More

    ಎರಡು ವರ್ಷಕ್ಕೂ ಮುನ್ನ ಅಂತ್ಯವಾಗಲಿದೆ ಕೋವಿಡ್​ ಸಂಕಷ್ಟ; ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾಸ

    ನವದೆಹಲಿ: ಈ ವರ್ಷಾಂತ್ಯಕ್ಕೆ ಹತ್ತಾರು ಕರೊನಾ ನಿಗ್ರಹ ಲಸಿಕೆಗಳು ಮಾರುಕಟ್ಟೆಗೆ ಲಗ್ಗೆ ಇಡುವುದಂತೂ ಖಚಿತವಾಗಿದೆ. ಭಾರತದಲ್ಲಿಯೇ ಮೂರು ಲಸಿಕೆಗಳು ಅಂತಿಮ ಹಂತದ ಪ್ರಯೋಗಕ್ಕೆ ಮುಂದಾಗಿವೆ. ಇದಲ್ಲದೇ, ಅಮೆರಿಕ, ಬ್ರಿಟನ್​ ಮೊದಲಾದ ದೇಶಗಳು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿವೆ.

    ಲಸಿಕೆ ಸಿದ್ಧವಾದ ತಕ್ಷಣ ಕೋವಿಡ್​ ಮಾಯವಾಗಿ ಬಿಡುತ್ತದೆ ಎಂದೇನಿಲ್ಲ. ಜಗತ್ತಿನ ಎಲ್ಲ ಜನರಿಗೆ ಅಗತ್ಯವಾದಷ್ಟು ಲಸಿಕೆಯನ್ನು ಉತ್ಪಾದನೆ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಜತೆಗೆ ಅವುಗಳನ್ನು ತಲುಪಿಸುವುದು ಕೂಡ ಅಷ್ಟೇ ಸವಾಲಿನ ಕೆಲಸವಾಗಿದೆ.

    ಇದನ್ನೂ ಓದಿ; ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ 

    ಇಷ್ಟೆಲ್ಲ ಆದ ಬಳಿಕವೂ ಈ ಜಗತ್ತು ಕರೊನಾಮುಕ್ತವಾಗಲು ಎರಡು ವರ್ಷವಾದರೂ ಬೇಕು ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೋಸ್​ ಅಧ್ನಾಮ್​.
    ಈ ಶತಮಾನದ ಆದಿಯಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್​ ಫ್ಲೂಗಿಂತಲೂ ಕಡಿಮೆ ಅವಧಿಯಲ್ಲಿ ಇದು ದೂರಾಗಲಿದೆ ಎಂಬ ವಿಶ್ಲೇಷಣೆ ವಿಶ್ವ ಆರೋಗ್ಯ ಸಂಸ್ಥೆಯದ್ದು. ಸದ್ಯ ಜಗತ್ತಿನ 2.28 ಕೋಟಿ ಜನರು ಕರೊನಾ ಸೋಂಕಿಗೆ ಒಳಗಾಗಿದ್ದು, ಎಂಟು ಲಕ್ಷ ಜನರು ಮೃತಪಟ್ಟಿದ್ದಾರೆ.

    ಕರೊನಾ ನಿಯಂತ್ರಣಕ್ಕಿರುವ ಎಲ್ಲ ಸಾಧನಗಳನ್ನು ಗರಿಷ್ಠ ಮಟ್ಟಕ್ಕೆ ಬಳಸಿಕೊಳ್ಳಬೇಕು. ಜತೆಗೆ ಲಸಿಕೆಗಳ ಉಪಯೋಗವನ್ನು ಪಡೆದುಕೊಳ್ಳಬೇಕು. ಹೀಗಾದಾಗ ಎರಡು ವರ್ಷಗಳ ಅವಧಿಗೂ ಮುನ್ನವೇ ವಿಶ್ವ ಕರೊನಾ ಸಂಕಷ್ಟದಿಂದ ಪಾರಾಗಲಿದೆ ಎಂದು ಅವರು ಹೇಳಿದ್ದಾರೆ.

    ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts