More

    ‘ಯಥಾ ಚಿತ್ತ, ತಥಾ ಚಿತ್ರ..’ ನೀವು ಯೋಚಿಸಿದ್ದೇ ಕಂಪ್ಯೂಟರ್​ನಲ್ಲಿ ಮೂಡುತ್ತೆ!

    ಫಿನ್ಲೆಂಡ್​: ‘ಯಥಾ ರಾಜಾ, ತಥಾ ಪ್ರಜಾ’ ಎಂಬುದನ್ನು ಕೇಳಿರುತ್ತೀರಿ. ಇದೊಂಥರ ‘ಯಥಾ ಚಿತ್ತ, ತಥಾ ಚಿತ್ರ’ ಎಂಬಂಥದ್ದು. ಏಕೆಂದರೆ ನೀವೇನು ಯೋಚಿಸುತ್ತೀರೋ ಅದು ಕಂಪ್ಯೂಟರ್​ ಪರದೆಯಲ್ಲಿ ಮೂಡಲಿದೆ.

    ಇಂಥದ್ದೊಂದು ಟೆಕ್ನಾಲಜಿಯನ್ನು ಯುನಿವರ್ಸಿಟಿ ಆಫ್ ಹೆಲ್ಸಿಂಕಿಯ ಸಂಶೋಧಕರು ಕಂಡು ಹಿಡಿದಿದ್ದಾರೆ. ಮನುಷ್ಯನ ಮೆದುಳಿನ ಸಂದೇಶಗಳನ್ನು ಗ್ರಹಿಸುವ ಕಂಪ್ಯೂಟರ್​, ಆತನ ಯೋಚನೆಗೆ ತಾಳೆಯಾಗುವಂಥದ್ದೇ ಚಿತ್ರವನ್ನು ಬಿಡಿಸುತ್ತದೆ ಎಂಬ ವರದಿಯೊಂದು ಸೈಂಟಿಫಿಕ್​ ರಿಪೋರ್ಟ್ಸ್​ ಜರ್ನಲ್​ನಲ್ಲಿ ಪ್ರಕಟವಾಗಿದೆ.

    ಸಂಶೋಧಕರು ಈ ಟೆಕ್ನಾಲಜಿಗೆ ನ್ಯೂರೋ ಅಡಾಪ್ಟಿವ್​ ಜನರೇಟಿವ್ ಮಾಡೆಲಿಂಗ್​ ಎಂದು ಕರೆದಿದ್ದಾರೆ. ಈ ಸಂಶೋಧನೆಗಾಗಿ ಅವರು 31 ಜನರನ್ನು ಬಳಸಿಕೊಂಡು ಅಧ್ಯಯನ ನಡೆಸಿದ್ದಾರೆ. ಅವರಿಗೆ ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​ ಮೂಲಕ ಜನರೇಟ್​ ಮಾಡಿದ ವಿವಿಧ ಮುಖಭಾವದ ಫೋಟೋಗಳನ್ನು ತೋರಿಸಿ, ಅದಕ್ಕೆ ಅವರ ಪ್ರತಿಕ್ರಿಯೆಯನ್ನು ಇಇಜಿ ಮೂಲಕ ದಾಖಲಿಸಿಕೊಳ್ಳಲಾಗಿದೆ. ನಂತರ ಅವರಿಗೆ ಕೆಲವರನ್ನು, ಉದಾಹರಣೆಗೆ ವಯಸ್ಸಾದ ಅಥವಾ ನಗುತ್ತಿರುವವರ ಮುಖ ನೆನಪಿಸಿಕೊಳ್ಳುವಂತೆ ಹೇಳಲಾಗಿದೆ. ಅದನ್ನೂ ಇಇಜಿ ಮೂಲಕ ದಾಖಲಿಸಿಕೊಳ್ಳಲಾಗಿದೆ. ಅವೆರಡನ್ನೂ ತಾಳೆ ಹಾಕಿ ಬಂದ ದತ್ತಾಂಶಗಳಿಂದ ಈ ಟೆಕ್ನಾಲಜಿ ರೂಪಿಸಲಾಗಿದೆ. ಈ ಟೆಕ್ನಾಲಜಿ ಬಳಸಿ ವ್ಯಕ್ತಿಯೊಬ್ಬ ಏನು ಯೋಚಿಸುತ್ತಾನೋ ಅದನ್ನು ಪರದೆ ಮೇಲೆ ಚಿತ್ರದ ರೂಪದಲ್ಲಿ ಮೂಡಿಸಲು ಸಾಧ್ಯವಿದ್ದು, ಅದು ಶೇ. 83 ನಿಖರತೆ ಹೊಂದಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts