More

    ಡಿಮಾರ್ಟ್​ನಿಂದ ಮನೆಗೆ ಮರಳಿದ ಮಹಿಳೆಗೆ ಶಾಕ್​: ಪತಿಯ ಸ್ಥಿತಿ ಕಂಡು ಕುಸಿದುಬಿದ್ದ ಪತ್ನಿ!

    ಹೈದರಾಬಾದ್​: ಕಳೆದ ಭಾನುವಾರ ಶಾಪಿಂಗ್​ಗೆಂದು ಮಕ್ಕಳನ್ನು ಕರೆದುಕೊಂಡು ಡಿಮಾರ್ಟ್​ಗೆ ಹೋದ ಮಹಿಳೆ, ತನಗೆ ಬೇಕಾದ ಪದಾರ್ಥಗಳನ್ನು ಖರೀದಿಸಿ ಮನೆಗೆ ಮರಳಿ ಬಂದು ನೋಡಿದಾಗ ಬಹು ದೊಡ್ಡ ಆಘಾತವೇ ಕಾದಿತ್ತು. ಬಹುಶಃ ಆಕೆ ಡಿಮಾರ್ಟ್​ಗೆ ಹೋಗಿರದಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲವೇನೋ?

    ಆಗಿದ್ದೇನೆಂದರೆ ಆಕೆ ಡಿಮಾರ್ಟ್​ಗೆ ಹೋಗಿ ಬರುವಷ್ಟರಲ್ಲಿ ಆಕೆಯ ಪತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನದಿಶೆಟ್ಟಿ ಬಾಲಶ್ರೀಧರ್​ (44) ಎಂದು ಗುರುತಿಸಲಾಗಿದೆ. ಹೈದರಾಬಾದ್​ನ ಎಸ್​ಆರ್​ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ವೆಂಗಾಲಾ ರಾವ್​ ನಗರ ವಿಭಾಗದ ಸಿದ್ಧಾರ್ಥ್​ನಗರದ ನಿವಾಸದಲ್ಲಿ ಘಟನೆ ನಡೆದಿದೆ.

    ಇದನ್ನೂ ಓದಿರಿ: ಶಿವಮೊಗ್ಗ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ: ಚಿಕ್ಕಬಳ್ಳಾಪುರದಲ್ಲಿ ಗಣಿಸ್ಫೋಟಕ್ಕೆ ಐವರು ಬಲಿ

    ಮೃತ ಬಾಲಶ್ರೀಧರ್​ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಸಟ್ಟನಾಪಲ್ಲಿ ಮಂಡಲದ ಪಾಪಿರೆಡ್ಡಿಪಲ್ಲೆಯ ನಿವಾಸಿ. ಈತ ಹೈದರಾಬಾದ್​ನ ಟಿಸಿಎಸ್​ (ಟಾಟಾ ಕನ್ಸಲ್ಟೆನ್ಸಿ ಸರ್ವೀಸ್​) ನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

    ಬಾಲಶ್ರೀಧರ್​ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಸಾಲ ನೀಡಿದ್ದ. ಅದಕ್ಕಾಗಿ ಬೇರೆಯವರ ಬಳಿ ಹಣ ಪಡೆದಿದ್ದ. ಆದರೆ, ಹಣವನ್ನು ಮರಳಿಸಲು ಕೇಳಿದಾಗ ಸತಾಯಿಸುತ್ತಿದ್ದರು. ಇತ್ತ ಹಣ ಕೊಟ್ಟವರು ಬಾಲಶ್ರೀಧರ್​ನನ್ನು ಒತ್ತಾಯಿಸುತ್ತಿದ್ದರು. ಯಾರು ಹಣ ಕೊಡದಿದ್ದಾಗ ಮಾನಸಿಕವಾಗಿ ಕುಗ್ಗಿದ್ದ. ಹಿಂದೊಮ್ಮೆ ಆತ್ಮಹತ್ಯೆಗೂ ಯತ್ನಿಸಿ, ಹೇಗೋ ಬಚಾವ್​ ಆಗಿದ್ದ.

    ಮಾನಸಿಕ ಖಿನ್ನತೆ ಮಾತ್ರ ಹಾಗೆಯೇ ಉಳಿದಿತ್ತು. ಹೀಗಿರುವಾಗ ಭಾನುವಾರ (ಫೆ.21) ಬೆಳಗ್ಗೆ ಬಾಲಶ್ರೀಧರ್​ ಪತ್ನಿ ಪದ್ಮಾ ಶಾಪಿಂಗ್​ಗೆಂದು ಮಕ್ಕಳನ್ನು ಕರೆದುಕೊಂಡು ಡಿಮಾರ್ಟ್​ಗೆ ತೆರಳಿದ್ದಾಳೆ. ಇತ್ತ ಮನೆಲ್ಲಿ ಒಬ್ಬನೇ ಇದ್ದ ಬಾಲಶ್ರೀಧರ್​ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಇದನ್ನೂ ಓದಿರಿ: ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಕ್ಕೆ ಹೆದರಿ ಹೀಗೆ ಮಾಡಿಕೊಂಡಿದ್ದಾರೆ: ಸಚಿವ ಸುಧಾಕರ್​

    ಇತ್ತ ಡಿಮಾರ್ಟ್​ನಿಂದ ಮನೆಗೆ ಮರಳಿದ ಪತ್ನಿ ಮನೆಯೊಳಗೆ ಪ್ರವೇಶಿಸಿದಾಗ ಒಳಗಡೆ ಪತಿಯ ಮೃತದೇಹ ಫ್ಯಾನ್​ನಲ್ಲಿ ನೇತಾಡುವುದನ್ನು ನೋಡಿ ಕುಸಿದುಬಿದ್ದಿದ್ದಾಳೆ. ಗಂಡನ ಕಳೆದುಕೊಂಡ ಆಕೆಯ ಆಕ್ರಂದನವು ಸಹ ಮುಗಿಲು ಮುಟ್ಟಿತ್ತು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    Web Exclusive | ಹಳಿ ತಪ್ಪಿದ ಹೋಟೆಲ್ ಉದ್ಯಮ: ಖಾದ್ಯ ತೈಲ, ತರಕಾರಿ ತುಟ್ಟಿ; ಜಿಎಸ್​ಟಿ ಮನ್ನಾ ಮಾಡಲು ಉದ್ಯಮಿಗಳ ಆಗ್ರಹ

    ನಾವಿಬ್ಬರೂ ಈಗಾಗಲೇ ಅಪ್ಪ-ಅಮ್ಮ: ಐಂದ್ರಿತಾ-ದಿಗಂತ್ ಅಚ್ಚರಿಯ ಹೇಳಿಕೆ

    ಜನಮತ | ಕೇಂದ್ರ ಇಂಧನ ಬೆಲೆಯನ್ನು ನಿಯಂತ್ರಿಸಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts