More

  ವಾರಭವಿಷ್ಯ: ಈ ರಾಶಿಯವರಿಗೆ ಸಂಕಟಗಳು ದೂರ ಸರಿಯುವ ಸಮಯ ಬಂದಿದೆ

  ಮೇಷ: ಶುಭ ಕೃತ ನಾಮ ಸಂವತ್ಸರದ ಅಂತ್ಯವು ಬಂದು ಮಾ. 24ರಂದು ವಿಶೇಷ ದಿನವಾಗಿ ಚತುರ್ದಶಿ ಉಪರಿ ಪೌರ್ಣಮಿ ತಿಥಿ ಬಂದಿದೆ. ಆದಿತ್ಯವಾರದಲ್ಲಿ ಪೌರ್ಣಮಿ ಚಂದ್ರೋದಯ ಆಗುವುದರಿಂದ ಉಮಾ ಮಹೇಶ್ವರನು ಅನುಗ್ರಹ ಮಾಡುತ್ತಾನೆಂಬ ವಚನವಿದೆ. ಶಿವನನ್ನು ವಿಧಿವತ್ತಾಗಿ ಪೂಜಿಸಿ. ನಿಮ್ಮ ಸಮಸ್ಯೆಗಳಿಗೆ ಒಂದು ಚುಕ್ಕಿ ಇಟ್ಟು ನಿಮ್ಮನ್ನು ಸಕಾರಾತ್ಮಕವಾಗಿ ಸಕಲ ಸಂತೋಷ ಗಳನ್ನು ಕೊಟ್ಟು ಕಾಪಾಡುತ್ತಾನೆ. ಸತ್ಯನಾರಾಯಣ ವ್ರತ ಕಥೆಯನ್ನು ಓದಿ.

  ವೃಷಭ: ರಾಶಿಯವರಿಗೆ ಸೋಮವಾರದ ಉದಯ ಕಾಲದಲ್ಲಿ ಪೌರ್ಣಮಿಯ ಚಂದ್ರನು ಇದ್ದು ರಂಗಾಟದ ಹೋಳಿ ಹಬ್ಬವು ನಡೆದು ಕಾಮದಹನದ ಪರಿಪೂರ್ಣ ಫಲವು ದೊರಕಿ ಸೌಮ್ಯ ಚೆನ್ನಕೇಶವನನ್ನು ಅರ್ಚಿಸಿದರೆ ಮನದ ಸಂಕಲ್ಪವು ಈಡೇರಿ ನಿಮ್ಮ ಜೀವನಕ್ಕೆ ಹೊಸ ಆಯಾಮ ದೊರಕುತ್ತದೆ. ಯಾವ ಕೆಲಸವೇ ಆದರೂ ದೂರದ ಆಲೋಚನೆ ಇರಬೇಕು. ನಿರ್ದಿಷ್ಟವಾದ ಗುರಿ, ದೇವರ ಅನುಗ್ರಹ ಇರಬೇಕು. ದೃಢಸಂಕಲ್ಪ ಮಾಡಿ ವಿಜಯದ ಹಾದಿಯನ್ನು ಹುಡುಕಿರಿ.

  ಮಿಥುನ: ರಾಶಿಯವರಿಗೆ ಗುರು ಬುಧರು ಒಂದೇ ಮನೆಯಲ್ಲಿ ಇದ್ದು ಏಕಾದಶ ಸ್ಥಾನದ ಫಲವನ್ನು ಕೊಡುತ್ತಿದ್ದಾರೆ. 9ರಲ್ಲಿ ಶನಿ ಕುಜ ಶುಕ್ರ ಇದ್ದು ಮಾಡುವ ಕೆಲಸದಲ್ಲಿ ತೊಂದರೆ ಉಂಟಾಗಿ ನೀವು ನಿರೀಕ್ಷಿಸಿದ ಮಟ್ಟ ಮುಟ್ಟಲು ಸಾಧ್ಯವಾಗುವುದಿಲ್ಲ. ಮೀನದಲ್ಲಿ ರವಿ ರಾಹುಗ್ರಸ್ತನಾಗಿರುವುದರಿಂದ ಕೆಲಸದಲ್ಲಿ ಬದಲಾವಣೆ. ನಾಳೆ ಮಾಡುವ ಕೆಲಸ ಮುಂದೆ ಯಾವತ್ತಾದರೂ ಮಾಡೋಣ ಎಂಬ ಆಲೋಚನೆ ಬಿಟ್ಟು ಧೈರ್ಯದಿಂದ ಮುನ್ನುಗ್ಗಿರಿ. ಇನ್ನು ಆರು ವಾರಗಳ ಕಾಲ ಗುರುಬಲ ಇರುವುದರಿಂದ ಏನನ್ನಾದರೂ ಪಡೆಯಬಹುದು. ಸದೃಢವಾದ ಗುರು ಭಕ್ತಿಯಿಂದ ಮುಂದೆ ಸಾಗಿರಿ.

  ಕಟಕ: ರಾಶಿಗೆ ಗುರು ಏಕಾದಶಕ್ಕೆ ಬರಲಿದ್ದಾನೆ. ಹತ್ತರ ಗುರು, ಕೆಡುಕನ್ನು ಉಂಟು ಮಾಡುವುದಿಲ್ಲ. ಆದರೆ ರವಿಯು ರಾಹುವಿನ ಜೊತೆ ಇರುವುದರಿಂದ ಸಂಶಯಾಸ್ಪದ ವಿಚಾರಗಳು ನಿಮ್ಮ ಮನಸ್ಸನ್ನು ಹಾಳು ಮಾಡುವ ಸಮಯ ಬರಬಹುದು. ಬೇಡದ ವಿಚಾರಗಳನ್ನು ತಲೆಯಲ್ಲಿ ತುಂಬಿ ದೇಹವನ್ನು ಸೊರಗುವಂತೆ ಮಾಡುವುದು. ಅಷ್ಟಮ ಶನಿಗೆ ಶನಿ ಸ್ತೋತ್ರವನ್ನು ಪಠಿಸಿ.

  ಸಿಂಹ: ಗುರುಬಲವು ಇದೆ, ಶನಿಯು ಸಪ್ತಮದಲ್ಲಿ ಇದ್ದಾನೆ, ಯಾರು ಎಲ್ಲಾದರೂ ಇರಲಿ, ಏನು ಬೇಕಾದರೂ ಮಾಡಿಕೊಳ್ಳಲಿ, ಸಿಂಹ ರಾಶಿಯಲ್ಲಿ ಹುಟ್ಟಿದವರು ನೀವು. ಧೈರ್ಯ ಬಲ, ಬುದ್ಧಿ ಬಲ, ನಕ್ಷತ್ರ ಬಲವು ನಿಮಗೆ ಜನ್ಮದಿಂದ ಬಂದಿದೆ. ಯಾವುದೇ ವಿಚಾರಗಳಲ್ಲಿ ತೊಡಕು ಉಂಟುಮಾಡಿಕೊಳ್ಳಬೇಡಿ. ರಾಹು ಕೇತುವಿಗಾಗಿ ಸುಬ್ರಮಣ್ಯನ ಪ್ರಾರ್ಥನೆ ಇರಲಿ. ತಂದೆ ತಾಯಿಯನ್ನು ಪೂಜಿಸಿ.

  ಕನ್ಯಾ: ಎಂದರೆ ಕನ್ಯಾಕುಮಾರಿ ಎಂದು ಅರ್ಥೈಸುವುದು ಸಹಜ. ಪ್ರಪಂಚದ ಸೃಷ್ಟಿಗೆ ಹೆಣ್ಣೇ ಕಾರಣ. ಅವಳು ಮಾತೃ ಸ್ವರೂಪಿ ಎಂದು ಜಗತ್ತು ಸಾರುತ್ತದೆ. ಹೆಣ್ಣಿನ ಮನಸ್ಸು ಬಹಳ ಮೃದುವಾಗಿರುತ್ತದೆ. ಅಮೃತ ಸಮಾನವೂ ಹೌದು. ಅಂತಹ ಹೆಣ್ಣನ್ನು ನೋಯಿಸದಿರಿ. ಅವಳನ್ನು ಪೂಜ್ಯ ಭಾವನೆಯಿಂದ ಕಾಣಿರಿ. ಕುಲದೇವರನ್ನು ಪ್ರಾರ್ಥಿಸಿ.

  ತುಲಾ: ರಾಶಿಯವರಿಗೆ ಸಪ್ತಮದಲ್ಲಿ ಗುರು ಇದ್ದು ಮನೋ ನೆಮ್ಮದಿ, ಅದ್ಭುತವಾದ ಜಯ, ಮಾಡಿದ ಕೆಲಸದಲ್ಲಿ ಪ್ರಗತಿ ಸಿಕ್ಕಿದೆ ಎಂದು ಧಾರಾಳವಾಗಿ ಹೇಳಬಹುದು. ಕಠಿಣವಾದ ಕಾರ್ಯದಲ್ಲೂ ಮನೋ ಇಚ್ಛೆಯಂತೆ ನಡೆದಿದೆ. ಬಂದದ್ದ್ದೆಲ್ಲ ಬರಲಿ, ಗೋಪಾಲಕೃಷ್ಣನ ದಯೆ ಇರಲಿ. ಸಾಕ್ಷಾತ್ ಶ್ರೀಕೃಷ್ಣನು ಜಗತ್ತಿಗೆ ಗುರುವಾಗಿರುವುದರಿಂದ ಅವನನ್ನು ಅರ್ಚಿಸಿ, ಪೂಜಿಸಿ. ಬೆಲ್ಲ ಶುಂಠಿ ಸೇರಿಸಿ ತೀರ್ಥ ಮಾಡಿ ಅದನ್ನು ದೇವರ ಮುಂದೆ ಇಟ್ಟು ಸೇವಿಸಿ. ದೃಷ್ಟಿ ದೋಷಗಳು ನಿವಾರಣೆಯಾಗುತ್ತವೆ.

  ವೃಶ್ಚಿಕ: ಚೇಳು ಲಕ್ಷ್ಮಿಯ ವಾಹನ. ಅದನ್ನು ಕಂಡಾಗ ತೊಂದರೆ ಕೊಡಬಾರದು. ಮೇ ಒಂದರಿಂದ ಸಪ್ತಮಕ್ಕೆ ಗುರು ಬರುವುದರಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ. ಚೇಳು ಕುಟುಕಿದರೆ ವಿಷ ಏರುತ್ತದೆ, ಯಾರೇ ಮನಸ್ಸನ್ನು ಕುಟುಕಿದರೆ ಮನೋಬಲವು ಕುಂಠಿತವಾಗುತ್ತದೆ. ಯಾರು ಏನೇ ಹೇಳಲಿ, ಅಂತಿಮ ನಿರ್ಧಾರವು ನಿಮ್ಮದೇ ಇರಲಿ. ಒಳ್ಳೆಯ ಕಾಲ ಬರಲಿದೆ, ನಿಮ್ಮ ಗುರುಗಳನ್ನು ಶ್ರದ್ಧಾ ಭಕ್ತಿಯಿಂದ ಮತ್ತು ನಂಬಿಕೆಯಿಂದ ಪೂಜಿಸಿ ಅವರ ಮಾರ್ಗದರ್ಶನದಲ್ಲಿ ಸಾಗಿದರೆ ಬಾಳು ಬಂಗಾರವಾಗುತ್ತದೆ.

  ಧನಸ್ಸು: ಗುರು ಗ್ರಹ ಶನಿಗ್ರಹವು ಒಳ್ಳೆಯ ಸ್ಥಾನದಲ್ಲಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಧನುರ್ ಮೀನ ರಾಶಿಗೆ ಗುರುವಿನ ಅಧಿಪತ್ಯ ಇದ್ದು ಗುರು ರಾಶಿಯಲ್ಲಿ ಹುಟ್ಟಿದವರಿಗೆ ಯಾವ ಬಲವೂ ಬೇಡ. ಸಕಲ ಗ್ರಹ ಬಲ ಇರುವ ವಿಷ್ಣುವನ್ನು, ನಾಗಶೇಷನನ್ನು ಆರಾಧಿಸಿದರೆ ಸಾಕು, ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಸಮಯವನ್ನು ಹಾಳು ಮಾಡದೆ ನಿಮ್ಮ ಕೆಲಸ ದಲ್ಲಿ ಮಗ್ನರಾದರೆ ಆಕಾಶವನ್ನೇ ಮುಟ್ಟಬಹುದು. ಒಳ್ಳೆಯ ಆರೋಗ್ಯವನ್ನೂ ಸಾಧಿಸಬಹುದು. ಗುರು ಚರಿತ್ರೆಯ ಪಾರಾಯಣ ಇರಲಿ. ದಕ್ಷಿಣಾಮೂರ್ತಿಗೆ ಕಡಲೆಕಾಳು ನೈವೇದ್ಯವನ್ನು ಮಾಡಿ. ನಿಮ್ಮ ಮನಸ್ಸಿನ ಇಚ್ಛೆಯನ್ನು ಪರಿಪೂರ್ಣಗೊಳಿಸಿಕೊಳ್ಳಿ.

  ಮಕರ: ರಾಶಿಯವರಿಗೆ ಮನೋಭಾರ, ಸಂಕಟಗಳು ದೂರ ಸರಿಯುವ ಸಮಯ ಬಂದಿದೆ. ಕುಜ ಶನಿ ಕೆಲವು ವಿಚಾರಗಳಲ್ಲಿ ತರ್ಕಗಳಿಂದ ನಿಮ್ಮನ್ನು ಯೋಚನೆಗೆ ಈಡು ಮಾಡಿದರೂ ರ್ತಾಕ ವಿಚಾರಗಳನ್ನು ದೂರ ಇಟ್ಟು ಶನಿಯನ್ನು ಪ್ರಾರ್ಥಿಸಿ. ಶನಿ ಅಷ್ಟೋತ್ತರ ಪಠಿಸಿ, ತುಪ್ಪದ ದೀಪವನ್ನು ಹಚ್ಚಿರಿ. ಮನೆಯು, ಮನವು ದೀಪದ ಬೆಳಕಾಗುತ್ತದೆ.

  ಕುಂಭ: ಕುಜ ಶುಕ್ರ ಶನಿ ಈ ಮೂರು ಗ್ರಹಗಳು ಒಂದೇ ಮನೆಯಲ್ಲಿ ಇದ್ದು ಎರಡರಲ್ಲಿ ರವಿಗೆ ರಾಹು ತಾಗಿದಾಗ ಕ್ಷುಲ್ಲಕ ವಿಷಯವನ್ನು ಪೂರ್ಣವಾಗಿ ಅರಿತು ವಿಚಾರಗಳನ್ನು ತೀರ್ವನಿಸಬೇಕು. ನಿಮ್ಮ ಆತ್ಮೀಯರನ್ನು, ಗುರುಗಳನ್ನು ಸಂರ್ಪಸಿ ಅವರ ಸಲಹೆ ಪಡೆದು ಮುನ್ನಡೆದರೆ ಸಮಸ್ಯೆಯೂ ದೂರವಾಗುತ್ತದೆ. ಅನಂತವಾಗಿ ಕೊಡುವ ಅನಂತಪದ್ಮನಾಭನನ್ನು ಪೂಜಿಸಿ. ಆರೋಗ್ಯದ ಬಗ್ಗೆ ಎಚ್ಚರ ಇರಲಿ. ಮಾರ್ಕಂಡೇಯ ಅಷ್ಟೋತ್ತರ ಪಠಿಸಿ.

  ಮೀನ: ಗುರುವಿನ ಅನುಗ್ರಹ ಒಂದಿದ್ದರೆ ಜೀವನದಲ್ಲಿ ಮನುಷ್ಯನು ಏನನ್ನು ಬೇಕಾದರೂ ಸಾಧಿಸಬಹುದು. ಗುರುವಿನ ಮಾರ್ಗದರ್ಶನಲ್ಲಿ ನಡೆದರೆ ಒಳ್ಳೆಯದಾಗುತ್ತದೆ. ಮೀನ ರಾಶಿಯವರಿಗೆ ದೈವಬಲ, ಬುದ್ಧಿಬಲ, ನಕ್ಷತ್ರ ಬಲ ಇದೆ. ಸ್ಥಿರವಾದ ಮನಸ್ಸು ಇಟ್ಟುಕೊಂಡು ದೇವರ ಧ್ಯಾನ ಮಾಡಬೇಕು. ಶುದ್ಧವಾದ ಭಕ್ತಿ-ಪ್ರಾರ್ಥನೆ ಇದ್ದರೆ ದೇವರು ನಿಮ್ಮ ಕಣ್ಣಿಗೆ ಕಾಣುತ್ತಾನೆ. ಶನಿ ಕೊಡುವ ಉಪದ್ರವವು ನಿವಾರಣೆಯಾಗುತ್ತದೆ. ದೈವ ಭಕ್ತಿ ಎಂಬುದು ಅತಿ ಮುಖ್ಯವಾದ ಸಾಧನ. ಧರ್ಮ ಮತ್ತು ನ್ಯಾಯ ಎರಡು ಕಣ್ಣುಗಳು. ಇದರ ಉಪಯೋಗವನ್ನು ಪಡೆದು ಭ್ರಮರಾಂಬ ಸಹಿತ ಮಲ್ಲಿಕಾರ್ಜುನ ಸ್ವಾಮಿಯನ್ನು ಪೂಜಿಸಿ, ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಿ.

  ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡುವುದೇ ಬೆಸ್ಟ್​​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts