More

    ಪ್ರಧಾನಿಯವರೊಂದಿಗಿನ ಸಭೆಯಲ್ಲಿ ದೀದಿ ಭಾಗವಹಿಸೋದು ಡೌಟ್​; ಅವರಿಗೆ ಅವಮಾನ ಆಗಿದೆಯಂತೆ !

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 21 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದು, ನಾಳೆ 15 ರಾಜ್ಯಗಳ ಸಿಎಂಗಳ ಜತೆ ವರ್ಚ್ಯುವಲ್​ ಸಭೆ ನಡೆಸಲಿದ್ದಾರೆ.

    ನಾಳೆ (ಜೂ.17) ಮಧ್ಯಾಹ್ನ 3ಗಂಟೆಗೆ ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ, ತೆಲಂಗಾಣ ಸೇರಿ 15 ರಾಜ್ಯಗಳ ಮುಖ್ಯಮಂತ್ರಿಗಳು ಪಿಎಂ ಜತೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಈಗ ಪಶ್ಚಿಮ ಬಂಗಾಳದಿಂದ ಅಪಸ್ವರ ಕೇಳಿಬರುತ್ತಿದೆ. ನಾಳೆ ಸಿಎಂ ಮಮತಾ ಬ್ಯಾನರ್ಜಿಯವರು ಮೋದಿಯವರೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಮೂಲಗಳು ತಿಳಿಸಿವೆ. ಮೋದಿಯವರೊಂದಿಗಿನ ಸಭೆಯಲ್ಲಿ ಮಾತನಾಡುವವರ ಪಟ್ಟಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿಯವರ ಹೆಸರು ಇಲ್ಲದಿರುವುದೇ ಈ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ವಿಧಾನಪರಿಷತ್ ಕಾಂಗ್ರೆಸ್ ಟಿಕೆಟ್‌ಗೆ 9 ಕೋಟಿ ರೂ. ಆಫರ್!

    ಟಿಎಂಸಿ ಮೂಲಗಳಿಂದಲೇ ಈ ಮಾಹಿತಿ ಸಿಕ್ಕಿದೆ. ನಾಳಿನ ಮೀಟಿಂಗ್​​ನಲ್ಲಿ ಮಾತನಾಡುವವರ ಪಟ್ಟಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹೆಸರಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ಮಮತಾ ಬ್ಯಾನರ್ಜಿಯವರ ಧ್ವನಿಯನ್ನು ಹತ್ತಿಕ್ಕುತ್ತಿದೆ. ಪಶ್ಚಿಮ ಬಂಗಾಳದ ಜನರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಕೆಲವು ಮುಖಂಡರು ತಿರುಗಿಬಿದ್ದಿದ್ದಾರೆ.
    ಪಶ್ಚಿಮಬಂಗಾಳದ ಶಿಕ್ಷಣ ಸಚಿವ ಪಾರ್ಥಾ ಚಟರ್ಜೀ ಅವರು ಟ್ವೀಟ್​ ಮಾಡಿದ್ದು, ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ಜನರನ್ನು ಅವಮಾನಿಸುತ್ತಿದೆ. ಮಮತಾ ಬ್ಯಾನರ್ಜಿಯವರಿಗೆ ಮಾತನಾಡಲು ಅವಕಾಶ ಕೊಡುತ್ತಿಲ್ಲ. ಮುಖ್ಯಮಂತ್ರಿಗಳಿಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಅವಕಾಶ ಕೊಡದೆ ಇದ್ದರೆ ಆ ವಿಡಿಯೋ ಕಾನ್ಫರೆನ್ಸ್​ಗೆ ಅರ್ಥವಿಲ್ಲ ಎಂದಿದ್ದಾರೆ. ಇದನ್ನೂ ಓದಿ: 24ಗಂಟೆಯಲ್ಲಿ 317 ಹೊಸ ಕರೊನಾ ಪ್ರಕರಣಗಳು; 108 ಮಂದಿ ಅಂತಾರಾಜ್ಯ ಪ್ರಯಾಣಿಕರು

    ಪಶ್ಚಿಮ ಬಂಗಾಳದ ಜನರು ಎಂದರೆ ಕೇಂದ್ರ ಸರ್ಕಾರಕ್ಕೆ ಯಾಕಿಷ್ಟು ತಾತ್ಸಾರ ಎಂದು ಅವರೇ ಹೇಳಬೇಕು. ಕೊವಿಡ್​-19 ಬಿಕ್ಕಟ್ಟಿನ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗೆ ಮಾತನಾಡಲು ಅವಕಾಶವಿಲ್ಲ, ಅವರ ಮಾತುಗಳೆಂದರೆ ಅಷ್ಟು ಭಯ ಎಂದಾದ ಮೇಲೆ ಯಾಕೆ ಅವರವನ್ನು ವಿಡಿಯೋ ಕಾನ್ಫರೆನ್ಸ್​ಗೆ ಆಹ್ವಾನಿಸುತ್ತೀರಿ? ಎಂದು ಟಿಎಂಸಿ ಸಂಸದ ಕಕೋಳಿ ಘೋಶ್​ ದಸ್ತಿದಾರ್​ ಟ್ವೀಟ್​ ಮಾಡಿದ್ದಾರೆ.

    ಹಾಗೇ ಇನ್ನೋರ್ವ ಮುಖಂಡ ದಿನೇಶ್​ ತ್ರಿವೇದಿ ಅವರೂ ಕೂಡ ಇದೇ ವಿಚಾರಕ್ಕೆ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕೊವಿಡ್​-19 ಹೋರಾಟದಲ್ಲಿ ಮೋದಿ ಸರ್ಕಾರದ ವೈಫಲ್ಯತೆಯನ್ನು ಮಮತಾ ಬ್ಯಾನರ್ಜಿಯವರು ಎತ್ತಿ ಹಿಡಿಯಬಲ್ಲರು. ಇದೇ ಭಯಕ್ಕೆ ಕೇಂದ್ರ ಸರ್ಕಾರ ಅವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ‘ಚಿರು 11ನೇ ದಿನದ ಪುಣ್ಯತಿಥಿಗೆ ಬನ್ನಿ, ಆದರೆ….’: ನಟ ಅರ್ಜುನ್​ ಸರ್ಜಾ ಮಾಡಿದ್ದಾರೊಂದು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts