More

    ಪಾನಿ ಪೇ ಚರ್ಚಾ ಇಂದು

    ಹುಬ್ಬಳ್ಳಿ : ಎಂ.ಕೆ. ಡೆವಲಪರ್ಸ್, ಗ್ಲೋಬಲ್ ಗಾರ್ನರ್, ಎನೆಜಿಕ್ ಇಂಡಿಯಾ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ‘ಸಾವಯವ ತಾರಸಿ ತೋಟಗಾರಿಕೆ’ ಹಾಗೂ ‘ಪಾನಿ ಪೆ ಚರ್ಚಾ’ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಆರ್.ವಿ. ವೈಶಿಷ್ಟ್ಯಮ್ ಅಧ್ಯಕ್ಷ ರವಿಂದ್ರ ರಾಮದುರ್ಗ, ಆ. 19ರಂದು ಸಂಜೆ 4.30ಕ್ಕೆ ಅಕ್ಷಯ ಕಾಲನಿಯಲ್ಲಿರುವ ಐಬಿಎಂಆರ್ ಸಭಾಂಗಣದಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

    ಮನೆಗಳ ತಾರಸಿ ಮೇಲೆ ತರಕಾರಿ, ಹಣ್ಣು ಬೆಳೆದು, ಸೇವನೆ ಮಾಡುವ ಮೂಲಕ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಬೇಕು. ನೀರು ಜೀವಜಲವಾಗಿದ್ದು, ಶುದ್ಧ ನೀರು ಸೇವಿಸುವುದು ಅತಿ ಮುಖ್ಯವಾಗಿದೆ ಎಂದು ಹೇಳಿದರು.

    ಸಾವಯವ ತಾರಸಿ ತೋಟಗಾರಿಕೆ ಕುರಿತು ಯುವಜನ ಸೇವಾ ಇಲಾಖೆಯ ನಿವೃತ್ತ ಅಧಿಕಾರಿ ಶಂಕರ ಕೆ. ಮಾಹಿತಿ ನೀಡುವರು. ನೀರಿನ ಪ್ರಾಮುಖ್ಯತೆ ಬಗ್ಗೆ ಶಿವಕುಮಾರ ಕೊಟ್ಟೂರಶೆಟ್ಟಿ ಮಾತನಾಡುವರು ಎಂದು ತಿಳಿಸಿದರು.

    ಎಂ.ಕೆ. ಡೆವಲಪರ್ಸ್ ನಿರ್ದೇಶಕ ಜೈ ರೇಣುಕಯ್ಯ ಸಂಸ್ಥಾನಮಠ ಉದ್ಘಾಟಿಸುವರು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ ಡಾ. ರೀಟಾ ಹಂಡಾ ಹಾಗೂ ಗೋಕುಲ ಠಾಣೆ ಪೊಲೀಸ್ ಇನಸ್ಪೆಕ್ಟರ್ ಪ್ರವೀಣ ನೀಲಮ್ಮನವರ ಅತಿಥಿಗಳಾಗಿ ಪಾಲ್ಗೊಳ್ಳುವರು. ಐಬಿಎಂಆರ್ ಕಾಲೇಜಿನ ಚೇರ್ಮನ್ ವಿನಯಚಂದ್ರ ಮಹೇಂದ್ರಕರ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

    ಸಂತೋಷಕುಮಾರ ಹಾಗೂ ರಾಜಶೇಖರ ಪಾಟೀಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts