More

    ದೇಶವೂ ಹಿಂದೆದೂ ಕಂಡಿರದ ಸಾಮೂಹಿಕ ಸಾಮರ್ಥ್ಯ ಸಾಬೀತು ಪಡಿಸಿದೆ: ಪ್ರಧಾನಿ ಮೋದಿ

    ಕೆವಾಡಿಯಾ: ಕರೊನಾದಂತಹ ಕಠಿಣ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಸಾಂಕ್ರಾಮಿಕ ವಿರುದ್ಧ ಹೋರಾಡಿದ ಕೋವಿಡ್​-19 ವಾರಿಯರ್ಸ್​ಗೆ 130 ಕೋಟಿ ಭಾರತೀಯರು ಒಟ್ಟಾಗಿ ಗೌರವ ಸಲ್ಲಿಸಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ದೇಶವೂ ಹಿಂದೆದೂ ಕಂಡಿರದ ತನ್ನ ಸಾಮೂಹಿಕ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

    ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಪ್ರವಾಸದ ಅಂತಿಮ ದಿನವಾದ ಇಂದು ಕೆವಾಡಿಯಾದ ಸಬರಮತಿ ನದಿದಡದಲ್ಲಿ ದೇಶದ ಮೊದಲ ಸೀ ಪ್ಲೇನ್ ಉದ್ಘಾಟಿಸಿ ಮಾತನಾಡಿದರು. ಇಂದು ಸೀಪ್ಲೇನ್​ ಸೇವೆ ಸಬರಮತಿ ನದಿದಡದಿಂದ ಆರಂಭವಾಗಿದೆ. ಈ ಭಾಗದ ಪ್ರವಾಸೋದ್ಯಮಕ್ಕೆ ಬಹಳ ಉತ್ತೇಜನ ನೀಡಲಿದೆ ಎಂದರು.

    ಕಾಶ್ಮೀರವು ಇಂದು ಅಭಿವೃದ್ಧಿಯ ಹೊಸ ಪಥದಲ್ಲಿ ಸಾಗುತ್ತಿದೆ. ಅದು ಈಶಾನ್ಯ ಭಾಗದಲ್ಲಿನ ಶಾಂತಿ ಮರುಸ್ಥಾಪನೆಯಾಗಿರಬಹುದು ಅಥವಾ ಅಭಿವೃದ್ಧಿಗಾಗಿ ತೆಗೆದುಕೊಂಡ ಮಹತ್ವದ ಹೆಜ್ಜೆಯಾಗಿರಬಹುದು, ಇಂದು ದೇಶವು ಹೊಸ ಆಯಾಮದ ಏಕತೆಯನ್ನು ಸ್ಥಾಪಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

    ಇಂದು ಜಗತ್ತಿನ ಎಲ್ಲ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಒಂದಾಗಬೇಕಿದೆ. ಹಿಂಸೆ ಮತ್ತು ಭಯೋತ್ಪಾದನೆಯಿಂದ ಯಾರಿಗೆ ಲಾಭವಿಲ್ಲ. ಭಾರತ ಯಾವಾಗಲೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತದೆ ಎಂದು ತಿಳಿಸಿದರು. ಪುಲ್ವಾಮಾ ದಾಳಿಯ ಸಮಯದಲ್ಲಿ ಯೋಧರ ಬಲಿದಾನದ ಬಗ್ಗೆ ಕೆಲವರು ದುಃಖಿತರಾಗಿರಲಿಲ್ಲ ಎಂಬುದನ್ನು ದೇಶದ ಜನರು ಎಂದಿಗೂ ಮರೆಯುವುದಿಲ್ಲ. ಪುಲ್ವಾಮಾ ದಾಳಿಯ ಸಮಯದಲ್ಲಿ ಕೆಲ ಜನರು ರಾಜಕೀಯ ಮಾಡುತ್ತಿದ್ದರು. ಅಂತಹ ಜನರಿಗೆ ನಾನು ಹೇಳುವದೊಂದೆ ದೇಶದ ಹಿತಾಶಕ್ತಿಯಲ್ಲಿ ರಾಜಕೀಯ ಮಾಡಬೇಡಿ ಎಂದರು.

    ಇದನ್ನೂ ಓದಿ: ಕ್ರಿಶ್ಚಿಯನ್​ ಬಾಲಕಿ ಅಪಹರಿಸಿದ ಪಾಕ್​ ವ್ಯಕ್ತಿ: ಮದ್ವೆಯಾದ ಬಾಲಕಿ ಎರಡೇ ದಿನದಲ್ಲಿ ಯುವತಿಯಾದಳು!

    ವಿವಿಧ ಕಾರ್ಯಕ್ರಮಗಳಿಗೆ ಚಾಲನೆ
    ಎರಡು ದಿನಗಳ ಪ್ರವಾಸ ಹಿನ್ನೆಲೆಯಲ್ಲಿ ಶುಕ್ರವಾರ ಅಹಮದಾಬಾದ್​ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ (ಅ.31) ಪ್ರಯುಕ್ತ ಆಚರಿಸುವ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಶುಕ್ರವಾರ 17 ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

    ಆರೋಗ್ಯ ವನ, ಏಕತಾ ಮಾಲ್ ಲೋಕಾರ್ಪಣೆ ಮಾಡಿದರು. ಉದ್ಘಾಟಿಸಿದ ಮಕ್ಕಳ ನ್ಯೂಟ್ರಿಷಿಯನ್ ಪಾರ್ಕ್, ಸರ್ದಾರ್ ಪಟೇಲ್ ವನ್ಯಮೃಗ ಪಾರ್ಕ್ ವೀಕ್ಷಿಸಿದರು. ಕ್ರೂಸ್ ಸರ್ವೀಸ್ ಬೋಟ್​ನಲ್ಲಿ ವಿಹರಿಸಿದರು. ಇದಕ್ಕೂ ಮುನ್ನ ಗುರುವಾರ ನಿಧನರಾದ ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ ಕೇಶುಭಾಯ್ ಪಟೇಲ್​ರ ಗಾಂಧಿನಗರದ ನಿವಾಸಕ್ಕೆ ಭೇಟಿ ನೀಡಿದ ಮೋದಿ, ಕೇಶುಭಾಯಿ ಕುಟಂಬಸ್ಥರಿಗೆ ಸಾಂತ್ವನ ಹೇಳಿದರು.

    ಎರಡನೇ ದಿನವಾದ ಇಂದು ಆರಂಭದಲ್ಲಿ ಸರ್ದಾರ್​ ಪಟೇಲ್​ ಅವರ ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಕೇಂದ್ರ ಸಶಸ್ತ್ರ ಪಡೆ ಹಾಗೂ ಗುಜರಾತ್ ಪೊಲೀಸ್ ಪರೇಡ್ ವೀಕ್ಷಣೆ ಮಾಡಿದರು. ಅದಾದ ನಂತರ ದೇಶದ ಮೊದಲ ಸೀಪ್ಲೇನ್​ ಉದ್ಘಾಟಿಸಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. (ಏಜೆನ್ಸೀಸ್​)

    LIVE| ರಾಷ್ಟ್ರೀಯ ಏಕತಾ ದಿವಸ: ಸರ್ದಾರ್​ ಪಟೇಲರ ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts