುಕೊಂಡ 6 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಶೇ.45ರಷ್ಟು ಮಂದಿ ಲಸಿಕೆ ಪಡೆದವರಾಗಿದ್ದರು. ಇನ್ನು ಮೂರನೇ ಲಸಿಕೆ ಪಡೆಯದವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ ಎಂದು ಇಂಡಿಯಾ ಮೆಡಿಕಲ್​ ಅಸೋಸಿಯೇಷನ್​ ನ್ಯಾಷನಲ್​ ಟಾಸ್ಕ್​ ಫೋರ್ಸ್​ ತಿಳಿಸಿದೆ.

    5971 ಮಂದಿ ಲಸಿಕೆ ಪಡೆದವರಲ್ಲಿ ಶೇ.24ರಷ್ಟು ಜನತು 40 ವರ್ಷದೊಳಗಿನವರಾಗಿದ್ದರು. ಇನ್ನು ಶೇ.50ರಷ್ಟು ಮಂದಿ 40 ರಿಂದ 59 ವರ್ಷದೊಳಗಿನವರಾಗಿದ್ದರು. ಇದರಲ್ಲಿ ಶೇ.45ರಷ್ಟು ಮಹಿಳೆಯರನ್ನು ಸಮೀಕ್ಷೆಗೊಳಪಡಿಸಲಾಗಿತ್ತು.

    ಎರಡು ಲಸಿಕೆ ಬಳಿಕ ತೆಗೆದುಕೊಳ್ಳುವ ಬೂಸ್ಟರ್ ಡೋಸ್​ ಕರೊನಾ ಸೋಂಕಿನಿಂದ ಸಂಪೂರ್ಣವಾಗಿ ರಕ್ಷಿಸುತ್ತದೆ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ.

    ಇನ್ನು ಮೂರು ಲಸಿಕೆ ಪಡೆದವರನ್ನು ಕರೊನಾ ಮೂರನೇ ಅಲೆ ಸಂದರ್ಭದಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts