More

    ದುರ್ಬಲ ಮಾನಸಿಕತೆ ಜೀವನಕ್ಕೆ ಮಾರಕ

    ಬೆಳಗಾವಿ: ಮಾನಸಿಕವಾಗಿ ದುರ್ಬಲರಾದವರು ಮಾನಸಿಕ ರೋಗಕ್ಕೆ ತುತ್ತಾಗುತ್ತಾರೆ. ಕೆಲಸದ ಒತ್ತಡಗಳಿಂದ ಹಲವಾರು ರೋಗಗಳು ಬರುತ್ತವೆ. ಹಾಗಾಗಿ ಮಾನಸಿಕ ಶಕ್ತಿ ವೃದ್ಧಿಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿಕಾಂತ ಬಿ. ಮುನ್ಯಾಳ ಸಲಹೆ ನೀಡಿದರು.

    ನಗರದ ಬೆಳಗಾವಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನಾಚರಣೆಯ ಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಖಿನ್ನತೆ ಎನ್ನುವುದು ಅಸಾಂಕ್ರಾಮಿಕ ರೋಗ. ಇದು ಈಚೆಗಿನ ಜೀವನ ಶೈಲಿಗೆ ಮಾರಕವಾಗಿ ಪರಿಣಮಿಸಿದೆ. ಕಾನೂನು ಬಾಹಿರ ಮಾದಕ ಔಷಧ ದುರ್ಬಳಕೆಯ ಅಪಾಯಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಅರಿವು ಇರಬೇಕು. ಆ ಮೂಲಕ ಸಮಾಜವನ್ನು ಮಾದಕ ದ್ರವ್ಯ ದುರ್ಬಳಕೆ ಮತ್ತು ಕಾನೂನು ಬಾಹಿರ ಸಾಗಣೆಯಿಂದ ಮುಕ್ತಗೊಳಿಸಬೇಕು ಎಂದು ಹೇಳಿದರು.

    ಮನೋವೈದ್ಯ ಡಾ.ಸುಮಿತ ದುರಗೋಜಿ ಮಾತನಾಡಿ, ಮಾದಕ ದ್ರವ್ಯಗಳ ದುರ್ಬಳಕೆಯಿಂದ ಲೀವರ್ ಕ್ಯಾನ್ಸರ್, ಪ್ಯಾರಾಲಿಸೀಸ್, ಮೆದುಳಿನ ಜೀವಕೋಶ ಕುಗ್ಗುವಿಕೆ, ಲೈಂಗಿಕ ಸಮಸ್ಯೆಗಳು, ಆಕ್ರಮಣಶೀಲ ಅಥವಾ ಹಿಂಸಾತ್ಮಕ ವರ್ತನೆ, ನಡುಕಗಳು ಮತ್ತು ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ ಎಂದು ವಿವರಿಸಿದರು.
    ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶೈಲಜಾ ತಮ್ಮಣ್ಣವರ, ಡಾ. ಸಾವಿತ್ರಿ ಬೆಂಡಿಗೇರಿ, ಡಾ.ಸಂಜಯ ಡುಮ್ಮಗೋಳ, ಡಾ.ಪ್ರಕಾಶ, ಡಾ. ಚಾಂದಿನಿ ಜಿ., ಗಾಯತ್ರಿ ಗಾಣಿಗೇರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts