More

    ವಾರ ಭವಿಷ್ಯ: ರಾಹು-ಕೇತು ಸ್ಥಾನ ಬದಲಿಸುವುದರಿಂದ ಈ ರಾಶಿಯವರಿಗೆ ಶುಭಸೂಚನೆ ಸಿಗಲಿದೆ

    ವಾರ ಭವಿಷ್ಯ: ರಾಹು-ಕೇತು ಸ್ಥಾನ ಬದಲಿಸುವುದರಿಂದ ಈ ರಾಶಿಯವರಿಗೆ ಶುಭಸೂಚನೆ ಸಿಗಲಿದೆ

    ಮೇಷ: ಮೇಷ ರಾಶಿಯ ಒಂಬತ್ತರ ಗುರುವು ಸೆ.14ರಂದು ತನ್ನ ವಕ್ರತ್ವ ಕಳೆದುಕೊಂಡು ಯೋಗಕಾರಕನಾಗುತ್ತಾನೆ. ಸೆ.11ರಂದು ರಾಶ್ಯಾಧಿಪತಿ ಅಂಗಾರಕನು ವಕ್ರತ್ವ ಪಡೆದು ಶುಭಾಶುಭ ಫಲಗಳಲ್ಲಿ 50 ಭಾಗ ಉತ್ತಮವಾದ ಫಲ ಹಾಗೂ ಉಳಿದ ಭಾಗ ಮಿಶ್ರಫಲದ್ದಾಗಿರುತ್ತದೆ. ತಂದೆ- ತಾಯಿಯ ಪರಂಪರೆಯನ್ನು ಈ ಪಿತೃಪಕ್ಷದಲ್ಲಿ ಸ್ಮರಿಸಿ.

    ವೃಷಭ: ವೃಷಭಾಧಿಪತಿ ಶುಕ್ರನು ಉಚ್ಚಸ್ಥಾನದ ಗುರುಮನೆಯಲ್ಲಿರು ವುದರಿಂದ ಗುರುವಿನ ವಕ್ರತ್ವವೂ ಹೋಗುವುದರಿಂದ ಅಲ್ಪಸ್ವಲ್ಪ ಧನವನ್ನು ನಿರೀಕ್ಷೆ ಮಾಡಬಹುದು. ಅಷ್ಟಮ ಗುರು-ಕೇತುವಿಗೆ 21 ಬೆಳ್ಳಿಯ ಗರಿಕೆಯಿಂದ ಪೂಜಿಸಿ ಕೆಲಸ ಸಾಧಿಸಿಕೊಳ್ಳಿ. ಇದು ಪಿತೃಪಕ್ಷ. ಆನಂತರದಲ್ಲಿ ಬರುವುದೇ ಮಾತೃ. ನಿಮ್ಮ ಪ್ರಾರ್ಥನೆ ಸದಾ ಇರಲಿ.

    ಮಿಥುನ: ಸೆ.20ರಂದು ರಾಹು-ಕೇತು ಸ್ಥಾನಗಳನ್ನು ಬದಲಿಸುವುದರಿಂದ ನಿಮಗೆ ಶುಭಸೂಚನೆ ಕಂಡುಬರುವುದು. ಈ ಹನ್ನೆರಡು ದಿನ ಪರ್ಯಂತ ಮನೆಯಲ್ಲಿ ರಾಹುವಿಗೆ ನೀಲಿಪುಷ್ಪದಿಂದ ಹಾಗೂ ಕೇತುವಿಗೆ ಗರಿಕೆಯಿಂದ ಕೆಂಪು ಪುಷ್ಪದಿಂದ ಪೂಜಿಸಿ. ದೇವರ ಧ್ಯಾನವಿದ್ದಲ್ಲಿ, ಅಷ್ಟಮ ಶನಿ ದೇಹಸೌಖ್ಯ ಕಾಪಾಡುತ್ತಾನೆ. ನ್ಯಾಯಮಾರ್ಗದಲ್ಲಿ ನಡೆಯಿರಿ.

    ಕಟಕ: ಷಷ್ಠದ ಗುರುವು ಈಗಾಗಲೇ ದೇಹಾಲಸ್ಯ, ಮನೋವೇಗವನ್ನು ಕೊಟ್ಟಿದ್ದಾನೆ. ಸಪ್ತಮ ಶನಿಯು ನೀವು ಓಂಕಾರ ಧ್ಯಾನದಲ್ಲಿದ್ದೀರೋ ಅಥವಾ ಹಳೆಯ ಗಂಟಿನ ಚಿಂತೆ ಮಾಡುತ್ತಿದ್ದೀರೋ ಎಂದು ನೋಡುತ್ತಿದ್ದಾನೆ. ಈಶ್ವರನ ಧ್ಯಾನವೊಂದೇ ಸರ್ವಸ್ವವನ್ನು ಕೊಡುವ ಏಕೈಕ ಶಕ್ತಿ. ನಿತ್ಯವೂ ಮಹಾಲಕ್ಷ್ಮೀ ಅಷ್ಟಕ ಪಾರಾಯಣ ಮಾಡಿ.

    ಸಿಂಹ: ಸಿಂಹ ರಾಶಿಯ ಸೂರ್ಯನು ಜಗತ್ತಿಗೆ ಬೆಳಕನ್ನು ಕೊಡುವನು. ಸೂರ್ಯನು ಉದಯಿಸದಿದ್ದರೆ ಜಗತ್ತೇ ಕತ್ತಲಾಗುತ್ತದೆ. ಸಂಜೆಯಲ್ಲಿ ಚಂದ್ರನು ಬಾರದಿದ್ದರೆ ಸೂರ್ಯನ ತಾಪದಿಂದ ಲೋಕ ಸುಟ್ಟು ಬೂದಿಯಾಗುತ್ತದೆ. ಹಾಗಿರುವಾಗ ನೀವು ಹೇಗೆ ಇರಬೇಕೆಂದು ನೀವೇ ಅರಿತುಕೊಳ್ಳಿ. ಪಂಚಮ ಗುರು, ಷಷ್ಠ ಶನಿಯಿಂದ ಅಹಿತವೂ ಇಲ್ಲ. ಸಾಂಬಸದಾಶಿವನಿಗೆ ಬಿಲ್ವಾರ್ಚನೆ ಇರಲಿ.

    ಕನ್ಯಾ: ರಾಜ್ಯಾಧಿಪತಿ ಬುಧನು ಸ್ವಕ್ಷೇತ್ರದಲ್ಲಿದ್ದರೂ, ಹೇಳಿದ್ದನ್ನು ಮಾಡೋ ಮಹರಾಯ ಎಂದರೆ, ಸುಳ್ಳಿನ ಸರಮಾಲೆಗಳನ್ನು ಬೆಸೆದು ಜನರನ್ನು ನಿಂದಿಸುವುದೇ ಬದುಕಿನ ಶೈಲಿಯಾದರೆ ನೀವು ಮಾಡಿದ್ದೇನು? ಅನಂತ ಪದ್ಮನಾಭನ ಮುಂದೆ ನಿಂತು ಕ್ಷಮೆಯಾಚಿಸಿ. ಕನ್ಯಾಗತೇ ಸವಿತೃ ಆಷಾಢ್ಯಾದಿ ಪಂಚ ಅಪರ ಮಹಾಲಯ ಪಕ್ಷಗಳಂದು ನಿತ್ಯ ಹಿರಿಯರನ್ನು ಸ್ಮರಿಸಿ ಇಚ್ಛಾಭೋಜನ ಮಾಡಿಸಿ.

    ತುಲಾ: ತುಲಾ ರಾಶಿಯ ಉಚ್ಚಗ್ರಹ ಚತುರ್ಥ ಶುಕ್ರನು ಕಟಕದಲ್ಲಿದ್ದಾನೆ. ದೈವಬಲ, ಪೂರ್ವಜನ್ಮದ ಪುಣ್ಯದಿಂದ ಸತ್ಯಮಾರ್ಗದಲ್ಲಿ ಧನ, ಸ್ಥಾನಮಾನಗಳು ಲಭಿಸುವ ಕಾಲ. ದ್ವೇಷ, ಅಸೂಯೆಗಳಿಂದ ನಿಮ್ಮ ಕಾಲಮೇಲೆ ಕಲ್ಲೆತ್ತಿ ಹಾಕಿಕೊಳ್ಳಬೇಡಿ. ಲಕ್ಷ್ಮೀವೆಂಕಟೇಶ್ವರನನ್ನು ಪೂಜಿಸಿ, ನಿತ್ಯವೂ ಗುರುಚರಿತ್ರೆ ಪಾರಾಯಣ ಮಾಡಿ.

    ವೃಶ್ಚಿಕ: ಮೇಷ-ವೃಶ್ಚಿಕಾಧಿಪತಿ ಕುಜನು ವಕ್ರಗತಿ ಹಿಡಿದರೂ, ಆಯುಧಗಳು ಮೊಂಡಾದಾಗ ಅದಕ್ಕೆ ಸಾಣೆಹಿಡಿದು ಹರಿತಗೊಳಿಸುವಂತೆ ಜೀವನ ಹರ್ಷದಿಂದ ಕೂಡಿಬರಬೇಕೆಂದರೆ ನಿಮ್ಮ ಮನಸ್ಸು ನಾಗಾಲೋಟದಲ್ಲಿ ಓಡಿ ತಕ್ಷಕ, ಕುಬೇರರಿಂದ ಬೇಕಾದ ಹಣವನ್ನು ಸಂಪಾದಿಸಿ. ಇದು ಪಿತೃಪಕ್ಷ. ನಿಮ್ಮ ಮುಂದೆ ದೈವವಿರಲಿ, ಹಿಂದೆ ಗುರುವಿರಲಿ.

    ಧನು: ಲಗ್ನದಲ್ಲಿ ಗುರು-ಕೇತುವಿದ್ದು, ವಕ್ರತೆಯನ್ನು ಕಳೆದುಕೊಂಡು ಗುರು ಹಾಗು ಅಲ್ಪಕಾಲವಿರುವ ಕೇತು ನಿಮ್ಮನ್ನು ಸಂತಸದಲ್ಲಿಡುವರು. ಸತ್ಯಾಸತ್ಯತೆಯನ್ನು ಅತಿಯಾದ ಮಾತಿನಿಂದ ಹೊರಹಾಕಬೇಡಿ. ಚಂಡಿಕಾ ಪಾರಾಯಣದಲ್ಲಿ 16 ಅಧ್ಯಾಯಗಳು. ಕಡೆಯ 3ನ್ನು ರಹಸ್ಯತ್ರಯವೆಂದು ಕರೆಯುತ್ತಾರೆ. ಅದರಂತೆ ಸತ್ಯ, ಧರ್ಮ, ನಿಷ್ಠೆ ನಿಮ್ಮ ರಹಸ್ಯತ್ರಯವಾಗಲಿ.

    ಮಕರ: ಮಕರದಲ್ಲೇ ಶನಿಯಿದ್ದು, ಅಗೋಚರವಾದ ವಿಚಾರಗಳಿಗೆ ಸೊಪು್ಪ ಹಾಕಬಾರದು. ಪಂಚಮ, ಅಷ್ಟಮ, ದ್ವಾದಶ ಹಾಗೂ ಏಳೂವರೆ ವರ್ಷದ ಶನಿಕಾಟ ದಾಟಲು ಏಕೈಕ ಮಾರ್ಗವೇ ನಿರಂತರವಾದ ಧ್ಯಾನ, ಧಾರಣೆ, ಶರೀರಾರೋಗ್ಯಕ್ಕಾಗಿ ಯೋಗ. ಗುರುಚರಿತ್ರೆಯಲ್ಲಿ 14 ಹಾಗೂ 11ನೆಯ ಅಧ್ಯಾಯವನ್ನು ಪಾರಾಯಣ ಮಾಡಿ.

    ಕುಂಭ: ದ್ವಾದಶದಲ್ಲಿ ಶನಿ ಏನು ಮಾಡುತ್ತಾನೆಂದು ಹೇಳುವ ಅಗತ್ಯವೇ ಇಲ್ಲ. ಎಲ್ಲವೂ ಆಗುವ ಸೂಚನೆ ಇದ್ದರೂ, ಏನೂ ಆಗುವುದಿಲ್ಲ. ಭರತಖಂಡದಲ್ಲಿ ರಾಮನ ಜಾಗವು ಅಯೋಧ್ಯೆಯೆಂದು ನಿರ್ಣಯ ಬರಲು 70 ವರ್ಷಗಳೇ ಆಗಿವೆ. ಏಕೆಂದರೆ ಅಷ್ಟಮ ಶನಿಯ ಕಾರಣ ಕಾರ್ಯವೇ ವಿಳಂಬವಾಗುತ್ತದೆ. ನಿಮ್ಮ ಜೀವನದ ಏಳಿಗೆಗೆ ಶಿವಪುರಾಣವನ್ನು ಪಠಿಸಿ.

    ಮೀನ: ಪೂರ್ವಜನ್ಮದ ಪುಣ್ಯವಿದ್ದಲ್ಲಿ ಕಾಲವೇ ಎಲ್ಲ ಸುಖ-ಸಂತೋಷಗಳನ್ನು ನೀಡುತ್ತದೆ. ಗುರುವು ಮಕರ ರಾಶಿಗೆ ಪ್ರವೇಶ ಮಾಡಿ ನೀವು ಕೇಳಿದ್ದೆಲ್ಲಾ ಕೊಡುತ್ತಾನೆ. ಸ್ಕಂದಪುರಾಣದಲ್ಲಿ ಷಣ್ಮುಖನ ಕಥಾಶ್ರವಣವನ್ನು ಮಾಡಿ, ಕುಲಗುರುಗಳನ್ನು, ಶೃಂಗೇರಿಯ ವರಪ್ರದೆ ಶಾರದೆಯನ್ನು, ಅವರ ಪೂಜೆಯಲ್ಲಿ, ಅನುಷ್ಠಾನ ದಲ್ಲಿರುವ ಶ್ರೀಗುರುದ್ವಯರನ್ನು ಪ್ರಾರ್ಥಿಸಿ-ಪೂಜಿಸಿ.

    ಈ ಪಿತೃಪಕ್ಷದಲ್ಲಿ ಎಲ್ಲ 12 ರಾಶಿಯವರು ಪಿತೃಕಾರ್ಯಗಳನ್ನು ಮಾಡಿದಲ್ಲಿ ಇಷ್ಟಾರ್ಥಗಳು ಸಿಗುವುದರಲ್ಲಿ ಸಂದೇಹವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts