More

    ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಯುವ ನಿಧಿ ಯೋಜನೆ ಜಾರಿಗೊಳಿಸುತ್ತೇವೆ: ಸಿಎಂ

    ಬೆಂಗಳೂರು: ಈಗಾಗಲೇ 3 ಯೋಜನೆ ಜಾರಿಗೊಳಿಸಿದ್ದೇವೆ. ಆಗಸ್ಟ್ 16 ರಿಂದ ಗೃಹ ಲಕ್ಷ್ಮೀ ಯೋಜನೆ ಅನುಷ್ಠಾನಗೊಳಿಸಲಿದ್ದೇವೆ. ನವೆಂಬರ್ ಅಥವಾ ಡಿಸೆಂಬರ್​​ನಲ್ಲಿ ಯುವ ನಿಧಿ ಯೋಜನೆಯನ್ನು ಚಾಲ್ತಿಗೆ ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಇದನ್ನೂ ಓದಿ: ಹಾಸನ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ನೇಮಕ

    ಅಕ್ಕಿ ವಿಚಾರದ ಬಗ್ಗೆ ಮಾತನಾಡಿದ ಸಿಎಂ, ವಿಪಕ್ಷದವರು ನಮ್ಮನ್ನು ಕೇಳಿದ್ದೀರಾ ಎಂದು ನಮಗೆ ಪ್ರಶ್ನಿಸುತ್ತಾರೆ. ಎಫ್​ಸಿಐ ಅವರು ಕೇಂದ್ರ ಸರ್ಕಾರವನ್ನು ಕೇಳಿ ಎಂದಿದ್ದರೆ ನಾವು ಅವರನ್ನೇ ಕೇಳುತ್ತಿದ್ದೆವು. ಆದ್ರೆ, ಎಫ್​ಸಿಐನವರು ಕೊಡುತ್ತೀವಿ ಎಂದು ಹೇಳಿದ್ದರು. ಈ ಕಾರಣಕ್ಕೆ ನಾವು ಕೇಳಿರಲಿಲ್ಲ. 1 ಕೆಜಿ ಅಕ್ಕಿಗೆ 36.60 ರೂ. ಹಣ ಕೊಡುತ್ತೀವಿ ಕೊಡಿ ಎಂದು ಹೇಳಿದೆವು. ಆದ್ರೆ ಅವರು ಬಡವರಿಗೆ ದ್ರೋಹ ಮಾಡುವ ರಾಜಕೀಯ ಮಾಡಿದರು ಎಂದು ಹೇಳಿದರು.

    ಅಕ್ಕಿ ಖರೀದಿಗೆ ಎಲ್ಲ ಪ್ರಯತ್ನ ಮಾಡಿದರೂ ಸದ್ಯಕ್ಕೆ ಅಕ್ಕಿ ಲಭ್ಯವಿಲ್ಲ. ವಿಧಿ ಇಲ್ಲದೆ ಅನಿವಾರ್ಯವಾಗಿ ತಲಾ 170 ರೂ. ಕೊಡಲು ಇಂದು ಫಲಾನುಭವಿಗಳ ಖಾತೆಗೆ ಹಣ ನೀಡುತ್ತಿದ್ದೇವೆ. ಸದ್ಯ ಎರಡು ಜಿಲ್ಲೆಗೆ ಹಾಕುತ್ತಿದ್ದೇವೆ. ಈ ತಿಂಗಳಿನಲ್ಲಿ ಎಲ್ಲ ಫಲಾನುಭವಿಗಳಿಗೂ ಹಣ ವರ್ಗಾವಣೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

    ನಾವು ಮಳೆ ನೀರುನ್ನು ಕುಡಿಯಬಹುದೇ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts