More

    “ನಾವು ಸತ್ತ ಮೇಲೆ ನಮ್ಮ ಕುಟುಂಬದವರು ಏನು ಮಾಡಬೇಕು?” – ಸಚಿವ ನಿರಾಣಿಗೆ ಕಾರ್ಮಿಕರ ಪ್ರಶ್ನೆ

    ರಾಯಚೂರು: ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಭೇಟಿ ಸಂದರ್ಭದಲ್ಲಿ ರಾಯಚೂರಿನ ಹಟ್ಟಿ ಚಿನ್ನದ ಕಂಪನಿ ಕಾರ್ಮಿಕರು, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ನಿರಾಣಿ ಅವರನ್ನು ಘೇರಾವ್ ಮಾಡಲು ಯತ್ನಿಸಿದ ಕಾರ್ಮಿಕರು, ಸಚಿವರು ಮತ್ತು ಅಧಿಕಾರಿಗಳೊಂದಿಗೆ ವಾದ ವಿವಾದ ನಡೆಸಿದ್ದಾರೆ.

    ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಕಂಪನಿಯಲ್ಲಿ ಕೆಲಸ ಮಾಡುವಾಗ ಸತ್ತವರ ಮಕ್ಕಳಿಗೆ ಕೆಲಸ ನೀಡಿಲ್ಲ. ಈ ರೀತಿ 60 ಜನ ಸಂತ್ರಸ್ತರಿದ್ದು, ಕಳೆದ ಮೂರು ವರ್ಷಗಳಿಂದ ಯಾರಿಗೂ ಕೆಲಸ ಕೊಟ್ಟಿಲ್ಲ. ನಾವು ಸತ್ತ ಮೇಲೆ ನಮ್ಮ ಕುಟುಂಬದವರು ಏನು ಮಾಡಬೇಕು ಎಂದು ಕೇಳಿದ ಕಾರ್ಮಿಕರು, ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ವೃತ್ತಿಕೌಶಲವಿದ್ದರೆ ವಿಪುಲ ಉದ್ಯೋಗಾವಕಾಶ

    ಕಲಬುರಗಿ, ಬೀದರ್, ರಾಯಚೂರು ಹಾಗೂ ಯಾದಗಿರಿ ಗಣಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ನಿರಾಣಿ, ಶುಕ್ರವಾರ ಹಟ್ಟಿ ಚಿನ್ನದ ಗಣಿ ಕಂಪನಿಗೆ ಭೇಟಿ ನೀಡಿದರು. ಮಲ್ಲಪ್ಪ ಶಾಫ್ಟ್ ನಿಂದ ಗಣಿಗಾರಿಕೆ ಪ್ರದೇಶಕ್ಕೆ ಎಂಟ್ರಿ ಕೊಟ್ಟ ಸಚಿವರಿಗೆ ಅಲ್ಲಿನ ಸಿಬ್ಬಂದಿ ಸುರಕ್ಷತಾ ಸಾಧನ ತೊಡಿಸಿದರೆ, ಗಣಿಯೊಳಗೆ ಹೋಗಿದ್ದಾಗ ಕಾರ್ಮಿಕರು ಸಚಿವರ ಕಾಲಿಗೆ ಶೂ ತೊಡಿಸಿದರು. ಭೇಟಿಯ ವೇಳೆ ಕಾರ್ಯದರ್ಶಿ ಕುಮಾರ್ ನಾಯಕ್, ಹಟ್ಟಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್ ಹಾಗೂ ಅಧಿಕಾರಿಗಳು ಭಾಗವಹಿಸಿದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮೈಸೂರು ಮೇಯರ್ ಚುನಾವಣೆ : ಶಾಸಕ ತನ್ವೀರ್ ಸೇಠ್​ಗೆ ಡಿಕೆಶಿ ಬುಲಾವ್

    ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ

    ಮದುವೆ ಮಂಟಪವಾಗಿ ಬದಲಾದ ಜೈಲು! ವಿಚಾರಣಾಧೀನ ಖೈದಿಯ ವಧು ಯಾರು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts