More

    ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಸಂವಿಧಾನದ ಆಶಯ ಪೂರಕ: ಸಾಣೇಹಳ್ಳಿ ಶ್ರೀ ಅಭಿಮತ

    ಚಿತ್ರದುರ್ಗ: ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಆಡಳಿತ ನಡೆದರೆ ಕಲ್ಯಾಣ ರಾಜ್ಯದ ನಿರ್ಮಾಣ ಸಾಧ್ಯವಾಗಲಿದೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಹಾಗೂ ಮೈಸೂರು ರಂಗಾಯಣದಿಂದ ಆಯೋಜಿಸಿರುವ ಸಂವಿಧಾನ ಕುರಿತ ಸೂತ್ರಧಾರ ನಾಟಕೋತ್ಸವದ 2ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಸಂವಿಧಾನ ಏನೆಂದು ಅರಿಯದವರು ಅದರ 4 ಪುಟಗಳನ್ನು ಓದದವರು ಪ್ರತಿನಿಧಿಗಳಾಗುತ್ತಿರುವುದು ದುರದೃಷ್ಟಕರ ಸಂಗತಿ. ಹಿಂದೆಲ್ಲ ಕಾನೂನು ಪರಿಣಿತರು, ಉನ್ನತ ಪದವೀಧರರು, ಸಮಾಜ ಸೇವಕರು ರಾಜಕಾರಣಕ್ಕೆ ಬರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ ಎಂದು ಹೇಳಿದರು.

    ಡಾ.ಬಿ.ಆರ್.ಅಂಬೇಡ್ಕರ್ ವಿಶ್ವ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಇದರ ಆಶಯಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ಅವರಂಥ ಮಹಾನ್ ದಾರ್ಶನಿಕರ ಬದುಕು ನಮಗೆ ಆದರ್ಶವಾಗಬೇ ಕು. ನಾಳಿನ ನಾಡಿನ ಭವಿಷ್ಯ ಕಟ್ಟುವ ವಿದ್ಯಾರ್ಥಿಗಳು ಪ್ರತಿನಿಧಿಗಳ ಆಯ್ಕೆಯಲ್ಲಿ ಎಡವಿದರೆ ನಾಡು ಕಟುಕರ ಬೀಡು ಆದೀತು ಎಂದು ಶ್ರೀಗಳು ಎಚ್ಚರಿಸಿದರು.

    ಪರಿಷತ್ ಜಿಲ್ಲಾ ಸಂಚಾಲಕ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ದೇಸಿ ಹಾಗೂ ವಿದೇಶಿ ದಾಸ್ಯದಿಂದ ನಮ್ಮನ್ನು ಬಿಡುಗಡೆಗೊಳಿಸಿದ್ದು ಸಂವಿಧಾನ. ಯುವ ಪೀಳಿಗೆ ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇದ್ದರೆ ಭವಿಷ್ಯ ಕರಾಳವಾಗುವ ಸಾಧ್ಯತೆ ಇದೆ ಎಂದರು.

    ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ, ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಪತ್ರಕರ್ತ ಉಜ್ಜಿನಪ್ಪ, ನಿವೃತ್ತ ಅಧಿಕಾರಿಗಳಾದ ಬಿ.ಪಿ.ಪ್ರೇಮ್‌ನಾಥ್, ಬಿ.ಆರ್.ಶಿವಕುಮಾರ್, ಪಿಡಬ್ಲ್ಯೂಡಿ ಎಇಇ ಡಿ.ಎನ್.ಪಾತಣ್ಣ, ಪ್ರಾಚಾರ್ಯರಾದ ಕೃಷ್ಣಪ್ಪ, ಎಚ್.ತಿಪ್ಪೇಸ್ವಾಮಿ, ಟಿ.ದುರ್ಗೇಶ್, ತುರುವನೂರು ಜಗನ್ನಾಥ್, ಕೆರೆಯಾಗಳಹಳ್ಳಿ ತಿಪ್ಪೇಸ್ವಾಮಿ, ವಕೀಲ ಬೆನಕನಹಳ್ಳಿ ಚಂದ್ರಪ್ಪ ಮತ್ತಿತರರು ಇದ್ದರು. ಬಿಸ್ನಹಳ್ಳಿ ಜಯಪ್ಪ ಸ್ವಾಗತಿಸಿ, ಆರ್.ಚಂದ್ರಶೇಖರ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts