More

    ದರ್ಶನ್ ಜತೆ ಹೆಜ್ಜೆ ಹಾಕಿದ ಈ ಬ್ಯೂಟಿ ಯಾರು? ಫ್ಯಾನ್ಸ್​ ಪ್ರಶ್ನೆಗೆ ಸಿಕ್ಕಿತು ಉತ್ತರ

    ಬೆಂಗಳೂರು: ಸ್ಯಾಂಡಲ್​ವುಡ್​​ ನಟ ದರ್ಶನ್​ ಅವರು ಕೆಲವು ದಿನಗಳ ಹಿಂದೆ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಸೆಲೆಬ್ರೆಟ್​​ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ನಟ ದರ್ಶನ್​ ಅವರು ಪತ್ನಿ ಜತೆಗೆ ಹೆಜ್ಜೆ ಹಾಕಿದ್ದರು ಈ ವಿಡಿಯೋ ವೈರಲ್​​ ಆಗಿತ್ತು. ಆದರೆ ಜತೆಗೆ  ಇನ್ನೊಂದು ವಿಡಿಯೋ ಸೋಶಿಯಲ್​​  ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

    ದರ್ಶನ್ ಯುವತಿಯೊಬ್ಬಳ ಜತೆ ರೊಮ್ಯಾಂಟಿಕ್‌ ಆಗಿ ಡ್ಯಾನ್ಸ್‌ ಮಾಡಿದ್ದರು. ತಮಿಳಿನ ‘ತೇರಿ’ ಚಿತ್ರದ ‘ಎನ್ ಜೀವನ್’ ಎನ್ನುವ ರೊಮ್ಯಾಂಟಿಕ್ ಸಾಂಗ್‌ಗೆ ದರ್ಶನ್  ಡ್ಯಾನ್ಸ್ ಮಾಡಿದ್ದಾರೆ.

    ಈ ವಿಡಿಯೋ ಹಾಗೂ ಪಾರ್ಟಿಯಲ್ಲಿ ದರ್ಶನ್​ ಪ್ಯಾಮಿಲಿ ಜತೆ ಈ ಸುಂದರ ಯುವತಿ ಜತೆಗೆ ತೆಗೆದಿರುವ ಕೆಲವು ಫೋಟೋಗಳು ವೈರಲ್​ ಆಗಿದ್ದವು. ಆ ಯುವತಿ ಯಾರು? ಎಂದು ನೆಟ್ಟಿಗರು ಕಮೆಂಟ್‌ ಮೂಲಕ ಒಂದೇ ಸಮನೆ ಪ್ರಶ್ನೆ ಇಟ್ಟಿದ್ದರು. ನೆಟ್ಟಿಗರ  ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ಜಾಜಿ ರಾಜು ಸ್ವತಃ ತಮ್ಮ ಇನ್‌ಸ್ಟಾದಲ್ಲಿ ದರ್ಶನ್‌ ಜತೆ ಸ್ಟೆಪ್ಸ್‌ ಹಾಕಿರುವ ವಿಡಿಯೊ ಪೋಸ್ಟ್‌ ಮಾಡಿಕೊಂಡಿದ್ದು, ಈ ಒಂದು ಕ್ಷಣ ನಾನು ಶಾಶ್ವತವಾಗಿ ಪ್ರೀತಿಸುತ್ತೇನೆ. ಅತ್ಯಂತ ವಿನಮ್ರ ಮತ್ತು ಒಳ್ಳೆಯ ವ್ಯಕ್ತಿಗೆ ಧನ್ಯವಾದಗಳು ಅಣ್ಣಾ ಎಂದು ಬರೆದುಕೊಂಡು ದರ್ಶನ್​ ಅವರನ್ನು ಟ್ಯಾಗ್​ ಮಾಡಿ ವಿಡಿಯೋ ಶೇರ್​ ಮಾಡಿದ್ದಾರೆ.

    View this post on Instagram

    A post shared by Jaaji (@jaajiraju)

    ಪಾರ್ಟಿಯಲ್ಲಿ ನಟ ದರ್ಶನ್ ಜತೆ ಡ್ಯಾನ್ಸ್ ಮಾಡಿರುವ ಯುವತಿ ಹೆಸರು ಜಾಜಿ ರಾಜು.  ಖ್ಯಾತ ನಾಟಕಕಾರ ಬಿ.ಬೋರೇಗೌಡ ಅವರ ಮೊಮ್ಮಗಳು  ಜಾಜಿ ರಾಜು. ಶ್ರೀಮತಿ ಸುನಿತಾ ಮತ್ತು ಬೊಮ್ಮನಹಳ್ಳಿ ಮಾಜಿ ಕಾರ್ಪೋರೇಟರ್ ಮೋಹನ್ ರಾಜು ಅವರ ಮಗಳು. ನಟ ದರ್ಶನ್‌ ಆಪ್ತರಾದ ಮೋಹನ್ ರಾಜು ಅವರು ಬರ್ತ್‌ಡೇ ಪಾರ್ಟಿಯಲ್ಲಿ ಫ್ಯಾಮಿಲಿ ಸಮೇತ ಹಾಜರಾಗಿದ್ದರು. ಆ ಸಮಯದಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಇದು ಎನ್ನಲಾಗಿದೆ.

    ಈಗಾಗಲೇ ದರ್ಶನ್‌ ಅಭಿನಯದ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಮಿಲನಾ ಪ್ರಕಾಶ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts