More

    ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕತೆ ಏನು ? ಶಿಕ್ಷಣ ಸಚಿವ ಸುರೇಶ್​​ಕುಮಾರ್ ಹೇಳಿದ್ದು ಹೀಗೆ…

    ಬೆಂಗಳೂರು : ಕರೊನಾ ಹಿನ್ನೆಲೆಯಲ್ಲಿ ಸಿಬಿಎಸ್​ಸಿ ಬೋರ್ಡ್​ನಡಿ 10 ನೇ ತರಗತಿ ಓದುತ್ತಿರುವವರಿಗೆ ಕೇಂದ್ರ ಸರ್ಕಾರ ಪರೀಕ್ಷೆಗಳಿಂದ ಮುಕ್ತಿ ನೀಡಿದೆ. ಆದರೆ, ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಖುಷಿ ಪಡುವಂತಿಲ್ಲ. ಏಕೆಂದರೆ, ಸಿಬಿಎಸ್‌ಇ ಮಾದರಿಯಲ್ಲಿ ಇಲ್ಲಿ ಪರೀಕ್ಷೆ ರದ್ದು ಮಾಡುವ ಆಲೋಚನೆ ಸದ್ಯಕ್ಕಿಲ್ಲ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್​ಕುಮಾರ್ ಹೇಳಿದ್ದಾರೆ.

    ಸಿಬಿಎಸ್‌ಇ ಶಾಲೆಗಳಲ್ಲಿ 10ನೇ ತರಗತಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ, ಆಬ್ಜೆಕ್ಟೀವ್ ಕ್ರೈಟೀರಿಯಾ ಆಧರಿಸಿ ಪ್ರಮೋಟ್ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ, ಸ್ಟೇಟ್ ಬೋರ್ಡ್​ನಡಿ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳು ಇನ್ನೂ ಪುಸ್ತಕಗಳನ್ನು ಪಕ್ಕಕ್ಕಿರಿಸುವ ಚಿಂತೆ ಮಾಡಬೇಡಿ ಎನ್ನುತ್ತಾರೆ ರಾಜ್ಯ ಶಿಕ್ಷಣ ಸಚಿವರು !

    ಇದನ್ನೂ ಓದಿ: ಸಿಬಿಎಸ್​ಇ : 12 ನೇ ತರಗತಿ ಪರೀಕ್ಷೆ ಮುಂದಕ್ಕೆ, 10ನೇ ತರಗತಿ ಪರೀಕ್ಷೆ ರದ್ದು

    “ರಾಜ್ಯ ಸರ್ಕಾರ ಈ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ, ನಮ್ಮ ರಾಜ್ಯದಲ್ಲಿ ಜೂನ್ 21 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗುತ್ತವೆ. ಇದೀಗ ಏಪ್ರಿಲ್​​ನಲ್ಲಿ ನಾವಿದ್ದೇವೆ. ನಿರ್ಧಾರ ಪ್ರಕಟಿಸಲು ಸಾಕಷ್ಟು ಸಮಯದ ಅವಕಾಶ ಇದೆ. ಸದ್ಯಕ್ಕೆ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಪ್ರಮೋಟ್ ಮಾಡುವ ಆಲೋಚನೆ ನಮ್ಮ ಮುಂದಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಕರೊನಾ ಲಸಿಕೆಯ ಮೇಲೂ ಕಳ್ಳರ ಕಣ್ಣು ? ಆಸ್ಪತ್ರೆಯಿಂದ 32 ಕೋವಾಕ್ಸಿನ್ ವಯಲ್​ಗಳು ಕಾಣೆ !

    “ಸಂಸ್ಕೃತವನ್ನು ಅಧಿಕೃತ ರಾಷ್ಟ್ರೀಯ ಭಾಷೆ ಮಾಡಲು ಅಂಬೇಡ್ಕರ್ ಉದ್ದೇಶಿಸಿದ್ದರು”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts