More

  ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ: ಡಾ. ಸುಪ್ರಿಯಾ

  ಆನವಟ್ಟಿ: ಇಂದು ಗಂಡು-ಹೆಣ್ಣು ಸಮಾನ ಎಂದುಕೊಂಡಿದ್ದೇವೆ. ಆದರೆ ವಾಸ್ತವದಲ್ಲಿ ಹೆಣ್ಣು ಮಗು ಜನಿಸಿದರೆ ಮೂಗು ಮುರಿಯುವವರು ಸಮಾಜದಲ್ಲಿ ಇನ್ನೂ ಇದ್ದಾರೆ. ಇಂತಹ ಮನಸ್ಥಿತಿ ಪೂರ್ಣ ಪ್ರಮಾಣದಲ್ಲಿ ಅಳಿಸಿದರೆ ಮಾತ್ರ ನಿಜವಾಗಿಯೂ ಸಮಾನತೆ ಸಿಗುತ್ತದೆ ಎಂದು ಆನವಟ್ಟಿ ಸರ್ಕಾರಿ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ಸುಪ್ರಿಯಾ ಅಭಿಪ್ರಾಯಪಟ್ಟರು.
  ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ತಾಲೂಕು ಹಾಗೂ ಜಿಲ್ಲಾ ವೀರಶೈವ ಮಹಿಳಾ ಘಟಕದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಹಾಗೂ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
  ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರಾಯಿತು ಎಂಬ ತಾತ್ಸಾರ ಭಾವನೆ ಬಿಟ್ಟು, ಅವಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜತೆಗೆ ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಚಿಕ್ಕದಾಗಿ ಇರುವಾಗಲೇ ಹೆಣ್ಣು ಮಕ್ಕಳಲ್ಲಿ ಸಂಸ್ಕಾರ, ದೃಢ ಮನಸ್ಸು, ದೃಢ ನಿರ್ಧಾರ, ಒಳ್ಳೆಯ ಆಲೋಚನೆ ಜತೆಗೆ ಸಮಾಜದ ಅರಿವು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದನ್ನು ಪಾಲಕರು ಕಲಿಸಬೇಕು ಎಂದು ಸಲಹೆ ನೀಡಿದರು.
  ಕವಯಿತ್ರಿ ರೇಣುಕಮ್ಮ ಗೌಳಿ ಅವರು ಹೆಣ್ಣಿನ ಮಹತ್ವ ಕುರಿತು ಉಪನ್ಯಾಸ ನೀಡಿ ಕವನಗಳನ್ನು ವಾಚಿಸಿದರು. ಜಡೆ ಮಠದ ಶ್ರೀ ಮಹಂತ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಸುಪ್ರಿಯಾ, ಹೆಡ್ ನರ್ಸ್ ಸುನಿತಾ ಡಿಸೋಜ, ಗಣಿತ ಶಿಕ್ಷಕಿ ರೇಷ್ಮಾ ಕಿಣಿ, ಪೌರ ಕಾರ್ಮಿಕರಾದ ನಾಗಮ್ಮ ಅವರನ್ನು ಸನ್ಮಾನಿಸಲಾಯಿತು.

  ತಾಲೂಕು ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಎಂ. ಪಾಟೀಲ್, ಉಪಾಧ್ಯಕ್ಷೆ ಕವಿತಾ, ಮಾಲಾ, ರೇಖಾ, ಜಿಲ್ಲಾ ಘಟಕದ ನಿರ್ದೇಶಕರಾದ ಸುಧಾ ಕುಬಸದ್, ವಿಜಯಕುಮಾರಿ, ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ಕಾರ್ಯದರ್ಶಿಗಳಾದ ಚಂದ್ರಕಲಾ, ಸವಿತಾ, ಖಜಾಂಚಿಗಳಾದ ರೇಖಾ ಪಾಟೀಲ್, ಸದಸ್ಯರಾದ ರಾಜೇಶ್ವರಿ, ನೇತ್ರಾ, ಗೀತಾ, ಸುನೀತಾ, ಸವಿತಾ ಮುಖಂಡರಾದ ಗೀತಾ ಮಲ್ಲಿಕಾರ್ಜುನ್, ಡಾ. ಸಾವಿತ್ರಿ, ಲೋಲಾಕ್ಷಮ್ಮ, ಬಸಣ್ಣ ಭಾರಂಗಿ, ಚೌಟಿ ಚಂದ್ರಶೇಖರ್ ಪಾಟೀಲ್, ರವಿಶಂಕರ್ ಗೌಡ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts