More

    ಈ ರಾಶಿಯವರಿಗೆ ದೇವರು ಏನನ್ನೋ ಕೊಡಲು ತೀರ್ಮಾನಿಸಿದ್ದಾನೆ ಎಂದೇ ಅರ್ಥ: ವಾರಭವಿಷ್ಯ

    ಈ ರಾಶಿಯವರಿಗೆ ದೇವರು ಏನನ್ನೋ ಕೊಡಲು ತೀರ್ಮಾನಿಸಿದ್ದಾನೆ ಎಂದೇ ಅರ್ಥ: ವಾರಭವಿಷ್ಯಮೀನ ರಾಶಿ

    ಗುರುವೂ ಇನ್ನೇನು ಇದೇ ತಿಂಗಳ 21ರಂದು ದ್ವಿತೀಯಕ್ಕೆ ಬಂದು ರಾಹು ಸಂಯೋಜನೆಯಲ್ಲಿ ಇದ್ದರೂ ನಿಮ್ಮನ್ನು ಕಾಪಾಡಲು ಸಮರ್ಥನಾಗಿರುತ್ತಾನೆ. ದ್ವಾದಶದಲ್ಲಿ ಶನಿ ಇದ್ದು, ಶನಿಯ ಸಾಡೇಸಾತಿ ಸಂಚಾರದಲ್ಲಿ ಅಲ್ಪ ಮಾತು, ಮಿತವಾದ ಆಹಾರ, ಒಳ್ಳೆಯ ಮನಸ್ಸು, ಉಪಕಾರ ಮಾಡಿದವರನ್ನು ಸ್ಮರಿಸುವ ಬುದ್ಧಿ ಇದ್ದರೆ ದೈವವೇ ಬಾಗಿಲು ತೆರೆದು, ಧನವು ಸಿಕ್ಕು ಒಳ್ಳೆಯ ಪರಿವರ್ತನೆ ಕಾಣಬಹುದು.

    ಕುಂಭ ರಾಶಿ

    ಗುರುವು ಮೂರನೇ ಮನೆಗೆ ಬಂದು ರಾಹು ಸಂಯೋಜನೆಯಲ್ಲಿ ಇರುತ್ತಾನೆ. ಇಷ್ಟು ದಿನ ಶನಿಯು ಪ್ರಭಾವ ತಾಪ ತೋರಿಸಲು ಆಗಲಿಲ್ಲ. ಅದೇ ದೇವ ಪ್ರಾರ್ಥನೆಯಿಂದ ಮುಂದುವರಿದರೆ ಸರ್ವ ಸಂಕಟ ಪರಿಹಾರವಾಗುತ್ತದೆ. ಗುರು ಪರಿಹಾರಕ್ಕೆ ಗುರು ಚರಿತ್ರೆ 14ನೇ ಅಧ್ಯಾಯ ಓದಿದರೆ ಶನಿಯ ಶಾಂತನಾಗಿ ಗುರುವೂ ನಿಮ್ಮನ್ನು ಮುಂದೆ ಸಾಗಿಸುತ್ತಾನೆ. ವ್ಯಯ ಅಧಿಕವಾಗಿದ್ದು, ಲಾಭದ ಅಂಶ ಕಡಿಮೆಯಾಗುತ್ತದೆ.

    ಮಕರ ರಾಶಿ

    ಮಕರ ರಾಶಿಗೆನೆಮ್ಮದಿ ಕೊಡುವವನು ಭಗವಂತನೊಬ್ಬನೆ. ಮೊದಲು ಜನ್ಮ ಕೊಟ್ಟ ತಂದೆ- ತಾಯಿಗೆ ನಮಸ್ಕರಿಸಿ. ನಿಮ್ಮನ್ನು ನೀವು ತಿದ್ದಿಕೊಂಡು ದೈನಂದಿನ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೊದಲು ಶನಿ ಸ್ತೋತ್ರ ಪಾರಾಯಣ ಮಾಡಿ. ನಂತರ ದಿನವನ್ನು ಆರಂಭ ಮಾಡಿ. ಶನಿ ಗುಡಿಗೆ ಹೋಗಿ ಬೆಲ್ಲವನ್ನು ನೀಡಿ. ತೈಲ ತಿಲ ದೀಪ ಹಚ್ಚಿರಿ. ನೀವು ಕೂಡ ಎಲ್ಲರಂತೆ ಸುಖವಾಗುತ್ತೀರ.

    ಧನುರ್ ರಾಶಿ

    ನಾವು ಕಷ್ಟಪಟ್ಟು, ಇಷ್ಟಪಟ್ಟ ಕೆಲಸ ಸಿಗದಿದ್ದರೆ ದೈವ ನಿಯಾಮಕ ಎಂದೇ ತಿಳಿಯಬೇಕು. ನಮಗಾಗಿ ದೇವರು ಏನನ್ನೋ ಕೊಡಲು ತೀರ್ವನಿಸಿದ್ದಾನೆ ಎಂದೇ ಅರ್ಥ. ಅದು ಶುಭವು ಇರುತ್ತದೆ. ನಾವು ಮನಸ್ಸಿನಲ್ಲಿ ನೊಂದುಕೊಂಡರೆ ಆತ್ಮದಲ್ಲಿ ಇರುವ ಪರಮಾತ್ಮನನ್ನು ನಿಂದೆ ಮಾಡಿದಂತೆ. ನಕಾರಾತ್ಮಕ ಯೋಚನೆ ಬೇಡ. ಇನ್ನೇನು ಪಂಚಮದಲ್ಲಿ ಗುರು ಬಂದು ಅಧಿಕ ಧನ, ಅಧಿಕಾರ, ಸುಖ ಸಂತೋಷ ನೀಡುತ್ತಾನೆ.

    ವೃಶ್ಚಿಕ ರಾಶಿ

    ಸಾಗರಕ್ಕೆ ಹೋಗಿ ಕುಡಿವ ನೀರು ಸಿಗಲಿಲ್ಲ ಎಂದುಕೊಂಡರೆ ಏನು ಉಪಯೋಗ? ಸಾಗರದಲ್ಲಿ ಮೊಸಳೆ ಇರುತ್ತದೆ. ನಮ್ಮನ್ನು ನುಂಗುತ್ತದೆ. ಕಂಟಕ ಬಂದಾಗ ಸಂಕಟವಾಗುತ್ತದೆ. ಇದರ ಪರಿಹಾರಕ್ಕೆ ಏಕೈಕ ದಾರಿ ದೈವ ಒಬ್ಬನೇ. ಸುಬ್ರಹ್ಮಣ್ಯನನ್ನು ನಿತ್ಯವೂ ಪೂಜಿಸಿ. ಕೆಲಸ ಕಾರ್ಯ ಧನ ಲಾಭ ಆಗುತ್ತದೆ. ಸುಖ ಬರಬೇಕಾದರೆ, ಸಂಪತ್ತು ಒಲಿಯಬೇಕಾದರೆ ಶ್ರದ್ಧೆಯಿಂದ ದೇವರನ್ನು ನೆನೆಯಬೇಕು.

    ತುಲಾ ರಾಶಿ

    ತುಲಾ ಎಂದರೆ ಮನುಷ್ಯನ ಪಾಪ ಪುಣ್ಯವನ್ನು ದೇವರೇ ತೂಕ ಹಾಕುತ್ತಾನೆ ಎಂದು ಅರ್ಥೈಸಿಕೊಳ್ಳಬೇಕು. ಏನು ಬೇಕಾದರೂ ತಕ್ಕಡಿಯಲ್ಲಿ ತೂಗಿ ಸಂಪತ್ತನ್ನು ಕೊಡುವ ರಾಶಿ. ಇನ್ನೇನು ಗುರು ಸಪ್ತಮಕ್ಕೆ ಬರದಲಿದ್ದಾನೆ. ಸುಖ, ಸಂತೋಷ, ಮನೆಯಲ್ಲಿ ಮಂಗಳ ಕಾರ್ಯ, ಧನಲಾಭವಾಗಿ ಎಲ್ಲವೂ ಶುಭವೇ ಆಗುತ್ತದೆ. ಲಲಿತಾ ಸಹಸ್ರಾಮ ಪಾರಾಯಣ . ಸಕಲ ಸಂಪತ್ತು ಕೊಡುತ್ತದೆ.

    ಕನ್ಯಾ ರಾಶಿ

    ಮನುಷ್ಯನು ಬದುಕಲು ಎಲ್ಲ ಗ್ರಹ ಉಚ್ಚ ಆಗಿರಬೇಕು ಎಂದೇನಿಲ್ಲ. ಒಂದೇ ಒಂದು ಗ್ರಹ ಚೆನ್ನಾಗಿದ್ದರೆ ಎಲ್ಲ ಸುಖ ಅನುಭವಿಸಲು ಸಾಕು. ಗುರು ಅಷ್ಟಮಕ್ಕೆ ಹೊರಡುತ್ತಾನೆ. ರೋಗ ಋಣ ಭಾದೆ ತಪ್ಪಿಸಿಕೊಳ್ಳಲು ಅನಂತವಾಗಿ ಉಮಾಮಹೇಶ್ವರನನ್ನು ಪೂಜಿಸಿ. ಸಾಂಬಸದಾಶಿವನನ್ನು ಪೂಜಿಸಿ.

    ಸಿಂಹ ರಾಶಿ

    ಎಲ್ಲವೂ ಇದೆ ಆದರೆ ಏನು ಕಾಣುವುದಿಲ್ಲ. ಸಪ್ತಮ ಶನಿ ಅಷ್ಟಮಕ್ಕೆ ಗುರು ಬಂದು ಸಮಸ್ಯೆಯ ಸುರಿಮಳೆ ಇದೆ. ಪರಿಹಾರ ಬೇಕಾದರೆ ದೈವವನ್ನು ಪೂಜಿಸಬೇಕು. ವ್ಯಗ್ರನು ದುರ್ಗೆಗೆ ತಾನೇ ವಾಹನವಾಗಿ ಮೃಗವೇ ತಾಯಿಯ ಸೇವೆ ಮಾಡಿದ್ದನ್ನು ನೆನೆಸಿಕೊಂಡು, ದುರ್ಗ- ಸೂರ್ಯ ಪೂಜೆಯನ್ನು ಮಾಡಿದರೆ ಎಲ್ಲ ಕೆಲಸ ನಿಮ್ಮಂತೆ ತಿರುಗಿ 9ನೇ ಮನೆಗೆ ಗುರು ಬಂದಾಗ ಎಲ್ಲವೂ ನಿಮ್ಮಂತೆ ನಡೆಯುತ್ತದೆ.

    ಕಟಕ ರಾಶಿ

    ಕಟಕ ರಾಶಿಯವರಿಗೆ ಇದೇ ತಿಂಗಳ 21ರಿಂದ ದಶಮಕ್ಕೆ ಗುರು ಬಂದು ರಾಹುಗ್ರಸ್ಥನಾಗುವುದರಿಂದ ಅಲ್ಪ ಗುರು ಬಲ ಇರುತ್ತದೆ. ಆದರೂ ಕಟಕ ರಾಶಿಯವರು ಈಶ್ವರನನ್ನು ಪೂಜಿಸುತ್ತ ಇದ್ದರೆ ಅನಾರೋಗ್ಯ ಇರುವುದಿಲ್ಲ. ಈಶ್ವರನನ್ನು ಪೂಜಿಸಿದಲ್ಲಿ ನವಗ್ರಹಗಳನ್ನೇ ಗೆಲ್ಲಬಹುದು. ದೇಹವು ದಣಿದಾಗ ವಿಶ್ರಾಂತಿ ಬೇಕು. ಅದನ್ನು ಪಾಲನೆ ಮಾಡಿದರೆ ಆರೋಗ್ಯ ಚೆನ್ನಾಗಿದ್ದು, ದೇಹಕ್ಕೆ ಮನಸ್ಸಿಗೆ ಉಲ್ಲಾಸವು ಇರುತ್ತದೆ.

    ಮಿಥುನ ರಾಶಿ

    ಮಿಥುನ ರಾಶಿಯವರಿಗೆ ವಸಂತ ನವರಾತ್ರಿಯು ವಿಶೇಷ ಫಲದಿಂದ ಕೂಡಿಕೊಂಡು ಬಂದಿರುತ್ತದೆ. ಓದುವಾಗ ವಿದ್ಯಾರ್ಥಿಯು ಶ್ರಮ ಪಡದೆ ಇದ್ದರೆ ಪರೀಕ್ಷೆ ಎದುರಿಸಲು ಸಾಧ್ಯವಿಲ್ಲ. ಹಾಗೆಯೇ ಜೀವನದ ಪರೀಕ್ಷೆಯನ್ನು ಎದುರಿಸಲು ಮಹಾವಿಷ್ಣುವನ್ನು, ಶ್ರೀರಾಮಚಂದ್ರನನ್ನು ಪೂಜಿಸಲೇಬೇಕು. ಆಗ ಮಾತ್ರ ನಿಮ್ಮ ಕೆಲಸಗಳು ನೀವು ಅಂದುಕೊಂಡಂತೆ ನಡೆಯುತ್ತದೆ.

    ವೃಷಭ ರಾಶಿ

    ಇದೇ ತಿಂಗಳ 6ರಿಂದ ಶುಕ್ರ ಸ್ವಂತ ಮನೆಯಲ್ಲಿ ಇದ್ದು ಕೆಲವೊಂದು ಸಮಸ್ಯೆ ಪರಿಹಾರ ಕಾಣದೆ ಮಾನಸಿಕವಾಗಿ ಬೇಜಾರಾಗುತ್ತದೆ. ಅಂದುಕೊಂಡ ಕೆಲಸಗಳು ನಿಮ್ಮಂತೆ ನಡೆಯುವುದಿಲ್ಲ. ಆದರೂ ಶನಿಯು ಸಕ್ಷೇತ್ರದಲ್ಲಿ ಇರುವುದರಿಂದ ಬಾಧೆಗಳು ಬಂದರೂ ನಿಮ್ಮ ನಡೆಯನ್ನು ನೀವು ತಿದ್ದಿಕೊಂಡರೆ ರಾಜ್ಯ, ರಾಷ್ಟ್ರ ಕಟ್ಟಬಹುದು. ದುರ್ಗೆಯನ್ನು ಪೂಜಿಸಿ ಶತ್ರುಗಳನ್ನು ಜಯಿಸಿ.

    ಮೇಷ ರಾಶಿ

    ಜೀವನ ಸಾಕಾರಗೊಳಿಸಲು ಗುರು ಗಣೇಶನ ಪೂಜೆ ಅತ್ಯಗತ್ಯ. ಗುರು ಮುಂದೆ ಸಾಗಲು ಕೆಲವೇ ದಿನ ಬಾಕಿ ಇದ್ದು ಮೇಷಕ್ಕೆ ಗುರು ಬಂದರೂ ರಾಹುವಿನ ಸಂಯೋಜನೆಯಲ್ಲಿ ಇರುತ್ತಾನೆ. ಜನ್ಮ ಗುರುವು ಬೇಕಾದವರಿಂದ, ನಿಮಗೆ ಹತ್ತಿರದ ಬಂಧುಗಳಿಂದ ಕೆಲವೊಂದು ದುಃಖ ಸಂಗತಿ ತರಬಹುದು. ವಿಚಲಿತರಾಗುವ ಅವಶ್ಯ ಇಲ್ಲ. ಶಂಕಲ ನಾಗನನ್ನು ಪೂಜಿಸಿ. ಆಶುಭವು ಶುಭಕ್ಕೆ ತಿರುಗುತ್ತದೆ.

    ಅಪರಿಚಿತರ ಬಳಿ ಲಿಫ್ಟ್ ಕೇಳಿಯೇ ಏಕಾಂಗಿಯಾಗಿ ಇಡೀ ರಾಜ್ಯ ಸುತ್ತಲಾರಂಭಿಸಿದ್ದಾಳೆ ಈ ಯುವತಿ: ಉದ್ದೇಶವಾದರೂ ಏನು?

    ನಂದಿನಿ-ಅಮುಲ್ ಸಂಘರ್ಷ: ಕೆಎಂಎಫ್​ನಿಂದ ಹೊರಬಿತ್ತು ಮಹತ್ವದ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts