More

    ಬೈಕ್‌ ಕದ್ದು ಮಾರುತ್ತಿದ್ದ ಖದೀಮರಿಗೆ 3 ವರ್ಷ ಜೈಲು

    ಶಿರಸಿ: ಬೈಕ್ ಕಳ್ಳ ಹಾಗೂ ಕದ್ದ ಬೈಕ್‌ಗಳ ಬಿಡಿಭಾಗದ ದಾಖಲೆಗಳನ್ನು ಮರೆಮಾಚಿ ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 6 ಸಾವಿರ ರೂ. ದಂಡ ವಿಧಿಸಿ ಶಿರಸಿಯ 1 ನೇ ಅಽಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

    ಸಂದೀಪ ಗೋವಿಂದಪ್ಪ ಹಾಗೂ ರಂಜಿತ ಕೃಷ್ಣ ದೇವಾಡಿಗ ಶಿಕ್ಷೆಗೆ ಗುರಿಯಾದವರು.2020 ರ ಮಾರ್ಚ್ನಲ್ಲಿ ದಿವಾಕರ ಅಶೋಕ ನಾಯ್ಕ ಅವರು ನಾಡಿಗಲ್ಲಿಯ ಪೈ ಆಸ್ಪತ್ರೆಯ ಗೇಟ್ ಸಮೀಪ ನಿಲ್ಲಿಸಿಟ್ಟ ಬೈಕ್‌ನ್ನು ಸಂದೀಪ ಗೋವಿಂದಪ್ಪ ಇನ್ನೊಬ್ಬ ಅಪ್ರಾಪ್ತ ಬಾಲಕನ ಜತೆ ಸೇರಿ ಕಳ್ಳತನ ಮಾಡಿಕೊಂಡು ಹೋಗಿದ್ದ. ಮತ್ತೊಬ್ಬ ಅಪರಾಧಿ ರಂಜಿತ್ ಕೃಷ್ಣ ದೇವಾಡಿಗನ ನಂದಿಕೇಶ್ವರ ಆಟೊಬೊಬೈಲ್ ಮೆಕ್ಯಾನಿಕಲ್ ಶಾಪ್‌ನಲ್ಲಿ ಕೊಂಡೊಯ್ದು, ಚಾಸಿ ಹಾಗೂ ಇಂಜಿನ್ ನಂಬರ್ ಬದಲಿಸುವಾಗ ಸಿಕ್ಕಿ ಬಿದ್ದಿದ್ದ. ಅಲ್ಲದೇ ರಂಜಿತ್ ಕೃಷ್ಣ ದೇವಾಡಿಗ ಅಂಥ ಹಲವು ವಾಹನಗಳ ಚಾಸಿ ನಂಬರ್ ಉಜ್ಜಿ ಬದಲಾಯಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.ಶಿರಸಿ ಶಹರ ಪೊಲೀಸ್ ಠಾಣೆಯ ಮೋಹಿನಿ ಶೆಟ್ಟಿ ಇಬ್ಬರನ್ನು ಬಂಽಸಿ, ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಮಳಗೀಕರ್ ವಾದ ಮಂಡಿಸಿದ್ದರು. 

    ಇದನ್ನೂ ಓದಿ: ಮತ್ತೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts