More

    ಶಾಲಾ ಬಿಸಿಯೂಟಕ್ಕೂ ಸೂರ್ಯಕಾಂತಿ ಎಣ್ಣೆ ಬಿಸಿ; ಅದಾಗ್ಯೂ ಅದೇ ಎಣ್ಣೆ ಬಳಸಲು ಸೂಚನೆ..

    ಬೆಂಗಳೂರು: ರಷ್ಯಾ ಮತ್ತು ಯೂಕ್ರೇನ್ ಯುದ್ಧದಿಂದಾಗಿ ಸೂರ್ಯಕಾಂತಿ ಎಣ್ಣೆ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಇದು ಮಧ್ಯಾಹ್ನದ ಬಿಸಿಯೂಟದ ಮೇಲೂ ಪರಿಣಾಮ ಬೀರುತ್ತಿದೆ. ವ್ಯತ್ಯಯ ಉಂಟಾದರೂ ಯಾವುದೇ ಕಾರಣಕ್ಕೂ ಬೇರೆ ಎಣ್ಣೆ ಬಳಕೆ ಮಾಡದಂತೆ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

    2021-22ನೇ ಸಾಲಿನ ಮಧ್ಯಾಹ್ನ ಉಪಾಹಾರ ಯೋಜನೆ ಅಡಿಯಲ್ಲಿ ಏಪ್ರಿಲ್‌ವರೆಗೆ ಜಿಲ್ಲಾವಾರು ಆಹಾರ ಬೇಡಿಕೆಯಂತೆ ಸೂರ್ಯಕಾಂತಿ ಎಣ್ಣೆಯನ್ನು ಸರಬರಾಜಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಾರಣಾಂತರಗಳಿಂದಾಗಿ ಸೂರ್ಯಕಾಂತಿ ಎಣ್ಣೆ ಜಿಲ್ಲಾವಾರು ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಶಾಲೆಗಳಲ್ಲಿ ಬಿಸಿಯೂಟ ತಯಾರು ಮಾಡಲು ಅಡುಗೆ ಎಣ್ಣೆ ವ್ಯತ್ಯಯ ಉಂಟಾದಲ್ಲಿ ಕೂಡಲೇ ಶಾಲೆಯಲ್ಲಿ ಲಭ್ಯವಿರುವ ಪರಿವರ್ತನಾ ವೆಚ್ಚ ಬಳಸಿಕೊಂಡು ಮುಕ್ತ ಮಾರುಕಟ್ಟೆಯಲ್ಲಿ ದೊರೆಯುವ ಖಾದ್ಯ ತೈಲ ಅಡುಗೆ ಎಣ್ಣೆಯನ್ನು ಖರೀದಿಸಬೇಕು. ದರಕ್ಕೆ ಅನುಗುಣವಾಗಿ ಪಡೆದುಕೊಂಡು ಬಿಸಿಯೂಟ ನಿಲ್ಲದಂತೆ ನಿರಂತರವಾಗಿ ನಡೆಸುವಂತೆ ಮುಂದಿನ ಆದೇಶದವರೆಗೂ ಕ್ರಮ ಕೈಗೊಳ್ಳಬೇಕೆಂದು ಶಾಲಾ ಮುಖ್ಯ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಸೂಚಿಸಿದ್ದಾರೆ. ‘

    ಈ ಅವಧಿಯ ಅಗತ್ಯ ಪರಿವರ್ತನಾ ವೆಚ್ಚವನ್ನು ಶಾಲೆಗಳಿಗೆ ಬಿಡುಗಡೆಗೊಳಿಸುವ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಸೂಚಿಸಿದ್ದು, ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಮುನ್ನೆಚರಿಕೆ ಕ್ರಮವಹಿಸಲು ತಿಳಿಸಿದೆ.

    ಯಾವುದೇ ಕಾರಣಕ್ಕೂ ಸೂರ್ಯಕಾಂತಿ ಎಣ್ಣೆ ಬದಲು ಮಾಡಬಾರದು. ಸರಬರಾಜಿನಲ್ಲಿ ವಿಳಂಬವಾದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಲಭ್ಯವಿರುವ ಪರಿವರ್ತನಾ ವೆಚ್ಚ ಬಳಕೆ ಮಾಡಿಕೊಂಡು ಎಣ್ಣೆ ತರಿಸಿಕೊಡಬೇಕು.
    | ಡಾ.ಆರ್.ವಿಶಾಲ್, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts