More

    ಬಂಜೆತನದ ಅಪಾಯದಲ್ಲಿದ್ದಾರೆ ಈ ರಾಜ್ಯದ ಶೇಕಡ 86ರಷ್ಟು ಪುರುಷರು..!

    ಕೊಲ್ಕತ್ತಾ: ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಜನಸಂಖ್ಯೆ ಕೂಡ ಒಂದು ಮಹತ್ವಪೂರ್ಣ ಅಂಶ. ಆದರೆ ಭಾರತದ ಈ ರಾಜ್ಯದಲ್ಲಿ ಶೇಕಡ 86ರಷ್ಟು ಪುರುಷರಿಗೆ ತಂದೆಯಾಗುವ ಭಾಗ್ಯವಿಲ್ಲ ಎಂಬ ಆತಂಕಕಾರಿ ಮಾಹಿತಿಯನ್ನು ಒಂದು ಅಧ್ಯಯನದ ವರದಿ ತೋರಿಸುತ್ತಿದೆ.

    ಪಶ್ಚಿಮ ಬಂಗಾಳದಲ್ಲಿ ಪುರುಷರ ವೀರ್ಯಾಣುಗಳ ಆರೋಗ್ಯ ಉತ್ತಮವಾಗಿಲ್ಲ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಇದರಿಂದ ಮಹಿಳೆಯರಿಗೆ ಗರ್ಭ ಧರಿಸಲು ಸಾಧ್ಯ ಆಗುವುದಿಲ್ಲ. ಅಧ್ಯಯನದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಪುರುಷರ ವೀರ್ಯಾಣು ಕಳಪೆ ಗುಣಮಟ್ಟದ್ದು ಎನ್ನುವುದು ಕಂಡುಬಂದಿದೆ. ಇದರಿಂದ ವೀರ್ಯಾಣುಗಳು ಅಂಡಾಣುವನ್ನು ಫಲವತ್ತಾಗಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೆಚ್ಚಿದ ಒತ್ತಡ, ಆಹಾರ ಮತ್ತು ಬದಲಾಗುವ ದಿನಚರಿ ವೀರ್ಯಾಣುವಿನ ಕಳಪೆ ಆರೋಗ್ಯಕ್ಕೆ ಕಾರಣವಾಗಿದೆಯಂತೆ.

    ಈ ಅಧ್ಯಯನವನ್ನು 2018 ಮತ್ತು 2021 ರ ನಡುವೆ ದೇಶಾದ್ಯಂತ ಮಾಡಲಾಗಿದ್ದು 64,452 ಜೋಡಿಗಳ ಅಧ್ಯಯನದಲ್ಲಿ ಪಶ್ಚಿದು ಬಂಗಾಳದ ಶೇಕಡ 86 ರಷ್ಟು ಪುರುಷರಲ್ಲಿ ಈ ಸಮಸ್ಯೆ ಕಂಡುಬಂದಿದೆ.

    ವೀರ್ಯಾಣುವಿನ ಈ ಅಸಹಜೆತೆಯಿಂದ ಬಂಜೆತನದ ಸಾಧ್ಯತೆ ಹೆಚ್ಚಾಗಿದೆ. 2022ರ ಜನವರಿಯಿಂದ ಅಕ್ಟೋಬರ್​ ನಡುವೆ ಸುಮಾರು 2000 ಜೋಡಿಗಳು ಮಕ್ಕಳನ್ನು ಪಡೆಯಲು ಐವಿಎಫ್​ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಈ ಅಧ್ಯಯನದ ಪ್ರಕಾರ ಐವಿಎಫ್​ ಮೊರೆ ಹೋದವರಲ್ಲಿ ಶೇಕಡ 61ರಷ್ಟು ಪುರುಷರ ವೀರ್ಯಾಣು ಆರೊಗ್ಯಕರವಾಗಿಲ್ಲ ಎನ್ನುವುದು ಕಂಡುಬಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts