More

    ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ಗೆ ಯಜ್ಞ ನಡೆಸಿದ ಬಿಜೆಪಿ ನಾಯಕರು

    ಪಶ್ಚಿಮ ಬಂಗಾಳ: ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲಿ ಎಂದು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಬಿಜೆಪಿ ನಾಯಕರು ಬುಧವಾರ (ಆಗಸ್ಟ್​ 23) ವಿಶೇಷ ಯಜ್ಞ ನಡೆಸಿದ್ದಾರೆ.

    ಇದನ್ನೂ ಓದಿ: VIDEO | ಆಟಗಾರ್ತಿಗೆ ಚುಂಬಿಸಿದ ಸ್ಪೇನ್‌ ಫುಟ್ಬಾಲ್ ಅಧ್ಯಕ್ಷ… ವಿವಾದದ ಬಳಿಕ ಬಹಿರಂಗವಾಗಿ ಕ್ಷಮೆಯಾಚಿಸಿದ

    ಬಿಜೆಪಿ ನಾಯಕರು ಒಟ್ಟುಗೂಡಿ ಮೇದಿನಿಪುರ ಪಟ್ಟಣದ ಬತ್ತಲ ಚಾಕ್ ಪ್ರದೇಶದಲ್ಲಿ ಮರದ ಕೆಳಗಿರುವ ಶಿವನ ವಿಗ್ರಹದ ಮುಂದೆ ಯಜ್ಞವನ್ನು ನಡೆಸಿದ್ದಾರೆ. ಪಕ್ಷದ ರಾಜ್ಯ ಸಹ ಅಧ್ಯಕ್ಷ ಸಮಿತ್ ದಾಸ್ ಮತ್ತು ಇತರ ಸದಸ್ಯರು ಪೂಜೆಯಲ್ಲಿ ಭಾಗವಹಿಸಿದ್ದರು.

    ಯಜ್ಞ ಸಲ್ಲಿಸಿದ ಬಳಿಕ ಮಾತನಾಡಿದ ಸಮಿತ್ ದಾಸ್, “ಚಂದ್ರಯಾನ-3 ಪರಿಸರದ ಕಾರಣಗಳಿಂದ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಅದಕ್ಕಾಗಿಯೇ ಎಲ್ಲಾ ಪಾಶ್ಚಿಮಾತ್ಯ ಶಕ್ತಿಗಳ ಮೇಲೆ ಮಹಾಶಕ್ತಿಯ ಅವಶ್ಯಕತೆಯಿದೆ. ಹಾಗಾಗಿ ಶಿವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ಎಲ್ಲರೂ ಬಂದಿದ್ದೇವೆ” ಎಂದು ಹೇಳಿದರು.

    ಇದನ್ನೂ ಓದಿ: ಪ್ರತಿದಿನ ಒಂದು ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವಾರು ಲಾಭ..!

    ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಸಚಿವ ದಿಲೀಪ್ ಘೋಷ್, “ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕಾಲಿಡುವ ಭಾರತದ ವಿಜಯದ ಕ್ಷಣಕ್ಕಾಗಿ ಕೇವಲ 130 ಕೋಟಿ ಜನರು ಮಾತ್ರವಲ್ಲ, ಪಾಕಿಸ್ತಾನ, ಚೀನಾ ಮತ್ತು ಇಡೀ ಜಗತ್ತು ಆಕಾಶದತ್ತ ಎದುರು ನೋಡುತ್ತಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು,(ಏಜೆನ್ಸೀಸ್).

    ರಿವೀಲ್​ ಆಯ್ತು ಬಹುನಿರೀಕ್ಷಿತ ‘ಕಾಂತಾರ 2’ ಚಿತ್ರದ ಬಜೆಟ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts