More

    ಸಿಎಎ ವಿರುದ್ಧ ಮಾತನಾಡಿ ಉಪಾಧ್ಯಕ್ಷ ಸ್ಥಾನ ಕಳೆದುಕೊಂಡ ನೇತಾಜಿ ಸಹೋದರ ಸಂಬಂಧಿ

    ಕೋಲ್ಕತ: ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷರಾಗಿದ್ದ ನೇತಾಜಿ ಸುಭಾಷ್​ ಚಂದ್ರಬೋಸ್​ ಅವರ ಸಹೋದರ ಸಂಬಂಧಿ ಚಂದ್ರಕುಮಾರ್​ ಬೋಸ್​ ಅವರನ್ನು ರಾಜ್ಯ ಪದಾಧಿಕಾರಿಗಳ ಪಟ್ಟಿಯಿಂದ ಬಿಜೆಪಿ ಕೈಬಿಟ್ಟಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಸಿಎಎ ಕಾಯ್ದೆಯನ್ನು ವಿರೋಧಿಸಿದ್ದು ಇವರ ಸ್ಥಾನಕ್ಕೆ ಸಂಚಕಾರ ತಂದಿದೆ.

    ಒಂದು ಮಾತನ್ನೂ ಹೇಳದೆ ತಮ್ಮನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ಕೈಬಿಟ್ಟ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಚಂದ್ರಕುಮಾರ್​ ಬೋಸ್​, ಮುಸ್ಲಿಂರನ್ನು ಹೊರತುಪಡಿಸಿ, ನೆರೆಹೊರೆ ರಾಷ್ಟ್ರಗಳಿಂದ ಆಶ್ರಯ ಕೇಳಿಕೊಂಡು ಬರುವ ಎಲ್ಲ ಜಾತಿಯವರಿಗೂ ಭಾರತದ ಪೌರತ್ವ ನೀಡುವ ಸಿಎಎ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವುದು ಸರಿಯಲ್ಲ ಎಂದು ಹೇಳಿದ್ದರು.

    ಇದನ್ನೂ ಓದಿ: ‘ಇಂಡಿಯಾ’ನೋ, ‘ಭಾರತ’ನೋ? ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

    ಈ ವಿಷಯವಾಗಿ ನಾನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಷಾ ಅವರಿಗೆ ಸಾಲು ಸಾಲು ಪತ್ರಗಳನ್ನು ಬರೆದಿದ್ದೆ. ಮುಸ್ಲಿಮರನ್ನು ಪ್ರತ್ಯೇಕಿಸುವುದು ಸರಿಯಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ. ಆದರೆ, ನಾನು ಬರೆದ ಪತ್ರಗಳಿಗೆ ಅವರಿಂದ ಯಾವುದೇ ಉತ್ತರ ಬರಲಿಲ್ಲ. ಹಾಗಾಗಿ ನಾನು ಮಾಧ್ಯಮಗಳ ಮೂಲಕ ಮಾತನಾಡಲು ಆರಂಭಿಸಿದೆ ಎಂದು ಹೇಳುವ ಮೂಲಕ ಚಂದ್ರಕುಮಾರ್​ ಬೋಸ್​ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

    ಜೂ. 5ರಂದು ಚಂದ್ರಗ್ರಹಣ: ಇಲ್ಲಿದೆ ಗೋಚರಿಸುವ ಸ್ಥಳ, ಸಮಯ ಮತ್ತಿತರ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts