More

    ಜಲಾನಯನ ಯೋಜನೆ ಲಾಭ ಪಡೆದುಕೊಳ್ಳಿ- ಮೌಲ್ಯಮಾಪನ ಅಧಿಕಾರಿ ಸಲಹೆ

    ಅಳವಂಡಿ: ಭೂಮಿಯ ಫಲವತ್ತತೆ ಹಾಗೂ ತೇವಾಂಶ ಉಳಿಸಲು ಜಲಾನಯನ ಯೋಜನೆ ರೈತರಿಗೆ ಅನೂಕೂಲವಾಗಲಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಂಗಳೂರಿನ ಟೆರ‌್ರಿ ಸಂಸ್ಥೆಯ ಮೌಲ್ಯಮಾಪನ ಅಧಿಕಾರಿ ಮೀರಾ ಬೀರಣ್ಣವರ ಹೇಳಿದರು.

    ಇದನ್ನೂ ಓದಿ: ಜಲಾನಯನ ಆಧಾರಿತ ಯೋಜನೆ ರೂಪಿಸಿ

    ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಜಿಪಂ, ತಾಪಂ, ಕೃಷಿ ಇಲಾಖೆ, ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಲಾನಯನ ಅಭಿವೃದ್ಧಿ ಯೋಜನೆ ಕುರಿತು ಬೀದಿ ನಾಟಕಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಈ ಭಾಗದ ಎಲ್ಲ ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸುವುದು ಅಗತ್ಯವಾಗಿದೆ. ಅಲ್ಪ ಪ್ರಮಾಣದ ನೀರಿನಲ್ಲಿ ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು ಎಂದರು.

    ಕಲಾವಿದರಾದ ವೀರೇಶ ಹಾಲಗುಂದಿ, ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ನಾಗರಾಜ ಕಂಕಿ, ಗ್ಯಾನೇಶ ಬಡಿಗೇರ, ಸಿದ್ದಲಿಂಗಮ್ಮ ಹಾಲಗುಂದಿ, ಶರಣಪ್ಪ ಬಡಿಗೇರ, ಪ್ರಮುಖರಾದ ಹೊನ್ನಪ್ಪಗೌಡ, ಬಸನಗೌಡ, ಮಂಜಪ್ಪ, ಗವಿಸಿದ್ದಪ್ಪ, ಬಸವರಾಜ, ಸಂತೋಷ, ವೆಂಕಟೇಶ, ಶಾಂತಾ, ದೇವೇಂದ್ರಗೌಡ, ಗುಡದಪ್ಪ, ಗವಿಸಿದ್ದಪ್ಪ, ಸುರೇಶ, ಬಸಪ್ಪ, ಬಾಷುಸಾಬ್, ಮರೇಗೌಡ, ಹಾಲಪ್ಪ, ಖಾದಿರಸಾಬ, ಮುದಿಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts