More

    ನೆಗಳೂರಲ್ಲಿ ಕುಡಿಯುವ ನೀರಿನ ಟ್ಯಾಂಕ್ ಶಿಥಿಲ

    ವಿಜಯವಾಣಿ ಸುದ್ದಿಜಾಲ ನೆಗಳೂರ

    ಹಾವೇರಿ ತಾಲೂಕಿನ ನೆಗಳೂರ ಗ್ರಾಮದ ದಲಿತ ಕೇರಿಯಲ್ಲಿ ದಶಕಗಳ ಹಿಂದೆ ನಿರ್ವಣಗೊಂಡಿದ್ದ ನೀರು ಸಂಗ್ರಹಣೆಯ ಟ್ಯಾಂಕ್ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದು, ಸ್ಥಳೀಯ ನಿವಾಸಿಗಳು ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ದಲಿತಕೇರಿಯ ಜನರಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ದಶಕದ ಹಿಂದೆ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಆದರೆ, ಕಳೆದ 3 ವರ್ಷಗಳ ಹಿಂದೆ ಟ್ಯಾಂಕ್ ಶಿಥಿಲಗೊಂಡಿದ್ದು, ಯಾವುದೇ ಸಮಯದಲ್ಲಾದರೂ ಧರೆಗೆ ಉರುಳಿ ಬೀಳುವ ಸ್ಥಿತಿಯಲ್ಲಿದೆ. ಇದರ ಪಕ್ಕದಲ್ಲಿಯೇ ಸರ್ಕಾರಿ ಪ್ರಾಥಮಿಕ ಶಾಲೆಯಿದ್ದು, ಮಕ್ಕಳು ಇಲ್ಲಿಯೇ ಆಟವಾಡುತ್ತಾರೆ. ಇದರಿಂದ ದಲಿತ ಕೇರಿಯ ನಿವಾಸಿಗಳು ಆಂತಕದಲ್ಲಿಯೇ ದಿನ ಕಳೆಯುತ್ತಿದ್ದಾರೆ.

    ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ: ಶಿಥಿಲಗೊಂಡಿರುವ ನೀರಿನ ಟ್ಯಾಂಕ್​ನ್ನು ನೆಲಸಮಗೊಳಿಸಿ ನೂತನ ಟ್ಯಾಂಕ್ ನಿರ್ಮಾಣ ಮಾಡುವಂತೆ ಗ್ರಾಪಂ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ. ಆದರೆ, ಯಾರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

    ನಮ್ಮ ಕೇರಿಯಲ್ಲಿ ನಿರ್ವಣಗೊಂಡಿರುವ ನೀರು ಸಂಗ್ರಹ ಟ್ಯಾಂಕ್ ಯಾವುದೇ ಸಮಯದಲ್ಲಿ ಕೆಳಗೆ ಬೀಳುವ ಸ್ಥಿತಿ ತಲುಪಿದೆ. ಆಂತಕದಲ್ಲಿಯೇ ದಿನ ಕಳೆಯುತ್ತಿದ್ದೇವೆ. ಈ ವಿಷಯವಾಗಿ ಹಲವು ಬಾರಿ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವದೇ ಪ್ರಯೋಜನವಾಗಿಲ್ಲ. ಆದ್ದರಿಂದ ಶೀಘ್ರವಾಗಿ ನೀರಿನ ಟ್ಯಾಂಕ್ ಅನ್ನು ನೆಲಸಮ ಮಾಡಿ ನೂತನ ನೀರಿನ ಸಂಗ್ರಹಗಾರವನ್ನು ನಿರ್ವಿುಸಬೇಕು.

    | ಸಂಜಯಗಾಂಧಿ ಸಂಜೀವಣ್ಣನವರ, ಸ್ಥಳೀಯ ನಿವಾಸಿ

    ನೆಗಳೂರ ಗ್ರಾಮದಲ್ಲಿ ಓವರ್​ಹೆಡ್ ಟ್ಯಾಂಕ್​ಗಳು ಶಿಥಿಲಾವಸ್ಥೆಯಲ್ಲಿದ್ದವು. ಅವುಗಳಲ್ಲಿ ಒಂದನ್ನು ಕೆಡವಿ ಹೊಸದಾಗಿ ಕಟ್ಟಲಾಗುತ್ತಿದೆ. ಈಗ ಮತ್ತೆ ಇದನ್ನು ಕೆಡವಿದರೆ ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರವಾಗಲಿದೆ. ಹೀಗಾಗಿ ಹೊಸದಾಗಿ ನಿರ್ವಿುಸುತ್ತಿರುವ ಟ್ಯಾಂಕ್ ಪೂರ್ಣಗೊಂಡ ನಂತರ ಇದನ್ನು ಇಂಜಿನಿಯರ್​ಗಳಿಂದ ಪರಿಶೀಲಿಸಿ ನೆಲಸಮಗೊಳಿಸಬೇಕೋ, ದುರಸ್ತಿಗೊಳಿಸಬೇಕೋ ಎಂಬುದನ್ನು ತೀರ್ವನಿಸಲಾಗುವುದು. ಈ ಕುರಿತು ಕುಡಿಯುವ ನೀರು ನೈರ್ಮಲ್ಯ ಇಲಾಖೆಯೊಂದಿಗೆ ರ್ಚಚಿಸಲಾಗಿದೆ.

    | ಪವಿತ್ರಾ ಬಿ.ಸಿ., ಪಿಡಿಒ ನೆಗಳೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts