More

    ಲ್ಯಾಬ್‌ನಲ್ಲಿ ರೂಪುಗೊಂಡಿದ್ದಲ್ಲ ಕರೊನಾ, ಪ್ರಾಣಿಗಳಿಂದ ಹಬ್ಬಿರಬಹುದು: ಚೀನಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕ್ಲೀನ್‌ಚಿಟ್!

    ಜಿನೀವಾ: ಕರೊನಾ ವೈರಸ್ ಕಳೆದ ವರ್ಷ ಚೀನಾದಲ್ಲೇ ಹುಟ್ಟಿಕೊಂಡಿದ್ದಾದರೂ ಯಾವುದೇ ಪ್ರಯೋಗಾಲಯದಲ್ಲಿ ಸೃಷ್ಟಿಸಿದ್ದಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಸ್ಪಷ್ಟಪಡಿಸಿದೆ.

    ಚೀನಾದ ಪ್ರಯೋಗಾಲಯದಲ್ಲಿಯೇ ಈ ವೈರಸ್ಸನ್ನು ಸೃಷ್ಟಿಸಲಾಗಿದೆ ಎಂಬ ಆರೋಪ ಹಲವು ದೇಶಗಳಿಂದ ಇತ್ತೀಚೆಗೆ ಕೇಳಿಬಂದಿತ್ತು. ಈ ಮಧ್ಯೆ, ಚೀನಾದ ಪಕ್ಷಪಾತಿ ಎಂದೇ ಕುಖ್ಯಾತಿಗೆ ಪಾತ್ರವಾಗಿರುವ ವಿಶ್ವ ಆರೋಗ್ಯ ಸಂಸ್ಥೆ, ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡುವ ಮೂಲಕ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದಂತಾಗಿದೆ.

    ‘‘ಕರೊನಾ ವೈರಸ್ ಪ್ರಾಣಿಗಳಲ್ಲಿ ಹುಟ್ಟಿಕೊಂಡಿದ್ದು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಬಹುತೇಕ ಪ್ರಾಣಿಜನ್ಯವಾದ ವೈರಸ್, ತನ್ನ ತಳಿಯ ಗಡಿ ದಾಟಿ ಮಾನವರಿಗೆ ಹೇಗೆ ಹಬ್ಬಿತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಯಾವುದೋ ಒಂದು ಪ್ರಾಣಿ ಇದಕ್ಕೆ ಮಾಧ್ಯಮವಾಗಿ ಕೆಲಸ ಮಾಡಿರಬಹುದು. ಬಾವಲಿಗಳಲ್ಲಿ ಇದರ ಜೈವಿಕ ಸಂಗ್ರಹ ಇದ್ದರೂ ಇರಬಹುದು. ಆದರೆ ಬಾವಲಿಗಳಿಂದ ಅದು ಮಾನವರಿಗೆ ಹೇಗೆ ಹಬ್ಬಿತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅದೆಲ್ಲವೂ ಸುದೀರ್ಘ ಸಂಶೋಧನೆಯಿಂದ ಮಾತ್ರವೇ ಹೊರಬರುವ ಅಂಶ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರೆ ಫಡೇಲಾ ಚೈಬ್ ಹೇಳಿದ್ದಾರೆ.(ಏಜೆನ್ಸೀಸ್)

    ಕರೊನಾ ರೋಗಿಗಳ ಕ್ವಾರಂಟೈನ್​ ಕೇಂದ್ರವಾಗಿದ್ದ ಮೂರಂತಸ್ತಿನ ಹೋಟೆಲ್​ ಕಟ್ಟಡಕ್ಕೆ ಬೆಂಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts