More

    ವಾಟ್ಸ್​ಆ್ಯಪ್​ ಪ್ರೈವೇಟ್​ ಗ್ರೂಪ್​ ಸೇರೋಕೆ ಗೂಗಲ್​ನಲ್ಲೇ ಲಿಂಕ್​! ತಪ್ಪು ಮಾಡಿ ತಿದ್ದಿಕೊಂಡ ವಾಟ್ಸ್​ಆ್ಯಪ್​

    ನವದೆಹಲಿ: ವಾಟ್ಸ್​ಆ್ಯಪ್​ ಪ್ರೈವಸಿ ಸೆಕ್ಯುರಿಟಿ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆಯುತ್ತಿರುವಾಗಲೇ ಇದೀಗ ವಾಟ್ಸ್​ಆ್ಯಪ್​ನಲ್ಲಿ ಮತ್ತೊಂದು ದೋಷ ಕಂಡುಬಂದಿದೆ. ಖಾಸಗಿ ಗ್ರೂಪಗಳಿಗೆ ಸೇರಲು ಗೂಗಲ್​ನಲ್ಲೇ ಲಿಂಕ್​ ಲಭ್ಯವಾಗಿದ್ದು, ಇದರ ಕುರಿತು ವರದಿ ಪ್ರಕಟವಾಗುತ್ತಿದ್ದಂತೆಯೇ ಸಂಸ್ಥೆ ತಪ್ಪನ್ನು ತಿದ್ದಿಕೊಂಡಂತೆ ಕಂಡುಬಂದಿದೆ.

    ಇದನ್ನೂ ಓದಿ: ದೇಶದ ಮೊದಲ ಲಿಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ!

    ವಾಟ್ಸ್​ಆ್ಯಪ್​ನ ಈ ದೋಷವನ್ನು ಜಾಲತಾಣವೊಂದು ಬಯಲಿಗೆಳೆದಿದೆ. ವಾಟ್ಸ್​ಆ್ಯಪ್​ ಗ್ರೂಪುಗಳಲ್ಲಿ ಇಂಡೆಕ್ಸಿಂಗ್​ ಆಪ್ಷನ್ ಆಯ್ಕೆ ಮಾಡಿದ್ದರೆ ಅಂತಹ ಗ್ರೂಪುಗಳ ಲಿಂಕ್​ ಗೂಗಲ್​ನಲ್ಲಿ ಲಭ್ಯವಾಗಿದೆ. ಆ ಲಿಂಕ್​ನ್ನು ಕ್ಲಿಕ್ಕಿಸುವ ಮೂಲಕ ಅಪರಿಚಿತರು ನಮ್ಮ ಖಾಸಗಿ ಗ್ರೂಪುಗಳಿಗೆ (ಉದಾಹರಣೆಗೆ ಫ್ಯಾಮಿಲಿ ಗ್ರೂಪ್​, ಕ್ಲೋಸ್​ ಫ್ರೆಂಡ್ಸ್ ಗ್ರೂಪು, ಇತ್ಯಾದಿ) ಸೇರಬಹುದಿತ್ತು. ನಂತರ ಗ್ರೂಪಿನ ಯಾವುದೇ ಸದಸ್ಯನ ಫೋನ್​ ನಂಬರನ್ನು ಯಾವುದೇ ಸಮಸ್ಯೆಯಿಲ್ಲದೆಯೆ ತೆಗೆದುಕೊಳ್ಳಬಹುದಿತ್ತು.

    ಈ ದೋಷದ ಕುರಿತು ವರದಿ ಪ್ರಕಟವಾಗುತ್ತಿದ್ದಂತೆ ವಾಟ್ಸ್​ಆ್ಯಪ್​ ಸ್ಪಂದಿಸಿದೆ. ನಮ್ಮಲ್ಲಿ ಡೀಪ್​ ಸೆಕ್ಯುರಿಟಿ ಇರುವ ಚಾಟಿಂಗ್​ ಗ್ರೂಪುಗಳಿಗೆ ನೊಇಂಡೆಕ್ಸ್​ನ್ನು ಅಟಾಮೆಟಿಕ್​ ಆಗಿ ಆಯ್ಕೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದೆ. ಆದ್ದರಿಂದ ಇಂತಹ ಯಾವುದೇ ಸಮಸ್ಯೆ ವಾಟ್ಸ್​ಆ್ಯಪ್​ನಲ್ಲಿ ಇಲ್ಲ ಎಂದೂ ಸಂಸ್ಥೆ ವಾದಿಸಿದೆ. ಇದಾದ ಕೆಲವೇ ಸಮಯದಲ್ಲಿ ದೋಷ ಸರಿಹೋಗಿದ್ದು, ವಾಟ್ಸ್​ಆ್ಯಪ್​ ಖಾಸಗಿ ಗ್ರೂಪುಗಳಿಗೆ ಸೇರುವ ಲಿಂಕ್​ ಗೂಗಲ್​ನಿಂದ ನಾಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ಆದರೆ ವಾಟ್ಸ್​ಆ್ಯಪ್​ ಸಂಸ್ಥೆ ದೋಷವನ್ನು ಸರಿಪಡಿಸಿಕೊಂಡಿರುವ ಕುರಿತಾಗಿ ಯಾವುದೇ ಮಾಹಿತಿ ನೀಡಿಲ್ಲ.

    ಇದನ್ನೂ ಓದಿ: ಕೃಷಿ ಕಾಯ್ದೆ ತಡೆಗೆ ಸುಪ್ರೀಂ ಸೂಚನೆ; ನೀವು ತಡೆಯದಿದ್ದರೆ ನಾವೇ ತಡೆಯುತ್ತೇವೆ ಎಂದ ಸುಪ್ರೀಂ

    ಅಂದ ಹಾಗೆ ಇಂತಹ ದೋಷ ಕಂಡುಬರುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿಯೂ ಒಮ್ಮೆ ಇಂತದ್ದೇ ತಾಂತ್ರಿಕ ದೋಷ ಉಂಟಾಗಿತ್ತು. ಈ ಕುರಿತು ವರದಿಗಳು ಪ್ರಕಟವಾದ ನಂತರ ಎಚ್ಚೆತ್ತುಕೊಂಡ ಸಂಸ್ಥೆ ದೋಷವನ್ನು ಸರಿಪಡಿಸಿಕೊಂಡಿತ್ತು. (ಏಜೆನ್ಸೀಸ್​)

    ಅಣ್ಣ-ತಮ್ಮನಿಂದ ನಿರಂತರ ಅತ್ಯಾಚಾರ: ಲವ್ ಜಿಹಾದ್​ಗೆ ಸಿಲುಕಿ ನರಳಾಡುತ್ತಿದ್ದಾಳೆ ಬೆಂಗಳೂರಿನ ಯುವತಿ

    ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts