More

    Web Exclusive | ಹಳೇ ಬಸ್​ನಿಂದ ಮಹಿಳೆಯರಿಗಾಗಿ ಸಂಚಾರಿ ಶೌಚಗೃಹ; ಸೆಲ್ಕೋ ಸೋಲಾರ್-ಸಾರಿಗೆ ಸಂಸ್ಥೆಗಳ ಪ್ರಾಯೋಗಿಕ ಪ್ರಯತ್ನ

    | ಶಾಮಸುಂದರ ಕುಲಕರ್ಣಿ ಕಲಬುರಗಿ

    ಮಹಾನಗರಕ್ಕೆ ಬರಲಿವೆ ಸಂಚಾರಿ ಶೌಚಗೃಹಗಳು. ಮಹಿಳೆಯರಿಗಾಗಿ ಇವುಗಳನ್ನು ಬಳಸಲಾಗುವುದು. ಇದಕ್ಕಾಗಿ ಈಶಾನ್ಯ ಸಾರಿಗೆ ಸಂಸ್ಥೆ ಮತ್ತು ಸೆಲ್ಕೋ ಸೋಲಾರ್ ಲೈಟ್ ಸಂಸ್ಥೆಗಳು ಕೈ ಜೋಡಿಸಿವೆ. ಸಂಪೂರ್ಣವಾಗಿ ಹಾಳಾಗಿ ಇನ್ನೇನು ಉಪಯೋಗಕ್ಕೆ ಬರುವುದಿಲ್ಲ ಎನ್ನುವ ಹಳೆಯ ಬಸ್​ಗಳನ್ನು ಮರು ಬಳಕೆ ಮಾಡಲು ನಿರ್ಧರಿಸಿದ ಸಾರಿಗೆ ಸಂಸ್ಥೆ ಸಂಚಾರಿ ಶೌಚಗೃಹಕ್ಕಾಗಿ ಇವುಗಳನ್ನು ಉಪಯೋಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಈಶಾನ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೂರ್ಮರಾವ್ ಚಿಂತನೆ ನಡೆಸಿದ್ದಾರೆ. ಇವರ ಚಿಂತನೆಗೆ ಸೆಲ್ಕೋ ಸೋಲಾರ್ ಸಂಸ್ಥೆ ಕೈ ಜೋಡಿಸಿದೆ.

    ಮಹಿಳೆಯರಿಗಾಗಿಯೇ ಒಂದು ಬಸ್​ನ್ನು ಅಲಂಕಾರಗೊಳಿಸಿ ಅದರಲ್ಲಿ ಎರಡು ಟಾಯ್ಲೆಟ್ ಮತ್ತು ತಾಯಿ ಮಗುವಿಗೆ ಸ್ತನ್ಯಪಾನ ಮಾಡಿಸುವ ಒಂದು ಕೊಠಡಿ ನಿರ್ವಿುಸಲಾಗುತ್ತಿದೆ. ಇವುಗಳನ್ನು ಸಾರ್ವಜನಿಕ ಸ್ಥಳಗಳಾದ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಮಾರ್ಕೆಟ್, ಬೃಹತ್ ಸಭೆ ಸಮಾರಂಭ ನಡೆಯುವ ಸ್ಥಳಗಳಲ್ಲಿ ನಿಲ್ಲಿಸಲಾಗುತ್ತದೆ.

    ಪ್ರಾಯೋಗಿಕವಾಗಿ ನಗರದಲ್ಲಿ ಒಂದು ಸಂಚಾರಿ ಶೌಚಗೃಹ ರೆಡಿಯಾಗಿದೆ. ಇದು ಯಶಸ್ವಿಯಾದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿದ್ದಪಡಿಸಲು ಎರಡೂ ಸಂಸ್ಥೆಗಳು ನಿರ್ಧರಿಸಿವೆ. ಈ ಸೇವೆಗೆ ಸಾರಿಗೆ ಸಂಸ್ಥೆ ಬಸ್ ನೀಡಿದರೆ ಸೆಲ್ಕೋ ಸೋಲಾರ್ ಸಂಸ್ಥೆ ಬಸ್​ಗಳಲ್ಲಿ ಟಾಯ್ಲೆಟ್, ಫ್ಯಾನ್, ಲೈಟ್ ವ್ಯವಸ್ಥೆ ಮಾಡುತ್ತಿದೆ. ಸೌರಶಕ್ತಿ ಬಳಸಲಾಗುತ್ತಿದೆ. ನಮ್ಮಲ್ಲಿ ಸಿಗುವ ಸಂಪನ್ಮೂಲ ಸದ್ಭಳಕೆ ಮಾಡಿಕೊಂಡು ಮಹಿಳೆಯರಿಗೆ ಉತ್ತಮ ಗುಣಮಟ್ಟದ ಸಂಚಾರಿ ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗುವುದು ಎನ್ನುತ್ತದೆ ಸಂಸ್ಥೆ.

    ಸೆಲ್ಕೋ ಸಂಸ್ಥೆ ಮುಖ್ಯಸ್ಥ ಮೋಹನ್ ಹೆಗಡೆ 2015ರಲ್ಲಿ ವಿಶ್ವ ಸಂಸ್ಥೆ ಸದಸ್ಯರಾಗಿದ್ದಾಗ ಪ್ರತಿಪಾದಿಸಿದ್ದ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಯೋಜನೆ ಮಾದರಿಯನ್ನಾಗಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ. ಸ್ತ್ರೀತನವನ್ನು ಸಂಭ್ರಮಿಸಲು, ಮಹಿಳಾ ಸಬಲೀಕರಣ ಪ್ರೋತ್ಸಾಹಿಸುವ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸ್ವಚ್ಛ ಮತ್ತು ನಿರ್ಮಲ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದ್ದು, ಈ ಯೋಜನೆ ವಿನೂತನ ಮತ್ತು ಅರ್ಥಪೂರ್ಣವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಈ ಯೋಜನೆ ವಿಸ್ತರಿಸಲು ಚಿಂತನೆ ಮಾಡಲಾಗುತ್ತಿದೆ.

    Web Exclusive | ಹಳೇ ಬಸ್​ನಿಂದ ಮಹಿಳೆಯರಿಗಾಗಿ ಸಂಚಾರಿ ಶೌಚಗೃಹ; ಸೆಲ್ಕೋ ಸೋಲಾರ್-ಸಾರಿಗೆ ಸಂಸ್ಥೆಗಳ ಪ್ರಾಯೋಗಿಕ ಪ್ರಯತ್ನಮಹಿಳೆಯರ ಬಗ್ಗೆ ಕಾಳಜಿ ವಹಿಸಿ ವಿನೂತನ ಯೋಜನೆ ರೂಪಿಸಲು ಮುಂದಾಗಿರುವ ಸೆಲ್ಕೋ ಸಂಸ್ಥೆ ಮುಖ್ಯಸ್ಥ ಡಾ.ಹರೀಶ ಹಂದೆ ಅವರಿಗೆ ಮಹಿಳೆಯರ ಪರವಾಗಿ ಕೃತಜ್ಞತೆ ಸಲ್ಲಿಸುವೆ. ಈ ಸಂಸ್ಥೆ ಜತೆ ಕೈ ಜೋಡಿಸಿದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೂ ಧನ್ಯವಾದಗಳು.

    | ಜ್ಯೋತಿ ಚಕ್ರವರ್ತಿ ಸೆಲ್ಕೊ ಸಂಸ್ಥೆ ಕಚೇರಿ ಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts