More

    ಅನ್ನಭಾಗ್ಯ ಯೋಜನೆಗೆ ಅನ್ನ ಬೆಳೆಯಲು ಅಣೆಕಟ್ಟೆ ಕಟ್ಟಿದವರು ಯಾರು ? : ಸಿದ್ದರಾಮಯ್ಯಗೆ ವಿಶ್ವನಾಥ್ ಪ್ರಶ್ನೆ

    ಮೈಸೂರು: ನಿಮ್ಮ ಅನ್ನಭಾಗ್ಯ ಯೋಜನೆಗೆ ಅನ್ನ ಬೆಳೆಯಲು ಅಣೆಕಟ್ಟೆ ಕಟ್ಟಿದವರು ಯಾರು? ಮೈಸೂರು ಮಹಾರಾಜರಲ್ಲವೇ? ಅಂತಹ ರಾಜ ಮನೆತನದ ಕುಡಿಯನ್ನು ಅವಿರೋಧವಾಗಿ ಆಯ್ಕೆ ಮಾಡದೆ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಸರಿಯಲ್ಲ. ಜನರು ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

    ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಯಕ ಸಮುದಾಯಗಳ ಸಮಾವೇಶದಲ್ಲಿ ಮಾತನಾಡಿ, ದೇಶದ ಯಾವುದೇ ರಾಜ್ಯದಲ್ಲೂ ಇಲ್ಲದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, 2013ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಸಲಹೆ ನೀಡಿದ್ದೇ ನಾನು ಎಂದರು.

    ಸ್ವಾತಂತ್ರೃ ಪೂರ್ವದಲ್ಲಿ ಜನರಿಗೆ ಆಹಾರ, ಆರೋಗ್ಯ, ಉದ್ಯೋಗ ನೀಡಿದವರು ಯದುವಂಶದವರು. ಅಂತಹ ಯದುವಂಶದ ಕುಡಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜನತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಯಾಗಲು ಬಯಸಿದಾಗ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ನಾನು ಸಿದ್ದರಾಮಯ್ಯ ಅವರಲ್ಲಿ ಬಹಿರಂಗವಾಗಿ ಮನವಿ ಮಾಡಿಕೊಂಡಿದ್ದೆ. ಆದರೆ, ನನ್ನ ಮನವಿಗೆ ಸ್ಪಂದಿಸದೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಯದುವೀರ್ ಅವಿರೋಧವಾಗಿ ಆಯ್ಕೆಯಾಗಿದ್ದರೆ ಸಿದ್ದರಾಮಯ್ಯ ಗೌರವ ಹೆಚ್ಚುತಿತ್ತು, ಜನತಂತ್ರ ವ್ಯವಸ್ಥೆ ಎತ್ತರಕ್ಕೆ ಹೋಗುತಿತ್ತು. ಆದರೆ, ನಿಮಗೆ ಇದು ಯಾವುದು ಅರ್ಥವಾಗಿಲ್ಲ, ನಿಮಗೆ ಚುನಾವಣೆ ಮಾತ್ರ ಅರ್ಥವಾಗಿದೆ ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts