More

    ಕಲ್ಯಾಣ ಮಂಟಪದಲ್ಲಿ ಎಲ್ಲರ ಎದುರು ವರ ಕಿಸ್​ ಕೊಟ್ಟಿದ್ದಕ್ಕೆ ಮದುವೆ ಮುರಿದುಕೊಂಡ ವಧು!

    ಲಖನೌ: ಮಡುವೆ ಮಂಟಪದಲ್ಲಿ ಎಲ್ಲರ ಎದುರು ವರ ಮುತ್ತು ಕೊಟ್ಟಿದ್ದಕ್ಕೆ ವಧುವೊಬ್ಬಳು ಮದುವೆ ರದ್ದು ಮಾಡಿರುವ ಘಟನೆ ಉತ್ತರ ಪ್ರದೇಶದ ಸಂಭಲ್​ ವಲಯದಲ್ಲಿ ನಡೆದಿದೆ.

    ನವೆಂಬರ್ 26 ರಂದು ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಸಮಾರಂಭದ ಅಂಗವಾಗಿ ಬಿಲ್ಸಿ ಗ್ರಾಮದ ವ್ಯಕ್ತಿ ಮತ್ತು ಪಾವಾಸ ಮೂಲದ ಯುವತಿ ಪರಸ್ಪರ ಪ್ರತಿಜ್ಞೆ ಮಾಡಿದ ಎರಡು ದಿನಗಳ ನಂತರ ನವೆಂಬರ್ 28 ರಂದು ಪಾವಾಸ ಗ್ರಾಮದಲ್ಲಿ ವಧು-ವರರು ಶಾಸ್ತ್ರೋಕ್ತವಾಗಿ ವಿವಾಹವಾದರು.

    ಹೂವಿನ ಹಾರ ಬದಲಾಯಿಸುವ ಸಂದರ್ಭದಲ್ಲಿ ವರ ಎಲ್ಲರ ಸಮ್ಮುಖದಲ್ಲಿ ವಧುವಿಗೆ ಕಿಸ್​ ಮಾಡಿದನು. ಇದರಿಂದ ಆಕ್ರೋಶಗೊಂಡ ವಧು ವೇದಿಕೆಯಿಂದ ಹೊರ ನಡೆದಳು. ಸೀದಾ ಪೊಲೀಸ್​ ಠಾಣೆಗೆ ತೆರಳಿ ವರನ ವಿರುದ್ಧ ದೂರು ದಾಖಲಿಸಿದ್ದಾಳೆ.

    ಎರಡೂ ಕುಟುಂಬದವರು ವಧುವಿನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಯಾರ ಮಾತನ್ನು ಕೇಳದ ವಧು ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು ಎಂದು ಬಹ್ಜೋಯ್ ಪೊಲೀಸ್ ಠಾಣೆಯ ಅಧಿಕಾರಿ ಪಂಕಜ್ ಲಾವಾನಿಯಾ ತಿಳಿಸಿದ್ದಾರೆ. ವರನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುವ ಸಂದರ್ಭದಲ್ಲಿ ವರನ ಕಡೆಯವರೂ ಠಾಣೆಗೆ ಬಂದರು.

    ವರನ ಕಡೆಯವರು ಬೆಟ್ಟಿಂಗ್ ಗೆಲ್ಲಲು ಹೀಗೆ ಮಾಡಿದ್ದಾರೆ ಎಂದು ಸಮರ್ಥನೆ ನೀಡಿದರು. ವಧು ತಾನಾಗಿಯೇ ವರನೊಂದಿಗೆ ಬಾಜಿ ಕಟ್ಟಿದ್ದಳು. ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಮುತ್ತು ಕೊಟ್ಟರೆ 1500 ರೂಪಾಯಿ ನೀಡುವುದಾಗಿ ಹೇಳಿದ್ದಳು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಪ್ರತಿಯಾಗಿ 3000 ರೂ. ಕೊಡಬೇಕಾಗಿತ್ತು ಎಂದು ವರನ ಕಡೆಯವರು ಮಾಹಿತಿ ನೀಡಿದ್ದಾರೆ. ಆದರೆ, ಇದನ್ನು ಅಲ್ಲಗೆಳೆದಿರುವ ವಧು, ಯಾವುದೇ ಬಾಜಿ ಕಟ್ಟಿರಲಿಲ್ಲ ಎಂದು ಠಾಣಾಧಿಕಾರಿ ಮುಂದೆ ಹೇಳಿದ್ದಾಳೆ.

    ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಉಭಯ ಕಡೆಯವರು ಚರ್ಚೆ ನಡೆಸಿದರು. ಒಂದು ಒಪ್ಪಂದಕ್ಕೆ ಬಂದ ನಂತರ ವಧು-ವರರು ಬೇರೆಯಾಗಿ ಬದುಕಲು ಒಪ್ಪಿಕೊಂಡರು. ಸದ್ಯ ಮದುವೆ ನೊಂದಣಿಯಾಗಿರುವ ಕಾರಣ ವಿಚ್ಛೇದನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಠಾಣೆಯ ಇನ್‌ಚಾರ್ಜ್ ಪಂಕಜ್ ಲಾವಾನಿಯಾ ತಿಳಿಸಿದ್ದಾರೆ. (ಏಜೆನ್ಸೀಸ್​)

    ಹೆಚ್ಚಿನ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ಸಮಂತಾ ಶಿಫ್ಟ್! ಈ ಸುದ್ದಿ ನಿಜವೇ? ಆಪ್ತ ಮೂಲಗಳು ಹೇಳುವುದೇ ಬೇರೆ

    ಬೆಂಗಳೂರಿನಲ್ಲಿ ಮತ್ತೆ ಕಾಮುಕರ ಅಟ್ಟಹಾಸ; ಮನೆಗೆ ಹೋಗಲು ಬಸ್ ಹತ್ತಿದ ಮಹಿಳೆ ಮೇಲೆ ಅತ್ಯಾಚಾರ

    ಶಿಕ್ಷಕರ ನೇಮಕಾತಿಗೆ ಹಿನ್ನಡೆ: 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಪಟ್ಟಿಗೆ ಹೈಕೋರ್ಟ್ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts