More

    83.70 ಅಡಿಗೆ ಕುಸಿದ ನೀರಿನಮಟ್ಟ, ಏಳು ವರ್ಷದ ನಂತರ ಭೀಕರ ಸ್ಥಿತಿ: ಮಳೆಯಾಗದಿದ್ದರೆ ಜೀವಜಲಕ್ಕೆ ಹಾಹಾಕಾರ ನಿಶ್ಚಿತ

    ದೀಪಕ್ ಕೆ.ಆರ್.ಸಾಗರ
    ಭೀಕರ ಬರಗಾಲದ ನಡುವೆಯೇ ಕೋಟ್ಯಂತರ ಜನರ ಬದುಕಿಗೆ ಆಧಾರವಾಗಿರುವ ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ ಶುಕ್ರವಾರ 83.70 ಅಡಿಗೆ ಕುಸಿದಿರುವುದು ಆತಂಕವನ್ನು ಹೆಚ್ಚಿಸಿದೆ. ಮಾತ್ರವಲ್ಲದೆ ಕಳೆದ ಏಳು ವರ್ಷದ ನಂತರ ಪರಿಸ್ಥಿತಿಯ ಭೀಕರತೆ ಮರುಕಳಿಸಿರುವುದು ಭವಿಷ್ಯವನ್ನು ಚಿಂತೆಗೀಡು ಮಾಡಿದೆ.
    ಕಳೆದ ವರ್ಷ ಪೂರ್ವ ಮುಂಗಾರು ಹಾಗೂ ಮುಂಗಾರು ಕೈಕೊಟ್ಟ ಕಾರಣ 124.80 ಅಡಿ ಗರಿಷ್ಟ ಸಂಗ್ರಹದ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 113 ಅಡಿ ತಲುಪಲಷ್ಟೇ ಸಾಧ್ಯವಾಯಿತು. ಇನ್ನು 2023 ಏ.11ಕ್ಕೆ ಹೋಲಿಸಿದರೆ ಸುಮಾರು 10 ಅಡಿ ನೀರಿನ ಸಂಗ್ರಹ ಕಡಿಮೆ ಇದೆ. ಪ್ರಸ್ತುತ ಒಳಹರಿವು ಕೇವಲ 95 ಕ್ಯೂಸೆಕ್ ಇದ್ದರೆ, ಡ್ಯಾಂನಿಂದ 1,258 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
    ಸಧ್ಯದ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರನ್ನು ಕುಡಿಯಲಷ್ಟೇ ಸೀಮಿತಗೊಳಿಸಲಾಗಿದೆ. ಆದಾಗ್ಯೂ ಏಪ್ರಿಲ್‌ನಲ್ಲಿಯೇ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜನರು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಮುಂದಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಅಣೆಕಟ್ಟೆಯಲ್ಲಿರುವ ನೀರನ್ನು 60 ಅಡಿವರೆಗೆ ಮಾತ್ರ ಬಳಸಲು ಅವಕಾಶವಿದೆ. ಅಂದರೆ ಇನ್ನೂ ಕೇವಲ 8 ಟಿಎಂಸಿ ನೀರನ್ನು ಬಳಸಬಹುದು.

    83.70 ಅಡಿಗೆ ಕುಸಿದ ನೀರಿನಮಟ್ಟ, ಏಳು ವರ್ಷದ ನಂತರ ಭೀಕರ ಸ್ಥಿತಿ: ಮಳೆಯಾಗದಿದ್ದರೆ ಜೀವಜಲಕ್ಕೆ ಹಾಹಾಕಾರ ನಿಶ್ಚಿತ

    ಇನ್ನು ಅಣೆಕಟ್ಟೆಯಲ್ಲಿ ನೀರು ಕುಸಿತವಾಗಿರುವ ಕಾರಣ ನಾಲೆಗಳಲ್ಲಿ ನೀರು ಹರಿಸಲು ಅಸಾಧ್ಯವಾಗಿರುವುದರಿಂದ ಕೆ.ಆರ್.ಸಾಗರ ಅಣೆಕಟ್ಟೆ ವ್ಯಾಪ್ತಿಯ ರೈತರು ಬೆಳೆ ಬೆಳೆಯದಂತೆ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ನಾಲೆಗೆ ನೀರು ಹರಿಸದ ಪರಿಣಾಮ ನಾಲಾ ವ್ಯಾಪ್ತಿಯಲ್ಲಿ ಅಂರ್ತಜಲ ಕುಸಿತವಾಗಿದೆ. ಪರಿಣಾಮ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ಪ್ರತಿ ಗ್ರಾಮದಲ್ಲಿ ಹತ್ತು ಎಂದು ಬೋರ್‌ವೆಲ್ ತೆಗೆದುಕೊಂಡರೆ ಎಂಟ ಬೋರ್‌ವೆಲ್‌ನಲ್ಲಿ ನೀರೇ ಬರುತ್ತಿಲ್ಲ. ಪರಿಸ್ಥಿತಿ ಭೀಕರವಾಗಿದ್ದು, ಜಾನುವಾರುಗಳಿಗೆ ನೀರು ಹಾಗೂ ಮೇವಿಗಾಗಿ ರೈತರು ಪರದಾಡುತ್ತಿದ್ದಾರೆ. ಡ್ಯಾಂನ ಇತಿಹಾಸ ಗಮನಿಸಿದರೆ 2003 ಏಪ್ರಿಲ್‌ನಲ್ಲಿ ನೀರಿನ ಮಟ್ಟ 65.90 ಅಡಿ ತಲುಪಿದ್ದೇ ಕನಿಷ್ಟ ಮಟ್ಟದ ದಾಖಲೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts