More

    ಜಿಂಬಾಬ್ವೆ ವಿರುದ್ಧ ಪಾಕ್​ಗೆ ಹೀನಾಯ ಸೋಲು: ವೈರಲ್​ ಆಗ್ತಿದೆ 7 ವರ್ಷದ ಹಿಂದೆ ಬಾಬರ್​ ಅಜಾಮ್​ ಮಾಡಿದ್ದ ಟ್ವೀಟ್!​

    ಇಸ್ಲಮಾಬಾದ್​: ಕ್ರಿಕೆಟ್​ನಲ್ಲಿ ಸಾಕಷ್ಟು ಪಳಗಿ ವಿಶ್ವದ ಬಲಿಷ್ಟ ತಂಡಗಳಲ್ಲಿ ಒಂದೆನಿಸಿಕೊಂಡಿರುವ ಪಾಕಿಸ್ತಾನ, ಕ್ರಿಕೆಟ್​ನಲ್ಲಿ ಅಂಬೆಗಾಲು ಇಡುತ್ತಿರುವ ಜಿಂಬಾಬ್ವೆ ವಿರುದ್ಧ ಟಿ20 ವಿಶ್ವಕಪ್​ ಟೂರ್ನಿಯ ಪಂದ್ಯದಲ್ಲಿ ಕೇವಲ 1 ರನ್​ ಅಂತರದಲ್ಲಿ ಸೋತು ತೀವ್ರ ಮುಖಭಂಗ ಅನುಭಿಸಿದೆ.

    ಅ.23ರಂದು ನಡೆದ ಸೂಪರ್​ 12 ಹಂತದ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋತು ಸುಣ್ಣವಾಗಿದ್ದ ಪಾಕಿಸ್ತಾನಕ್ಕೆ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಶಾಕ್​ ನೀಡಿದ್ದು, ಟೂರ್ನಿಯಿಂದಲೇ ಪಾಕ್​ ತಂಡ ಹೊರಬಿದ್ದಿದೆ. ಈ ಮೂಲಕ ವಿಶ್ವದ ಎದರು ಪಾಕ್​ ತಂಡ ಭಾರಿ ಮುಜುಗರಕ್ಕೀಡಾಗಿದೆ. ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮ ನಿರ್ವಹಣ ತೋರುತ್ತಿದ್ದ ಪಾಕ್​, ಜಿಂಬಾಬ್ವೆ ವಿರುದ್ಧ ಸೋತಿದ್ದು ನಿಜಕ್ಕೂ ಅಚ್ಚರಿ ಎಂಬ ಮಾತುಗಳು ಕೇಳಿಬರುತ್ತಿವೆ.

    ಪಂದ್ಯದ ಬಗ್ಗೆ ಈಗಲೂ ಸಾಕಷ್ಟು ಚರ್ಚೆಯಾಗುತ್ತಿದ್ದು, ಇದರ ನಡುವೆ ಪಾಕಿಸ್ತಾನದ ನಾಯಕ ಬಾಬರ್​ ಅಜಾಮ್​ ಅವರು ಈ ಹಿಂದೆ ಜಿಂಬಾಬ್ವೆ ಬಗ್ಗೆ ಮಾಡಿದ್ದ ಟ್ವೀಟ್​ ಒಂದು ವೈರಲ್​ ಆಗಿದೆ. ಟ್ವೀಟ್​ನಲ್ಲಿ ಬಾಬರ್​ ವೆಲ್​ಕಮ್​ ಜಿಂಬಾಂಬ್ವೆ ಎಂದು ಬರೆದಿದ್ದಾರೆ. ಆದರೆ, ಜಿಂಬಾಬ್ವೆ ಪದದಲ್ಲಿ ಅಕ್ಷರ ದೋಷವಿದೆ. ಜಿಂಬಾಬ್ವೆ (Zimbabwe) ಅಂತಾ ಬರೆಯುವ ಬದಲು ಜಿಂಬಾವೇ (Zimbaway) ಎಂದು ಬರೆದಿದ್ದಾರೆ. ಇದೀಗ ಈ ಟ್ವೀಟ್​ ವೈರಲ್​ ಆಗಿದ್ದು, ನೆಟ್ಟಿಗರು ಮೀಮ್ಸ್​ಗಳನ್ನು ಹರಿಬಿಡುವ ಮೂಲಕ ಬಾಬರ್​ ಅಜಾಮ್​ ಅವರ ಕಾಲೆಳೆಯುತ್ತಿದ್ದಾರೆ. ಇನ್ನೆಂದು ಬಾಬರ್​ ಜಿಂಬಾಬ್ವೆ ಹೆಸರನ್ನು ಮರೆಯುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಜಿಂಬಾಬ್ವೆ ವಿರುದ್ಧ ಪಾಕ್​ಗೆ ಹೀನಾಯ ಸೋಲು: ವೈರಲ್​ ಆಗ್ತಿದೆ 7 ವರ್ಷದ ಹಿಂದೆ ಬಾಬರ್​ ಅಜಾಮ್​ ಮಾಡಿದ್ದ ಟ್ವೀಟ್!​

    ಲಾಹೋರ್‌ನ ಗಡಾಫಿ ಸ್ಟೇಡಿಯಂ ಬಳಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ 2009 ರಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕ್​ ತಂಡದ ಪ್ರವಾಸವನ್ನು ಅನೇಕ ರಾಷ್ಟ್ರಗಳು ರದ್ದು ಮಾಡಿದ್ದವು. ಸುಮಾರು 6 ವರ್ಷಗಳ ಕಾಲ ಯಾವೊಂದು ರಾಷ್ಟ್ರ ಕೂಡ ಪಾಕ್​ ನೆಲದಲ್ಲಿ ಕ್ರಿಕೆಟ್​ ಆಡಿರಲಿಲ್ಲ. ಆದರೆ, 2015ರಲ್ಲಿ ಜಿಂಬಾಬ್ವೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಿ ಟೆಸ್ಟ್ ಪಂದ್ಯವಾಡಿತ್ತು. ಈ ವೇಳೆ ಬಾಬರ್​ ಅಜಾಮ್​ ಟ್ವೀಟ್​ ಮಾಡಿ ಜಿಂಬಾಂಬ್ವೆ ತಂಡಕ್ಕೆ ಸ್ವಾಗತ ಕೋರಿದ್ದರು. ಅದೇ ಟ್ವೀಟ್​ ಈಗ ವೈರಲ್​ ಆಗಿದೆ. (ಏಜೆನ್ಸೀಸ್​)

    ಜಿಂಬಾಬ್ವೆ ಎದುರು ಪಾಕ್​ ತಂಡಕ್ಕೆ ಸೋಲು! ಹತಾಶೆಯಿಂದ​ ಭಾರತದ ವಿರುದ್ಧ ನಾಲಿಗೆ ಹರಿಬಿಟ್ಟ ಅಖ್ತರ್​

    6 ವರ್ಷದ ಹಿಂದಿನ ನಕಲಿ ಮಿ. ಬೀನ್ ಪ್ರಕರಣ: ಟಿ20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಜಿಂಬಾಬ್ವೆ!

    ಯುವಿ ದಾಖಲೆ ಮುರಿದಿದ್ದರ ಬಗ್ಗೆ ನಿಮಗೆ ಏನನಿಸುತ್ತೆ? ರೋಹಿತ್​ ಶರ್ಮ ಕೊಟ್ಟ ಉತ್ತರ ಹೀಗಿತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts