More

    ಮನೆ, ಕಚೇರಿ ಒಳಗಿದ್ದರೂ ಮಾಸ್ಕ್​ ಹಾಕಿಕೊಂಡಿರಿ ಎಂದು ಹೇಳಿದ್ದು ಯಾರು? ಏಕೆ?

    ನವದೆಹಲಿ: ನೀವು ಮನೆಯಲ್ಲೇ ಇರಿ. ಅಥವಾ ಕಚೇರಿಯ ಒಳಗೆ ಇರಿ. ಯಾವುದೇ ಬ್ಯಾಂಕ್​ ಮತ್ತಿತರ ಸಂಸ್ಥೆಯೊಳಗೆ ಇರಿ. ಒಟ್ಟಿನಲ್ಲಿ ನೀವು ತಪ್ಪದೆ ಮುಖಕ್ಕೆ ಮಾಸ್ಕ್​ ಹಾಕಿಕೊಂಡಿರಿ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್​ಐಆರ್​) ಮುಖ್ಯಸ್ಥ ಶೇಖರ್​ ಸಿ ಮಂಡೆ ಸಲಹೆ ನೀಡಿದ್ದಾರೆ.

    ಇವರ ಪ್ರಕಾರ ಕರೊನಾ ವೈರಾಣು ಸೋಂಕು ಗಾಳಿ ಮೂಲಕವೂ ಹರಡುತ್ತದೆ. ಆದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಮನೆ-ಕಚೇರಿಯ ಒಳಗೆ ಮತ್ತು ಹೊರಗೆ ಮುಖಕ್ಕೆ ಮಾಸ್ಕ್​ ಧರಿಸಿರುವುದು ಒಳ್ಳೆಯದು ಎಂದು ಸ್ಪಷ್ಟಪಡಿಸಿದ್ದಾರೆ. ಕೆಲದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಕೂಡ ಕರೊನಾ ಸೋಂಕು ಗಾಳಿಯಲ್ಲೂ ಹರಡುತ್ತೆ ಎಂದು ಹೇಳಿತ್ತು. ಇದನ್ನು ಸಮರ್ಥಿಸುವ ರೀತಿಯಲ್ಲಿ ಸಿಎಸ್​ಐಆರ್​ ಕೂಡ ಮುಖಕ್ಕೆ ಮಾಸ್ಕ್​ ಹಾಕಿಕೊಳ್ಳುವ ಅವಶ್ಯತೆ ಹೆಚ್ಚಾಗಿದೆ ಎಂಬುದನ್ನು ಪ್ರತಿಪಾದಿಸಿದೆ.

    ಇದನ್ನೂ ಓದಿ: ಹಳ್ಳಿಗಳಲ್ಲಿ ಕರೊನಾ ಬಂದ್ದದ್ದೇ ಆ ಒಂದು ಕಾರಣಕ್ಕೆ; ಸಚಿವ ಮಾಧುಸ್ವಾಮಿ

    ಈ ಕುರಿತು ವಿಶ್ವದ ನಾನಾ ಭಾಗಗಳಲ್ಲಿ ಸಾಕಷ್ಟು ಅಧ್ಯಯನಗಳನ್ನು ಮಾಡಲಾಗಿದೆ. ಪ್ರತಿಯೊಂದು ಅಧ್ಯಯನದಲ್ಲೂ ಕೋವಿಡ್​-19 ಸೋಂಕು ಗಾಳಿಯಲ್ಲಿ ಹರಡುತ್ತದೆ ಎಂಬುದು ಸಾಬೀತಾಗಿದೆ. ಇಂಥ ಪರಿಸ್ಥಿತಿಯಿಂದ ಪಾರಾಗಬೇಕು ಎನ್ನುವುದಾದರೆ, ಮನೆ ಮತ್ತು ಕಚೇರಿಯಲ್ಲಿ ಯಥೇಚ್ಚವಾಗಿ ತಾಜಾ ಗಾಳಿ ಹರಿದಾಡುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಜತೆಗೆ ಅತಿಹೆಚ್ಚು ಜನರು ಸೇರದಂತೆ ಎಚ್ಚರವಹಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮನೆ ಹಾಗೂ ಕಚೇರಿಯ ಒಳಗೂ ಮಾಸ್ಕ್​ ಧರಿಸುವುದನ್ನು ಮರೆಯಬಾರದು ಎಂದು ವಿವರಿಸಿದ್ದಾರೆ.

    ಗಾಳಿಯ ಮೂಲಕ ಕರೊನಾ ಸೋಂಕು ಹರಡುತ್ತದೋ ಅಥವಾ ಸೋಂಕಿಗೆ ತುತ್ತಾಗಿರುವ ವಸ್ತುವಿನ ಮೇಲ್ಮೈನಿಂದ ಸೋಂಕು ತಗುಲುತ್ತದೋ ಎಂಬ ಚರ್ಚೆಯಲ್ಲಿ ಪಾಲ್ಗೊಂಡು ಉತ್ತರಿಸಿರುವ ಶೇಖರ್​ ಸಿ ಮಂಡೆ, ಜನರು ಕೆಮ್ಮಿದಾಗ ಅಥವಾ ಸೀನಿದಾಗ ಅವರ ಮೂಗು ಮತ್ತು ಬಾಯಿಗಳಿಂದ ಹನಿಗಳು ಸಿಡಿಯುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ದಪ್ಪ ಹನಿಗಳು ಯಾವುದಾದರೂ ವಸ್ತುವಿನ ಮೇಲ್ಮೈ ಮೇಲೆ ಹೋಗಿ ಕುಳಿತರೆ, ಅತಿಸೂಕ್ಷ್ಮವಾದ ಹನಿಗಳು ಅಥವಾ ಹನಿಯಲ್ಲಿರುವ ಸೋಂಕಿನ ಕಣ ಗಾಳಿಯಲ್ಲಿ ಸಾಕಷ್ಟು ಸಮಯದವರೆಗೂ ಹಾಗೆಯೇ ತೇಲಾಡುತ್ತಿರುತ್ತವೆ. ಉಸಿರಾಡುವಾಗ ಈ ಕಣಗಳು ನಮ್ಮ ದೇಹವನ್ನು ಹೊಕ್ಕು, ನಮ್ಮಲ್ಲೂ ಸೋಂಕು ಉಂಟು ಮಾಡಬಹುದು ಎಂದು ವಿವರಿಸಿದ್ದಾರೆ.

    ಮತ್ತೆ ಒಂದಾಗೋಣ ಬಾ ಎಂದು ಕರೆದು ಏರ್​ಹೋಸ್ಟೆಸ್​ ಅನ್ನು ಕೊಂದನಾ ಪೈಲಟ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts