More

    ಐದೂ ‘ಗ್ಯಾರಂಟಿ’ಗಳು ಗ್ಯಾರಂಟಿ ಎಂದ ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಲು ಅದು ನೀಡಿದ್ದ ‘ಗ್ಯಾರಂಟಿ’ ಆಶ್ವಾಸನೆಗಳೇ ಕಾರಣ ಎನ್ನಲಾಗುತ್ತಿದೆ. ಈ ಮಧ್ಯೆ ಆ ಗ್ಯಾರಂಟಿಗಳಿಗೆ ಸಂಬಂಧಿಸಿದಂತೆ ಹಲವು ಜೋಕುಗಳು ಹರಿದಾಡುತ್ತಿವೆ.

    ಕಾಂಗ್ರೆಸ್ ‘ಗ್ಯಾರಂಟಿ’ ಹೆಸರಿನಲ್ಲಿ ನೀಡಿದ್ದ ಐದು ಪ್ರಮುಖ ಆಶ್ವಾಸನೆಗಳ ಪೈಕಿ 200 ಯುನಿಟ್ ಉಚಿತ ವಿದ್ಯುತ್ ಕೂಎ ಪ್ರಮುಖವಾದುದು. ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ಹಲವರು ನಾವಿನ್ನು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳಲಾರಂಭಿಸಿದ್ದಾರೆ.

    ಇವೆಲ್ಲದರ ನಡುವೆ ಕಾಂಗ್ರೆಸ್ ಘೋಷಿಸಿದ್ದ ‘ಗ್ಯಾರಂಟಿ’ಗಳು ಗ್ಯಾರಂಟಿ ಸಿಗುತ್ತವೆಯಾ? ಅವು ಜಾರಿಗೆ ಬರಲಿವೆಯಾ? ಕೊಡಲು ಸಾಧ್ಯವೇ? ಪಕ್ಷದವರು ಮಾತು ಉಳಿಸಿಕೊಳ್ಳುವರೇ? ಎಂಬೆಲ್ಲ ಮಾತುಗಳೂ ಕೇಳಿ ಬರಲಾರಂಭಿಸಿವೆ. ಅವೆಲ್ಲವಕ್ಕೂ ಸ್ಪಷ್ಟನೆ ಎಂಬಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.

    “ಟೀಮ್ ಕಾಂಗ್ರೆಸ್ ಕರ್ನಾಟಕದ ಜನರ ಪ್ರಗತಿ, ಕಲ್ಯಾಣ ಮತ್ತು ಸಾಮಾಜಿಕ ನ್ಯಾಯವನ್ನು ತರಲು ಬದ್ಧವಾಗಿದೆ. ಆರೂವರೆ ಕೋಟಿ ಕನ್ನಡಿಗರಿಗೆ ಭರವಸೆ ನೀಡಿದ ಐದೂ ‘ಗ್ಯಾರಂಟಿ’ಗಳನ್ನು ನಾವು ಜಾರಿಗೆ ತರುತ್ತೇವೆ” ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

    ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಎಂದು ಅಧಿಕೃತ ಘೋಷಣೆ: ಉಪ ಮುಖ್ಯಮಂತ್ರಿ ಎಷ್ಟು ಜನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts