ಮುನವಳ್ಳಿ: ಪಟ್ಟಣದ ಶ್ರೀ ಭವಾನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 7ನೇ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಸನ್ಮಾನ ಸಮಾರಂಭ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ರೈತರ ಅಭಿವೃದ್ಧಿಗಾಗಿ ತಾಲೂಕಿನಲ್ಲಿ ಅವಶ್ಯವಿರುವ ಕಡೆ ನೂತನ ಪಿಕೆಪಿಎಸ್ ಸಂಘಗಳನ್ನು ಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ತತ್ತ್ವ ಅಳವಡಿಸಿಕೊಂಡಲ್ಲಿ ಪರಸ್ಪರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಭವಾನಿ ಪಿಕೆಪಿಎಸ್ ಅಧ್ಯಕ್ಷ ಸೋಮಶೇಖರ ಯಲಿಗಾರ ಅಧ್ಯಕ್ಷತೆ ವಹಿಸಿದ್ದರು. ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಆನಂದ ಮಾಮನಿ, ಪಂಚನಗೌಡ ದ್ಯಾಮನಗೌಡರ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ ಹದ್ದಣ್ಣವರ, ಪುರಸಭೆ ಅಧ್ಯಕ್ಷ ವಿಜಯ ಅಮಠೆ, ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗುರುನಾಥ ಪತ್ತಾರ ಅವರನ್ನು ಸನ್ಮಾನಿಸಲಾಯಿತು.
ಮುನವಳ್ಳಿ ಪಿಕೆಪಿಎಸ್ ಅಧ್ಯಕ್ಷ ಅಂಬರೀಷ ಯಲಿಗಾರ, ಸಂಸ್ಥೆಯ ಉಪಾಧ್ಯಕ್ಷ ಬಸಪ್ಪ ಅಂಗಡಿ, ನಿರ್ದೇಶಕರಾದ ಬಾಳಪ್ಪ ಹೂಲಿ, ಯಲ್ಲಪ್ಪ ರಾಮಜಾರ, ಶ್ರೀಶೈಲ ಉಜ್ಜಿನಕೊಪ್ಪ, ಮಲ್ಲಿಕಾರ್ಜುನ ರಡ್ರಟ್ಟಿ, ಮಾರುತಿ ಅಜ್ಜನಕಟ್ಟಿ, ಗಜಾನನ ಕಲಾಲ, ಮಹ್ಮದ್‌ಹನೀಫ್ ಲಂಗೋಟಿ, ಲೀಲಾವತಿ ಅಜ್ಜನಕಟ್ಟಿ, ಪ್ರೇಮಾ ಉಜ್ಜಿನಕೊಪ್ಪ, ಕಾರ್ಯನಿರ್ವಾಹಕ ಬಸವರಾಜ ಕರಡಿ ಇತರರು ಇದ್ದರು. ಶಿಕ್ಷಕ ವೀರಣ್ಣ ಕೊಳಕಿ ಸ್ವಾಗತಿಸಿದರು. ಬಾಳು ಹೊಸಮನಿ ನಿರೂಪಿಸಿದರು. ಯಶವಂತ ಯಲಿಗಾರ ವಂದಿಸಿದರು.