More

    ಸದನದಲ್ಲಿ ಮಾರ್ಧನಿಸಿದ ಗದಗ ನಗರದ ನೀರಿನ ಸಮಸ್ಯೆ

    ವಿಜಯವಾಣಿ ಸುದ್ದಿಜಾಲ ಗದಗ
    ಬರ, ಬೇಸಿಗೆ ನಡುವೆ ಜಿಲ್ಲೆಯಲ್ಲಿ ನೀರು, ಮೇವು ಸಮಸ್ಯೆ ತಲೆದೂರಿದೆ. ಅದರಲ್ಲೂ ಗದಗ ಬೆಟಗೇರಿ ನಗರದ ಕುಡಿಯುವ ನೀರಿನ ಸಮಸ್ಯೆ ಬೀಕರವಾಗಿದೆ. ಸದನದಲ್ಲಿ ಈ ವಿಷಯ ಮಾರ್ಧನಿಸಿದ್ದು ಗಂಭಿರ ಚರ್ಚೆ ಆಗಿದೆ. ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಮತ್ತು ನಗರಾಭಿವೃದ್ಧಿ ಸಚಿವರ ನಡುವೆ ಮಾತಿನ ಚಕಮಕಿಯೂ ನಡೆದು ವಿಷಯ ಗಾಂಭಿರ್ಯ ಸ್ವರೂಪ ಪಡೆಯಿತು. ನಗರದ 35 ವಾರ್ಡಗಳಲ್ಲಿ 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ನಗರಾಭಿವೃದ್ಧಿ ಸಚಿವರು ಸದನಕ್ಕೆ ತಪ್ಪು ಉತ್ತರ ನೀಡಿದ್ದಾರೆ ಎಂದು ಸಂಕನೂರು ವಾಗ್ದಾಳಿ ನಡೆಸಿದರು. ಚರ್ಚಾ ವಿಷಯ ಮುಂದುವರೆದಂತೆ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ “ಗದಗ ನಗರಕ್ಕೆ ಭೇಟಿ ನೀಡಿ ನೀರಿನ ಕುರಿತು ಸದಸ್ಯರೊದಿಗೆ ಸಭೆ ನಡೆಸಿ. ಸಮಸ್ಯೆಯ ಆಳ ಅರಿತುಕೊಂಡು ಪರಿಹಾರ ಮಾಗೋರ್ಪಾಯ ಕಂಡು ಹಿಡಿಯಿರಿ’ ಎಂದು ಸಚಿವರಿಗೆ ಸೂಚನೆ ನೀಡಿದರು.

    ಸಂಕನೂರು ಪ್ರಶ್ನೆ?
    ಗದಗ ಬೆಟಗೇರಿ ನಗರದಲ್ಲಿ 2.15 ಲಕ್ಷ ಜನಸಂಖ್ಯೆ ಇದೆ. ಕಳೆದ 35 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ನಗರದಲ್ಲಿ ಇರುವ 35 ವಾರ್ಡ್​ಗೆ 15 ದಿನಕ್ಕೊಮ್ಮೆ ಕುಡಿಯುವ ನೀರು ಲಭ್ಯವಾಗುತ್ತಿದೆ. ಸಚಿವರು ನೀಡಿದ ಉತ್ತರ ತಪ್ಪಾಗಿದೆ. 35 ವಾರ್ಡ್​ನಲ್ಲಿ 8 ವಾರ್ಡ್​ಗಳಿಗೆ 2 ದಿನಕ್ಕೊಮ್ಮೆ, ಉಳಿದ ವಾರ್ಡ್​ಗಳಿಗೆ 7 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಪ್ಪು ಉತ್ತರ ನೀಡಿದ್ದಾರೆ. ಅಧಿಕಾರ ವರ್ಗ ತಪು$್ಪ ಮಾಹಿತಿ ನಿಡಿ ಸಚಿವರಿಂದ ತಪ್ಪು ಉತ್ತರ ನೀಡುವಂತೆ ಮಾಡಿದ್ದಾರೆ. ನಗರಸಭೆ ಸಮೀಪದಲ್ಲಿ ನನ್ನ ಮನೆಯಿದ್ದು, ಮನೆ ಮುಂಭಾಗದಲ್ಲಿ ನೀರಿಗಾಗಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. 24/7 ನಿರಂತರ ನೀರಿನ ಕುಡಿಯುವ ನೀರಿನ ಯೋಜನೆಯೂ ರ್ಪೂಣಗೊಂಡಿಲ್ಲ. ಗದಗ ಬೆಟಗೇರಿಯ “ಎ” ಪಾಟಿಂಟ್​ ವರೆಗೆ ಪೈಪ್​ ಲೈನ್​ ಅಲ್ಲಲ್ಲಿ ಸೋರಿಕೆ ಆುತ್ತಿದೆ. ಯೋಜನೆ ಗುತ್ತಿಗೆ ಪಡೆದ ಗುತ್ತಿಗೆದಾರನನ್ನು ಕಾಮಗಾರಿ ರ್ಪೂಣಗೊಳಿಸಿಲ್ಲ. ಗುತ್ತಿಗೆದಾರ ಯೋಜನೆ ಕೈ ಬಿಟ್ಟು ಹೋಗಿದ್ದಾನೆ. ಈ ಬಗ್ಗೆ ನಿಮ್ಮ ಕ್ರಮ ಏನು? ಎಂದು ಸಚಿವರನ್ನು ಪ್ರಶ್ನಿಸಿದರು.

    ಸಚಿವ ಭೈರತಿ ಸುರೇಶ ಉತ್ತರ:
    ವಾರಕ್ಕೊಮ್ಮೆ ಜನರಿಗೆ ನೀರು ಪೂರೈಕೆ ಮಾಡುವುದು ಕೂಡ ಸಮಂಜಸ ಅಲ್ಲ. ಪ್ರತಿನಿತ್ಯ ನೀರು ಪೂರೈಸಬೇಕಾಗಿದ್ದು ನಮ್ಮ ಕರ್ತವ್ಯ. ಎಸ್​ಪಿಎಂಎಲ್​ ಎಂಬ ಗುತ್ತಿಗೆದಾರ ಈ ಯೋಜನೆ ಕಾಮಗಾರಿಗೆ ಕೈಗೆತ್ತಿಕೊಂಡಿದ್ದ. 2017ರಲ್ಲೇ ಈ ಯೋಜನೆ ರ್ಪೂಣಗೊಳ್ಳಬೇಕಾಗಿತ್ತು. ಆದರೂ 2023ರ ಒಳಗಾಗಿ ಯೋಜನೆ ರ್ಪೂಣಗೊಳಿಸಲು ಸಮಯ ನೀಡಲಾಗಿತ್ತು. ಆದರೂ ರ್ಪೂಣಗೊಳಿಸಲಾಗಿತ್ತು. ಈ ಹಿನ್ನೆಲೆ ಗುತ್ತಿಗೆದಾರ ಬ್ಯಾಂಕ್​ನಲ್ಲಿ ಇಟ್ಟ ಠೇವಣಿ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಈ ಪ್ರಕ್ರಿಯೆಗೂ ಗುತ್ತಿಗೆದಾರ ಕೋರ್ಟ್​ನಿಂದ ತಡೆಯಾಜ್ಞೆ ತರಲು ಯಶಸ್ವಿಯಾದ. ಮಾರ್ಚ್​. 5 ರಂದು ಕೋರ್ಟ್​ ನಿಂದ ಆದೇಶ ಬರಲಿದೆ. ಈ ಆದೇಶ ಅನ್ವಯ ಹೊಸ ಗುತ್ತಿಗೆದಾರನಿಗೆ ಈ ಕಾಮಗಾರಿ ನೀಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು. ಇನ್ನೂ ಗದಗ ಬೆಟಗೇರಿ “ಎ’ ಪಾಯಿಂಟ್​ ವರೆಗೆ ಹರಿಯುವ ನೀರು ಅಲ್ಲಲ್ಲಿ ಸೋರಿಕೆ ಆಗುತ್ತಿರುವ ಕುರಿತು ಉತ್ತರಿಸಿದ ಸಚಿವರು “ಅಮೃತ ಯೋಜನೆ ಅಡಿ 34 ಕೊಟಿ ವೆಚ್ಚದಲ್ಲಿ ಹೊಸ ಪೈಪ್​ಲೈನ್​ ಅಳವಡಿಸಲು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಗೆ ಗುತ್ತಿಗೆ ನೀಡಲಾಗಿದೆ. ಸರ್ವೇ ರ್ಪೂಣಗೊಂಡಿದೆ. ತಾಂತ್ರಿಕ ಮಂಜೂರಾತಿಗೆ ಮಂಡನೆ ಆಗಿದೆ. ಕೆಲವೇ ದಿನಗಳಲ್ಲಿ ಯೋಜನೆ ಆರಂಭಿಸಲಾಗುವುದು ಎಂದು ಸಚಿವರು ಉತ್ತರಿಸಿದರು.

    ಕೋಟ್​:
    3 ವರ್ಷದ ಯೋಜನೆ 8 ವರ್ಷ ಆದರೂ ಮುಗಿಯಲಿಲ್ಲ. ಪೈಪ್​ಲೈನ್​ ಅಳವಡಿಸಲು ಸರ್ಕಾರ ಹೊಸ ಗುತ್ತಿಗೆ ನೀಡುವ ಉದ್ದೇಶ ಹೊಂದಿದೆ. ಯೋಜನೆ ಸದುದ್ದೇಶದಿಂದ ಕೂಡಿದರೂ ಸಹ ಯೋಜನೆ ಪರಿರ್ಪೂಣ ಸಮಪರ್ಕ ಆಗಬೇಕು. ಶ್ರೀದಲ್ಲಿ ನಗರದ ಕುಡಿಯುವ ನಿರಿನ ಭವನೆ ಅಂತ್ಯವಾಗಬೇಕು
    ರಾಘವೇಂದ್ರ ಯಳವತ್ತಿ. ನಗರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts