More

    ನೀರು ಕಲ್ಪಿಸಲು ಸರ್ಕಾರಕ್ಕೆ ಮನವಿ

    ನಿಪ್ಪಾಣಿ: ಮುಂಬರುವ 50 ವರ್ಷ ಗಮನದಲ್ಲಿಟ್ಟುಕೊಂಡು ನಗರಕ್ಕೆ ನೀರಿನ ಸಮಸ್ಯೆ ಉಲ್ಬಣಿಸದಂತೆ ಹೊಸ ಜಲಾಶಯ ನಿರ್ಮಾಣ ಕಾರ್ಯ ಯೋಜನೆಗಳನ್ನೊಳಗೊಂಡ 175 ಕೋಟಿ ರೂ. ವೆಚ್ಚದ ಪ್ರಸ್ತಾವನೆಗೆ ಅನುಮೋದನೆ ಪಡೆಯಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಗರಸಭೆ ಸದಸ್ಯರು ಸೇರಿ ಡಿ.8ರಂದು ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ ಎಂದು ನಗರಸಭೆ ಸದಸ್ಯ ವಿಲಾಸ ಗಾಡಿವಡ್ಡರ ಹೇಳಿದರು.

    ನಗರದ ಕಾರ್ಯಾಲಯದಲ್ಲಿ ಕಾಂಗ್ರೆಸ್ ಬೆಂಬಲಿತ ನಗರಸಭೆ ಸದಸ್ಯರು ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ. ಹಳೆಯ ಜಲಾಶಯದ ಮೂಲಕ ಒಂದೆಡೆ ಹೊಸ ಜಲಾಶಯ ನಿರ್ಮಿಸಿ ಉಳಿದ ಭಾಗಕ್ಕೆ ನೀರು ಪೂರೈಸುವ ಯೋಜನೆ ನಮ್ಮದಾಗಿದೆ. ಇದರಿಂದ ಜತೆಗೆ ಸ್ತವನಿಧಿ, ಯರನಾಳ, ಶಿರಗುಪ್ಪಿ ಗ್ರಾಮಗಳಿಗೂ ನೀರು ಪೂರೈಸಬಹುದು ಎಂದರು.

    ಸುಮಾರು 100 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಅಲ್ಲಿ ಹೊಸ ಜಲಾಶಯ ನಿರ್ಮಾಣ (100 ಕೋಟಿ ರೂ.) ಮತ್ತು ಶುದ್ಧೀಕರಣ ಘಟಕ (25 ಕೋಟಿ ರೂ.) ಸ್ಥಾಪಿಸುವ ಪ್ರಸ್ತಾವನೆಗೆ ಸರ್ಕಾರ ಹಸಿರು ನಿಶಾನೆ ತೋರಿಸುವ ಭರವಸೆ ಇದೆ ಎಂದರು.

    2018ರ ನಂತರ ನಿಪ್ಪಾಣಿ ನಗರಕ್ಕೆ ನೀರಿನ ಸಮಸ್ಯೆ ಆಗುತ್ತಿದೆ. ಸ್ಥಳೀಯ ಶಾಸಕಿ ಶಶಿಕಲಾ ಜೊಲ್ಲೆ ಅವರ ಬಿಜೆಪಿ ರಾಜ್ಯ ಹಾಗೂ ನಗರಸಭೆಯಲ್ಲಿ ಆಡಳಿತದಲ್ಲಿದ್ದರೂ, ಜನತೆಗೆ ನೀರಿನ ಸೌಕರ್ಯ ಒದಗಿಸಲು ಸಮರ್ಪಕ ಯೋಜನೆ ಹಮ್ಮಿಕೊಳ್ಳಲಿಲ್ಲ. ಈ ಕುರಿತಾಗಿ ನೀರಿನ ಸಮಸ್ಯೆ ಉಲ್ಬಣಿಸದಂತೆ ಸಭೆ ಕರೆಯಲು ಮನವಿ ಮಾಡಿಕೊಂಡರೂ ಶಾಸಕರು ತಲೆ ಕೆಡಿಸಿಕೊಳ್ಳಲಿಲ್ಲ. ಸಚಿವರಾಗಿದ್ದಾಗ ಆಶ್ರಯ ಯೋಜನೆಯ ಪ್ರಯೋಜನ ಬಡವರಿಗೆ ತಲುಪುವಂತೆ ನೋಡಿಕೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.

    ನಗರಸಭೆ ಸದಸ್ಯ ಬಾಳಾಸಾಹೇಬ ದೇಸಾಯಿ, ರವಿಂದ್ರ ಶಿಂಧೆ, ದತ್ತಾ ನಾಯಿಕ, ಸಂಜಯ ಪಾವಲೆ, ಡಾ. ಜಸರಾಜ ಗಿರೆ, ಅನೀತಾ ಪಠಾಡೆ, ಶೇರು ಬಡೇಘರ, ಶೌಕತ್ ಮನಿಯಾರ್, ಸುನೀಲ ಶೇಲಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts