More

    ತೂಕ ನಷ್ಟ, ಹೃದಯ, ಮಧುಮೇಹಕ್ಕೆ ಸೋಯಾ ಚಂಕ್ಸ್​​ ಸೇವಿಸಿ, ಆರೋಗ್ಯಕ್ಕಿದೆ ಹತ್ತು ಹಲವು ಲಾಭ..!

    Benifits Of Soya Chunks: ನೀವು ತೂಕ ನಷ್ಟದ ಹಾದಿಯಲ್ಲಿದ್ದರೆ ಸೋಯಾಬೀನ್‌ ಅತ್ಯುತ್ತಮವಾದ ಆಹಾರ ಎಂದೇ ಹೇಳಬಹುದು. ಇದರಲ್ಲಿ ಆರೋಗ್ಯಕರ ಪ್ರಮಾಣದ ನಾರಿನಾಂಶವು ನಿಮ್ಮನ್ನು ದೀರ್ಘಾವಧಿಯವರೆಗೆ ತೃಪ್ತಿ ಪಡಿಸುತ್ತದೆ. ತೂಕ ನಷ್ಟಕ್ಕೆ, ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವನ್ನು ಶಿಫಾರಸು ಮಾಡಲಾಗುತ್ತದೆ. ಇದಕ್ಕಾಗಿ ಸೋಯಾ ಚಂಕ್ಸ್ ಅನ್ನು ಆಹಾರದಲ್ಲಿ ಸೇರಿಸಬಹುದು. ಪ್ರೋಟೀನ್‌ ಹೊರತಾಗಿ, ಇದು ಜೀವಸತ್ವಗಳು, ಖನಿಜಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಸೋಯಾಬೀನ್ ನಲ್ಲಿ ನಾರಿನಂಶ ಹೆಚ್ಚಿದ್ದು, ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ.


    ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಸ್ನಾಯುಗಳ ಬೆಳವಣಿಗೆಗೂ ಸಹಕಾರಿಯಾಗುತ್ತದೆ.


    ಸೋಯಾವನ್ನು, ಸೋಯಾ ಹಿಟ್ಟು, ಸೋಯಾ ಬೀನ್‌ ಎಣ್ಣೆ, ಸೋಯಾ ಹಾಲು, ಸೋಯಾ ಸಾಸ್‌, ಸೋಯಾ ಪ್ರೋಟೀನ್‌ಗಳಂತೆ ಸೇವನೆ ಮಾಡಬಹುದು. ಸೋಯಾ ಬೀನ್‌ ಆರೋಗ್ಯಕರವಾದ ಒಮೆಗಾ 6 ಕೊಬ್ಬಿನಾಮ್ಲಗಳಾದ ಲಿನೋಲೆನಿಕ್‌ ಆಮ್ಲ ಮತ್ತು ಆಲ್ಪಾ ಲಿನೋಲೆನಿಕ್‌ ಆಮ್ಲಗಳ ಉತ್ತಮ ಮೂಲವನ್ನು ಹೊಂದಿದೆ. ಇದು ಅಪಧಮನಿಯ ಗೋಡೆಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.


    ಆದ್ದರಿಂದ ಇದು ಮುಂದೆ ಎದುರಾಗಬಹುದಂತಹ ಹೃದ್ರೋಗದಿಂದಲೂ ನಿಮ್ಮನ್ನ ಪಾರು ಮಾಡುತ್ತದೆ. ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಈ ಸೋಯಾ ಬೀನ್ ದೀಘಾಕಾಲದವರೆಗೆ ಹೊಟ್ಟೆಯನ್ನು ತುಂಬಿಸುತ್ತದೆ. ಇದರ ಪರಿಣಾಮ ನೀವು ಹೆಚ್ಚೆಚ್ಚು ತಿನ್ನುವುದನ್ನು ತಡೆಯುತ್ತದೆ.


    ತೂಕ ಇಳಿಸಿಕೊಳ್ಳಲು ಸೋಯಾ ಚಂಕ್‌ ನ ಕರಿ ಮಾಡಬಹುದು. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸೋಯಾ ಚಂಕ್ಸ್ ಕರಿಯನ್ನು ಮಧ್ಯಾಹ್ನ ಅಥವಾ ರಾತ್ರಿಯ ಊಟದ ಜೊತೆಗೆ ಸೇವಿಸಬಹುದು.

    ಇದನ್ನು ಮಾಡಲು ನೀವು ಆಲಿವ್ ಎಣ್ಣೆ ಅಥವಾ ತುಪ್ಪವನ್ನು ಬಳಸಬಹುದು
    ಸೋಯಾ ಬೀನ್‌ನ ಈಸ್ಟ್ರೊಜೆನ್ ಆಗೊನಿಸ್ಟ್ ಮತ್ತು ಈಸ್ಟ್ರೊಜೆನ್‌ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇನ್ನು ಪಾಲಿಫಿನಾಲಿಕ್‌ ಸಂಯುಕ್ತಗಳಾದ ಸೋಯಾಬೀನ್‌ನಲ್ಲಿರುವ ಐಸೊಫ್ಲಾವೊನ್‌ಗಳು ಮಧುಮೇಹದ ಅಪಾಯವನ್ನು ಕಡಿಮೆ ಮ,ಆಡಲು ಸಹಕಾರಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts