More

    ರೋಹಿಣಿ ಸಿಂಧೂರಿ ಪರ ಸಮರ್ಥನೆಗೆ ಸರ್ಕಾರ ಹಿಡಿದ ದಾರಿ ಯಾವುದು?

    ಮೈಸೂರು: ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ (ಸಿಎಟಿ) ಸಲ್ಲಿಸಿರುವ ಎರಡನೇ ಅಫಿಡವಿಟ್​ನಲ್ಲೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರ್ಯದಕ್ಷತೆ ಹಾಗೂ ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಬಿ.ಶರತ್ ಅಸಮರ್ಥತೆಯನ್ನು ಎತ್ತಿ ತೋರಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆ.

    ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೈಸೂರಿನಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೆ, ಶರತ್ ಅವಧಿಯಲ್ಲಿ ಮೈಸೂರಲ್ಲಿ ಕರೊನಾ ನಿಯಂತ್ರಣ ಕಳೆದುಕೊಂಡಿತ್ತು. ಪ್ರಸ್ತುತ ಎರಡನೇ ಅಲೆ ಪ್ರಾರಂಭವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ರೋಹಿಣಿ ಸಿಂಧೂರಿ ಅವರನ್ನೇ ಜಿಲ್ಲಾಧಿಕಾರಿಯನ್ನಾಗಿ ಮುಂದುವರಿಸಲು ಅವಕಾಶ ಮಾಡಿಕೊಡಬೇಕೆಂದು ಸರ್ಕಾರ ಸಿಎಟಿ ಬಳಿ ಮನವಿ ಮಾಡಿಕೊಂಡಿದೆ.

    ಲಕ್ಷಾಂತರ ಜನರು ಸೇರುವ ದಸರಾ ಉತ್ಸವವನ್ನು ಈ ಬಾರಿ ಅತ್ಯಂತ ಸರಳವಾಗಿ ಆಚರಿಸಿ ಕರೊನಾವನ್ನು ನಿಯಂತ್ರಿಸá-ವಲ್ಲಿ ರೋಹಿಣಿ ಸಿಂಧೂರಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಶರತ್ ಅವರ ಮನವಿಯನ್ನು ಪುರಸ್ಕರಿಸಬಾರದು ಎಂದು ಸರ್ಕಾರ ಮನವಿ ಮಾಡಿದೆ. ಮನವಿ ಆಲಿಸಿರುವ ಸಿಎಟಿ ತೀರ್ಪನ್ನು ಕಾಯ್ದಿರಿಸಿದೆ.

    ಸಮವಸ್ತ್ರದಲ್ಲೇ ಹೊಟ್ಟೆಗೆ ಎಣ್ಣೆ ಇಳಿಸಿದ ಪೊಲೀಸ್​ ಸಿಬ್ಬಂದಿ! ಪ್ರಶ್ನಿಸಿದ್ದಕ್ಕೆ ಖಾಕಿ ದೌರ್ಜನ್ಯ?

    ರಾಜ್ಯದಲ್ಲಿ ಕರ್ಫ್ಯೂ ಜಾರಿ: ಶಾಲಾ-ಕಾಲೇಜು ಆರಂಭ ಆಗುತ್ತಾ? ಇಲ್ಲಿದೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts