More

    ಸುತ್ತೂರು ಜಾತ್ರಾ ಮಹೋತ್ಸವದ ರಥಕ್ಕೆ ಸ್ವಾಗತ

    ಕುಶಾಲನಗರ: ವಿಶ್ವವಿಖ್ಯಾತ ಸುತ್ತೂರು ಜಾತ್ರಾ ಮಹೋತ್ಸವ ಫೆ.6 ರಿಂದ 11 ರವರೆಗೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಹೆಚ್ಚಿನ ಜನರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂಬ ಮಹದಾಸೆಯಿಂದ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿರುವ ರಥ ಸೋಮವಾರ ಕುಶಾಲನಗರಕ್ಕೆ ಆಗಮಿಸಿದಾಗ ಶ್ರೀಮಠದ ಭಕ್ತರು ಸ್ವಾಗತಿಸಿದರು.

    ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ, ಜಾತ್ರಾ ಮಹೋತ್ಸವ ಫೆ.6 ರಿಂದ 11 ರವರೆಗೆ ನಡೆಯಲಿದ್ದು ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಅಷ್ಟೂ ಜನರಿಗೂ ಅಷ್ಟೇ ಶಿಸ್ತು ಹಾಗೂ ಶ್ರದ್ಧೆಯಿಂದ ಪ್ರಸಾದ ವ್ಯವಸ್ಥೆ ಶ್ರೀಮಠದಿಂದ ನಡೆಯುವುದು ವಾಡಿಕೆ. ಹಾಗಾಗಿ ಈ ಬಾರಿಯೂ ಅಪಾರ ಭಕ್ತರು ಪಾಲ್ಗೊಳ್ಳಬೇಕೆಂಬುದು ಸುತ್ತೂರು ಶ್ರೀಗಳ ಆಶಯವಾಗಿರುವುದರಿಂದ ನಾಡಿನ ಸಮಸ್ತ ಜನತೆ ಜಾತಿ, ವರ್ಗ, ಭೇದವಿಲ್ಲದೆ ಆಗಮಿಸಬೇಕೆಂದು ಕೋರಿದರು.

    ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಸಂಚಾರ ಠಾಣೆ ನಿರೀಕ್ಷಕ ಚಂದ್ರಪ್ಪ, ಜಿಲ್ಲಾ ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ, ವೀರಶೈವ ನೌಕರರ ಸಂಘದ ಜಿಲ್ಲಾಧ್ಯಕ್ಷ ನಂದೀಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್.ಚಂದ್ರಮೋಹನ್, ಪಿ.ಮಹದೇವಪ್ಪ, ಸಾಂಬಶಿವಮೂರ್ತಿ, ಉದಯಕುಮಾರ್, ಕುಶಾಲನಗರ ಪುರಸಭಾ ಸದಸ್ಯ ತಿಮ್ಮಪ್ಪ, ಎಂ.ಎಸ್.ಶಿವಾನಂದ, ಹರೀಶ್, ಪರಮೇಶ್, ಗಣೇಶ್, ಕಾರು ಚಾಲಕರ ಸಂಘದ ಉಪಾಧ್ಯಕ್ಷ ಸೋಮಣ್ಣ, ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ಸಮಿತಿ ಸಂಚಾಲಕ ಪಂಚಾಕ್ಷರಿ, ಶ್ರೀಕಂಠಸ್ವಾಮಿ, ಗಿರೀಶ್, ಸೋಮಶೇಖರ್, ಮಹದೇವಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts