More

  ಮಹಿಳೆಯರು ಸ್ವಾವಲಂಬಿ ಆಗಲಿ

  ಕಾಗವಾಡ: ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಂಡು, ಆರ್ಥಿಕವಾಗಿ ಸದಢರಾಗಲು ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಲಾಭ ಪಡೆಯಬೇಕು ಎಂದು ಧರ್ಮಸ್ಥಳ ಯೋಜನೆ ಅಥಣಿ ಜಿಲ್ಲಾ ನಿರ್ದೇಶಕಿ ನಾಗರತ್ನಾ ಹೆಗೆಡೆ ಹೇಳಿದರು.

  ತಾಲೂಕಿನ ಮೊಳವಾಡ ಗ್ರಾಮದಲ್ಲಿ ಶನಿವಾರ ಧರ್ಮಸ್ಥಳ ಯೋಜನೆ ವತಿಯಿಂದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಜ್ಞಾನ ವಿಕಾಸ ಯೋಜನೆಯಡಿ ತ್ರೈಮಾಸಿಕ ಹೊಲಿಗೆ ತರಬೇತಿ ಮುಗಿಸಿದ 20 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.

  ಕಾಗವಾಡ ತಾಲೂಕು ಯೋಜನಾಧಿಕಾರಿ ಸಂಜೀವ ಮರಾಠೆ ಮಾತನಾಡಿ, ಮಹಿಳೆಯರಿಗೆ ವಿವಿಧ ಕೌಶಲ ತರಬೇತಿ ನೀಡಿ, ಸ್ವಾವಲಂಬಿಗಳನ್ನಾಗಿಸುವುದು ಧರ್ಮಸ್ಥಳ ಯೋಜನೆಯ ವಿಶೇಷ ಪ್ರಯತ್ನ ಎಂದರು. ತರಬೇತಿ ಮುಗಿಸಿದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

  ಗ್ರಾಪಂ ಅಧ್ಯಕ್ಷ ಅಮಿತ ಪಾಟೀಲ, ನಾಗರತ್ನಾ ಹೆಗಡೆ, ಸಂಜೀವ ಮರಾಠೆ, ಪ್ರದೀಪ ಸೂರ್ಯವಂಶಿ, ಸಂಜಯ ಸೂರ್ಯವಂಶಿ, ಸಿದ್ರಾಮ ಹೆಗಡೆ, ಶೈನಾಜ ಬಾಗೇವಾಡಿ, ರಿಹಾನಾ, ಉಮಾ ಗುರವ, ಸಂಗೀತಾ ಬಮ್ಮನಾಳೆ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts