More

    ಭದ್ರಾ ಪ್ರವಾಹದಲ್ಲಿ ಮುಳುಗಿದ ಗ್ರಾಮಗಳು

    ಬಾಳೆಹೊನ್ನೂರು: ಹೋಬಳಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಆಶ್ಲೇಷ ಮಳೆ ಅಬ್ಬರ ಕೊಂಚಮಟ್ಟಿಗೆ ತಗ್ಗಿದ್ದರೂ ಕಳಸ, ಕುದುರೆಮುಖದಲ್ಲಿ ಮಳೆ ಆರ್ಭಟಿಸಿದ್ದರಿಂದ ಪ್ರವಾಹ ಮತ್ತಷ್ಟು ಹೆಚ್ಚಾಯಿತು.

    ಶನಿವಾರ ಬೆಳಗ್ಗೆವರೆಗೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಬಳಿಕ ಕೊಂಚ ಕ್ಷೀಣಿಸಿತು. ಪಟ್ಟಣದಿಂದ ಕಳಸ-ಹೊರನಾಡು-ಕೊಟ್ಟಿಗೆಹಾರ ಸಂಪರ್ಕ ಕಲ್ಪಿಸುವ ಬೈರೇಗುಡ್ಡದ ಮಾರಿಗಂಡಿ, ತೆಪ್ಪದಗಂಡಿ, ಮಾಗುಂಡಿ ಸಮೀಪದ ಮಹಲ್ಗೋಡು, ಎನ್.ಆರ್.ಪುರ ರಸ್ತೆಯ ಸೀಕೆ-ವಾಟುಕೊಡಿಗೆ ಬಳಿ ಮುಖ್ಯರಸ್ತೆಯಲ್ಲಿ ಭದ್ರಾ ಪ್ರವಾಹ ಉಂಟಾಗಿತ್ತು.

    ಬಾಳೆಹೊನ್ನೂರಿನಲ್ಲಿ ಭದ್ರಾ ಹಾಗೂ ಡೋಬಿ ಹಳ್ಳದಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ ಮನೆ, ಕಟ್ಟಡಗಳು ಜಲಾವೃತಗೊಂಡಿದ್ದವು. ಜಲದಿಗ್ಭಂಧನಕ್ಕೊಳಗಾದ ಮಹಲ್ಗೋಡುವಿನಲ್ಲಿ ಸ್ಥಳೀಯ ಯುವಕರು ಉಕ್ಕಡದ ಮೂಲಕ ಸ್ಥಳೀಯರಿಗೆ ದಿನಸಿ, ಹಾಲು, ದಿನಪತ್ರಿಕೆ ತಲುಪಿಸಿದರು.

    ಭದ್ರಾ ಪ್ರವಾಹಕ್ಕೆ ಸಿಲುಕಿ ವನ್ಯಮೃಗಗಳು ಸಾವನ್ನಪ್ಪಿದ್ದು, ಬಾಳೆಹೊನ್ನೂರಿನ ಪ್ರವಾಹದಲ್ಲಿ ನಾಲ್ಕು ಕಡವೆಗಳ ಮೃತದೇಹ, ಹಸುವಿನ ಮೃತದೇಹ ತೇಲಿಕೊಂಡು ಹೋಗುತ್ತಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts