More

    ಕ್ರಿಕೆಟ್‌ ವಿಶ್ವಕಪ್‌ ನಿರೂಪಣೆಗಾಗಿ ಬಂದಿದ್ದ ಪಾಕ್‌ ಸುಂದರಿ ಭಾರತದಿಂದ ಗಡಿಪಾರು

    ನವದೆಹಲಿ:  ಪಾಕಿಸ್ತಾನದ ಸ್ಪೋರ್ಟ್ಸ್ ಆ್ಯಂಕರ್ ಝೈನಾಬ್ ಅಬ್ಬಾಸ್ ಸದಾ ಸುದ್ದಿಯಲ್ಲಿ ಇರುತ್ತಾರೆ. 10 ವರ್ಷಗಳ ಹಿಂದಿನ ಟ್ವೀಟ್‌ಗೆ ಸಂಬಂಧಿಸಿದಂತೆ ಕ್ರಿಕೆಟ್‌ ವಿಶ್ವಕಪ್‌ಗಾಗಿ ಪಾಕಿಸ್ತಾನದಿಂದ ಬಂದಿದ್ದ ಕ್ರೀಡಾ ನಿರೂಪಕಿಯನ್ನು ದೇಶದಿಂದ ಗಡಿಪಾರು ಮಾಡಲಾಗಿದೆ.

    ಪಾಕಿಸ್ತಾನದ ಕ್ರೀಡಾ ನಿರೂಪಕಿ ಜೈನಾಬ್‌ ಅಬ್ಬಾಸ್‌, 2023ರ ಕ್ರಿಕೆಟ್‌ ಏಕದಿನ ವಿಶ್ವಕಪ್‌ ಟೂರ್ನಿಯ ನಿರೂಪಣೆಗಾಗಿ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಪಾಕಿಸ್ತಾನದ ಟಿವಿ ನಿರೂಪಕಿ ಜೈನಾಬ್ ಅಬ್ಬಾಸ್ ಅವರನ್ನು ಭಾರತದಿಂದ ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿದೆ ಎಂದು  ಸ್ವತಃ ಅವರು ಪ್ರತಿನಿಧಿಸುವ ಟಿವಿ ವಾಹಿನಿಯೇ ತಿಳಿಸಿದೆ.

    ಭಾರತ, ಹಿಂದೂ ಧರ್ಮ ಭಾರತದಲ್ಲಿ ಪೂಜೆ ಮಾಡುವ ದೇವರು ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ  10 ವರ್ಷಗಳ ಹಿಂದೆ ಜೈನಾಬ್‌ ಅಬ್ಬಾಸ್‌ ಟ್ವೀಟ್‌ ಮಾಡಿದ್ದರು. ಈ ಕುರಿತಾಗಿ ವಕೀಲ ವಿನೀತ್‌ ಜಿಂದಾಲ್‌, ಜೈನಾಬ್‌ ಅಬ್ಬಾಸ್‌ ವಿರುದ್ಧ ದೂರು ದಾಖಲು ಮಾಡಿದ್ದರು. ಸೈಬರ್‌ ಕ್ರೈಮ್‌ನಲ್ಲಿ ದೂರು ದಾಖಲಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಆಕೆ ಮಾಡಿರುವ ಟ್ವೀಟ್‌ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಡಿಲೀಟ್‌ ಮಾಡಲಾಗಿದೆ.

    ಆಕೆಯನ್ನು ಭಾರತದಿಂದ ಗಡೀಪಾರು ಮಾಡಿದ ಪರಿಣಾಮವಾಗಿ, ಅವರು ಪ್ರಸ್ತುತ ದುಬೈನಲ್ಲಿ ನೆಲೆಸಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿಗಳು ತಿಳಿಸಿವೆ.

    ಝೈನಾಬ್ ಅಬ್ಬಾಸ್ 1988 ರಲ್ಲಿ ಪಾಕಿಸ್ತಾನದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಈಕೆ ಮಾಜಿ ದೇಶೀಯ ಕ್ರಿಕೆಟಿಗ ನಾಸಿರ್ ಅಬ್ಬಾಸ್ ಅವರ ಪುತ್ರಿ. ನಾಸಿರ್ ಅಬ್ಬಾಸ್ ಈಗ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.  ಝೈನಾಬ್ 2015 ರಲ್ಲಿ ಸ್ಥಳೀಯ ಸುದ್ದಿ ವಾಹಿನಿಯೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು. ಕೇವಲ 8 ವರ್ಷಗಳಲ್ಲಿ ತನ್ನ ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದ ಝೈನಾದ್ ಇಂದು ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. 2019 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್‌ ವೇಳೆ ಆ್ಯಂಕರ್ ಮಾಡುವ ಅವಕಾಶವನ್ನು ಐಸಿಸಿ ನೀಡಿದಾಗ ಈಕೆ ಮೊದಲ ಬಾರಿಗೆ ವಿಶ್ವದ ಗಮನ ಸೆಳೆದಳು.  2021 ರಲ್ಲಿ, ಅವರು ಸ್ಕೈ ಸ್ಪೋರ್ಟ್ಸ್‌ಗೆ ಆ್ಯಂಕರ್ ಮಾಡಿದ ಮೊದಲ ಪಾಕಿಸ್ತಾನಿ ನಿರೂಪಕಿ ಎನಿಸಿ ಕೊಂಡಿದ್ದಾರೆ.

    ಝೈನಾಬ್ ಅಬ್ಬಾಸ್ 2019 ರಲ್ಲಿ ಹಮ್ಜಾ ಕರ್ದಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  ಝೈನಾಬ್ ಅಬ್ಬಾಸ್ ಇದೀಗ ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

    Brand Bengaluru; ನಾಗರಿಕರ ಸಮಸ್ಯೆ ಆಲಿಸಲು “ಸಹಾಯ ಹಸ್ತ” ವೆಬ್​ಸೈಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts