More

    ವೆಸ್ಟ್ ಇಂಡೀಸ್ ತಂಡಕ್ಕೆ ಐತಿಹಾಸಿಕ ಜಯ

    ಸೌಥಾಂಪ್ಟನ್: ಕರೊನಾ ಹಾವಳಿಯ ನಡುವೆ 117 ದಿನಗಳ ಬಳಿಕ ಪುನರಾರಂಭಗೊಂಡ ಮೊದಲ ಟೆಸ್ಟ್ ಪಂದ್ಯವೇ ರೋಚಕ ಹಣಾಹಣಿಗೆ ಸಾಕ್ಷಿಯಾಯಿತು.ದ ರೋಸ್ ಬೌಲ್ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡ 4 ವಿಕೆಟ್ ಗಳಿಂದ ಏಕದಿನ ವಿಶ್ವ ಚಾಂಪಿಯನ್ ಆತಿಥೇಯ ಇಂಗ್ಲೆಂಡ್ ತಂಡವನ್ನು ಸೋಲಿಸಿತು.ಭರ್ತಿ 200 ರನ್ ಗೆಲುವಿನ ಸವಾಲು ಬೆನ್ನಟ್ಟಿದ ವೆಸ್ಟ್ ಇಂಡೀಸ್​, ಜೋಫ್ರಾ ಆರ್ಚರ್ (45ಕ್ಕೆ 3) ಮಾರಕ ದಾಳಿ ನಡುವೆಯೂ ಜಮೈರ್ನ್​ ಬ್ಲ್ಯಾಕ್​ವುಡ್​ (95ರನ್, 154ಎಸೆತ, 12 ಬೌಂಡರಿ) ಭರ್ಜರಿ ಬ್ಯಾಟಿಂಗ್ ಫಲವಾಗಿ 64.2 ಓವರ್ ಗಳಲ್ಲಿ 6 ವಿಕೆಟ್ ಗೆ 200 ರನ್ ಪೇರಿಸಿ ಜಯದ ನಗೆ ಬೀರಿತು. ಇದರೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ 1-0 ಯಿಂದ ಮುನ್ನಡೆ ಸಾಧಿಸಿತು. ಇದಕ್ಕೂ ಮೊದಲು 8 ವಿಕೆಟ್​ಗೆ 284 ರನ್​ಗಳಿಂದ ಭಾನುವಾರ ಆಟ ಮುಂದುವರಿಸಿದ ಇಂಗ್ಲೆಂಡ್​, 313 ರನ್​ಗಳಿಗೆ 2ನೇ ಇನಿಂಗ್ಸ್​ ಮುಗಿಸಿತು. ಇದು ಕಳೆದ 20 ವರ್ಷಗಳಲ್ಲಿ ಇಂಗ್ಲೆಂಡ್​ ನೆಲದಲ್ಲಿ ವಿಂಡೀಸ್​ಗೆ ಕೇವಲ 2ನೇ ಗೆಲುವಾಗಿದೆ. ಇಂಗ್ಲೆಂಡ್ ಮೊದಲ ಇನಿಂಗ್ಸ್ 204 ರನ್ ಗಳಿಸಿದ್ದರೆ, ವೆಸ್ಟ್ ಇಂಡೀಸ್ 318 ರನ್ ಗಳಿಸಿ 114 ರನ್ ಮುನ್ನಡೆ ಸಾಧಿಸಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ಇಂಗ್ಲೆಂಡ್​ 313 ರನ್ ಪೇರಿಸಿತ್ತು. ಜುಲೈ 16 ರಿಂದ ಮ್ಯಾಂಚೆಸ್ಟರ್ ನಲ್ಲಿ ಆರಂಭವಾಗಲಿದೆ.

    ಇಂಗ್ಲೆಂಡ್​: 204 ಮತ್ತು 111.2 ಓವರ್​ಗಳಲ್ಲಿ 313, ವೆಸ್ಟ್​ ಇಂಡೀಸ್​: 318 ಮತ್ತು 64.2 ಓವರ್​ಗಳಲ್ಲಿ 6 ವಿಕೆಟ್​ಗೆ 200 (ಕ್ರೇಗ್​ ಬ್ರಾಥ್​ ವೇಟ್​ 4, ಕ್ಯಾಂಪ್​ಬೆಲ್​ 8*, ಶೈ ಹೋಪ್​ 9, ಬ್ರೂಕ್ಸ್​ 1, ಚೇಸ್​ 37, ಬ್ಲ್ಯಾಕ್​ವುಡ್​ 95, ಡೋವ್ರಿಚ್​ 20, ಹೋಲ್ಡರ್​ 14*, ಆರ್ಚರ್​ 45ಕ್ಕೆ 3, ಸ್ಟೋಕ್ಸ್​ 34ಕ್ಕೆ 2)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts