More

    ‘ನಿಮ್ಮ ಮುತ್ತಾತನ ಕಾಲದಲ್ಲೇನಾಯಿತು?’ -ರಾಹುಲ್​ಗಾಂಧಿ ವಿರುದ್ಧ ತಿರುಗಿ ಬಿದ್ದ ಸಶಸ್ತ್ರಪಡೆ ಹಿರಿಯ ಅಧಿಕಾರಿಗಳು

    ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಯಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದೇ ವಿಚಾರಕ್ಕೆ ಸಂಬಂಧಪಟ್ಟು ವಿವಾದ ಸೃಷ್ಟಿಸಿದ್ದಾರೆ.

    ಲಡಾಖ್​ ಗಡಿಯಲ್ಲಿ ಚೀನಾ ಭಾರತದ ನೆಲವನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ರಾಹುಲ್​ ಗಾಂಧಿ ಹೇಳಿದ್ದರು. ಅದಕ್ಕೆ ಲಡಾಖ್​ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್​ಗ್ಯಾಲ್​ ಅವರು ಖಡಕ್​ ಆಗಿ ಪ್ರತ್ಯುತ್ತರ ನೀಡಿದ್ದರು. ಈಗ ಲಡಾಖ್​ನಲ್ಲಿ ಒಂದು ಸಣ್ಣ ಭೂಮಿಯೂ ಚೀನಾದ ಪಾಲಾಗಲಿಲ್ಲ ಎಂದು ಟ್ವೀಟ್ ಮಾಡಿದ್ದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಚೀನಾ ಭಾರತದ ನೆಲವನ್ನು ಅತಿಕ್ರಮಣ ಮಾಡಿರುವ ಬಗ್ಗೆ ದಾಖಲೆಯನ್ನೂ ತೋರಿಸಿದ್ದರು. ಇದನ್ನೂ ಓದಿ: ಭಾರತದ ಆರ್ಥಿಕತೆ ಸದೃಢ ಮಾಡಲು ಧನಸಹಾಯ ಮಾಡ್ತಾರಂತೆ ಪಾಕ್​ ಪ್ರಧಾನಿ! 

    ಇದರ ಬೆನ್ನಲ್ಲೇ ಭಾರತ ಸಶಸ್ತ್ರಪಡೆಯ ಸುಮಾರು 71 ಹಿರಿಯ ಅಧಿಕಾರಿಗಳು ರಾಹುಲ್​ ಗಾಂಧಿ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ವಿಶ್ವದಲ್ಲೇ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ನಮ್ಮ ದೇಶದ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೆ. ಅಂಥ ಯೋಧರ ಕೆಲಸದ ಬಗ್ಗೆ ಏನೂ ಗೊತ್ತಿಲ್ಲದ ವ್ಯಕ್ತಿ ಹೀಗೆ ಅನಪೇಕ್ಷಿತ ಹೇಳಿಕೆಗಳನ್ನು ನೀಡುತ್ತಿರುವುದು ನಿಜಕ್ಕೂ ಶೋಚನೀಯ ಎಂದು ಹೇಳಿದ್ದಾರೆ.

    ರಾಹುಲ್​ ಗಾಂಧಿಯವರು 1962ರಲ್ಲಿ ಏನಾಯಿತು ಎಂಬುದನ್ನು ಮರೆಯಬಾರದು. ಆಗ ಅವರ ಮುತ್ತಜ್ಜ ಜವಾಹರ್​ ಲಾಲ್​ ನೆಹರೂ ಅವರೇ ದೇಶವನ್ನು ಆಳುತ್ತಿದ್ದರು. ಆಗ ನಾವು ಅಂದರೆ ಭಾರತೀಯ ಸೈನಿಕರು ಚೀನಾ ವಿರುದ್ಧ ವೀರಾವೇಶದಿಂದ ಹೋರಾಡಿ, ಆದೇಶದಲ್ಲಿ ಅಪಾರ ಸಾವು-ನೋವು ಉಂಟು ಮಾಡಿದರೂ ಕೂಡ ಕೊನೆಗೂ ಸೋತಿದ್ದೇವೆ. ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿದ್ದ ಗರ್ಭಿಣಿ ಮಹಿಳೆಗೆ ಕರೊನಾ: ಪೊಲೀಸ್​, ವೈದ್ಯ, ಜಡ್ಜ್​ಗೂ ಕ್ವಾರಂಟೈನ್ ಸಂಕಷ್ಟ

    ರಾಹುಲ್​ ಗಾಂಧಿ ತಮ್ಮ ದೇಶದ ವಿರುದ್ಧವೇ ಇಂತಹ ಹೇಳಿಕೆ ನೀಡುತ್ತಾರೆಂದು ವಿವೇಕಶಾಲಿಯಾದ ಯಾವ ಭಾರತೀಯನೂ ನಿರೀಕ್ಷೆ ಮಾಡಿರಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, 2017ರಲ್ಲಿ ಡೊಕ್ಲಾಮ್​ನಲ್ಲಿ ಏನಾಯಿತು ಎಂಬ ಬಗ್ಗೆಯೂ ವಿವರಣೆ ನೀಡಿದ್ದಾರೆ.

    ಮಿಲಿಟರಿಯಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ತಮ್ಮ ಕ್ಷುಲ್ಲಕ ರಾಜಕಾರಣಕ್ಕಾಗಿ ತಿರುಚುವುದು ತುಂಬ ಶೋಚನೀಯ ಸಂಗತಿ. ಇದರಿಂದ ನಮಗೆ ಅವಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts