More

    ಸೂಪರ್​ ಮಾರ್ಕೆಟ್​ಗೆ ಹೋದವರಿಗೆ ಕಾದಿತ್ತು ಶಾಕ್​: ಕಲ್ಲಂಗಡಿ ಹಣ್ಣಿನ ಬೆಲೆ ಕಂಡು ಕಣ್ಣೀರಿಟ್ಟ ಗ್ರಾಹಕರು!

    ವೆಲ್ಲಿಂಗ್ಟನ್​: ನ್ಯೂಜಿಲೆಂಡ್​ನ ನ್ಯೂವರ್ಲ್ಡ್​ ಸೂಪರ್​ಮಾರ್ಕೆಟ್​ನಲ್ಲಿ ಮಾರಾಟಕ್ಕೆ ಇಡಲಾಗಿದ್ದ ಬೃಹತ್​ ಗಾತ್ರದ ಕಲ್ಲಂಗಡಿ ಹಣ್ಣಿನ ಬೆಲೆಯನ್ನು ನೋಡಿ ಗ್ರಾಹಕರು ಅಚ್ಚರಿಗೆ ಒಳಗಾದ ಪ್ರಸಂಗವೊಂದು ಜರುಗಿದ್ದು, ಬೆಲೆಯುಳ್ಳ ಕಲ್ಲಂಗಡಿ ಹಣ್ಣಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಒಂದು ಕಲ್ಲಂಗಡಿ ಹಣ್ಣಿನ ಬೆಲೆ 46 ಡಾಲರ್​ ಆಗಿದ್ದು, ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 3,259 ರೂ. ಆಗಿದೆ. ಆದರೂ ಅನೇಕ ನೆಟ್ಟಿಗರು ನಂಬಲು ತಯಾರಾಗಿಲ್ಲ. ಬೆಲೆಯ ಸ್ಟಿಕ್ಕರ್​ನಲ್ಲಿ ಮಾನವನ ದೋಷವಿರಬಹುದನ್ನು ಊಹಿಸಬಹುದಾಗಿದೆ ಎಂದು ನೆಟ್ಟಿಗನೊಬ್ಬ ವೈರಲ್​ ಆಗಿರುವ ಫೋಟೋ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಿಜವಾಗಿಯೂ, ಇದು ತುಂಬಾ ಹಾಸ್ಯಸ್ಪದವಾಗಿದೆ. ಕಲ್ಲಂಗಡಿಯನ್ನು ಇಲ್ಲಿ ಬೆಳೆಯುವುದಿಲ್ಲವೇ? ಅವಕಾಡೋ ಬೆಲೆಗಿಂತಲೂ ಕಲ್ಲಂಗಡಿ ಬೆಲೆ ತೀರ ಕೆಟ್ಟದಾಗಿದೆ ಎಂದು ಮತ್ತೊಬ್ಬ ನೆಟ್ಟಿಗ ಬರೆದುಕೊಂಡಿದ್ದಾರೆ.

    ಸೂಪರ್​ ಮಾರ್ಕೆಟ್​ನಲ್ಲಿ ಕಲ್ಲಂಗಡಿ ಹಣ್ಣನ್ನು ಕೆ.ಜಿ.ಗೆ 3.99 ಡಾಲರ್​(282.83 ರೂ.)ಗೆ ಮಾರಾಟ ಮಾಡಲಾಗುತ್ತಿದ್ದು, ಹಣ್ಣು ಬರೋಬ್ಬರಿ 11.7 ಕೆ.ಜಿ ಇದೆ. ಅನೇಕ ಹಣ್ಣುಗಳು 3 ರಿಂದ 5 ಕೆ.ಜಿ.ತೂಗುತ್ತದೆ. ಆದರೆ ಇದು ಬರೋಬ್ಬರಿ 11 ಕೆ.ಜಿ. ಇರುವುದು ಅಚ್ಚರಿಗೆ ಕಾರಣವಾಗಿದೆ.

    ಬೆಲೆ ನೋಡಿದರೆ ಹಣ್ಣಿನ ಕಡಿಮೆ ಪೂರೈಕೆ ಪ್ರತಿಬಿಂಬಿಸುತ್ತದೆ ಎಂದು ಸೂಪರ್​ಮಾರ್ಕೆಟ್​ ವಕ್ತಾರ ಅಂಟೊಯಿನೆಟ್​ ಲೈಯರ್ಡ್​ ತಿಳಿಸಿದ್ದಾರೆ. ಒಣ ವಾತಾವರಣದಿಂದಾಗಿ ಕಲ್ಲಂಗಡಿ ಹಣ್ಣಿನ ಕೊರತೆ ಉಂಟಾಗಿದ್ದು, ಮುಂದಿನ ವಾರಗಳಲ್ಲಿ ಇದು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts