More

    ಮೂರ್ನಾಲ್ಕು ವರ್ಷಗಳಲ್ಲಿ ಚಿ.ನಾ.ಹಳ್ಳಿ ಕ್ಷೇತ್ರದ ಶೇ.80 ಕೆರೆಗಳಿಗೆ ನೀರು ; ಸಚಿವ ಮಾಧುಸ್ವಾಮಿ ಭರವಸೆ

    ಚಿಕ್ಕನಾಯಕನಹಳ್ಳಿ/ಬುಕ್ಕಾಪಟ್ಟಣ: ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಸಾಸಲು ಕೆರೆಗೆ ಹೇಮೆ ನೀರು ಹರಿಸುವ ಮೂಲಕ ಜನತೆಗೆ ಕೊಟ್ಟಿರುವ ವಾತು ಉಳಿಸಿಕೊಳ್ಳುತ್ತೇನೆ. ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಕ್ಷೇತ್ರದ ಶೇ.80 ಕೆರೆಗಳನ್ನು ಮೂರು ನೀರಾವರಿ ಯೋಜನೆಗಳಿಂದ ತುಂಬಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ಕಂದಿಕೆರೆ ಹೋಬಳಿ ವ್ಯಾಪ್ತಿಯ ತಿಮ್ಮನಹಳ್ಳಿ ಹೊರವಲಯದಲ್ಲಿ ಗುರುವಾರ ಭದ್ರಾ ಮೇಲ್ದಂಡೆ ಯೋಜನೆಯ ಶಾಖಾನಾಲೆಯ ಸರಪಳಿ 138ರಿಂದ 159ರ 680 ಕಿ.ಮೀ.ವರೆಗಿನ (ಪ್ಯಾಕೇಜ್-9)ನಾಲೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ವಾತನಾಡಿದರು.

    ಯೋಜನೆಯು ಜಿಲ್ಲೆಯ ಭಟ್ಟರಹಳ್ಳಿ ಮೋಟಿಹಳ್ಳಿ ಮಧ್ಯಭಾಗದಿಂದ ಪ್ರಾರಂಭವಾಗಿ ಬುಕ್ಕಾಪಟ್ಟಣದ ಮೂಲಕ ಹಿರಿಯೂರಿನ ಕಡೆಗೆ ಹೋಗುತ್ತದೆ. ಈ ಕಾಮಗಾರಿ ಒಂದು ವರ್ಷದ ಹಿಂದೆಯೇ ಪ್ರಾರಂಭವಾಗಬೇಕಿತ್ತು. ಆದರೆ, ಬುಕ್ಕಾಪಟ್ಟಣ ಹಾಗೂ ಚಿ.ನಾ.ಹಳ್ಳಿ ಭಾಗದ ಕೆಲವು ಕೆರೆಗಳನ್ನು ಯೋಜನೆಯಲ್ಲಿ ಇದರಲ್ಲಿ ಸೇರಿಸಿರಲಿಲ್ಲ. ಹೀಗಾಗಿ ಬುಕ್ಕಾಪಟ್ಟಣದ ದೊಡ್ಡ ಅಗ್ರಹಾರ ಕೆರೆಗೆ ನೀರು ಹರಿಸಲು ನೀರಾವರಿ ಸಚಿವರೊಂದಿಗೆ ವಾತನಾಡಿದ್ದು, ಬೊರನಕಣಿವೆಗೂ ಹೇವಾವತಿ ನೀರು ಹರಿಸಲಾಗುತ್ತದೆ ಎಂದರು.

    ಯೋಜನೆಯಿಂದ ಸುವಾರು ಒಂದೂಕಾಲು ಟಿಎಂಸಿ ನೀರು ಸಿಗಲಿದ್ದು, ಕೆಲವು ಕೆರೆಗಳಿಗೆ ನಾಲೆಯಿಂದ ನೇರವಾಗಿ ತುಂಬಿಸಬಹುದಾಗಿದೆ. ಇದಕ್ಕೆಲ್ಲ 146 ಕೋಟಿ ರೂಪಾಯಿ ಮಂಜೂರು ವಾಡಲಾಗಿದೆ ಎಂದರು. ಭದ್ರಾ ಮೇಲ್ದಂಡೆ ಯೋಜನೆಯ ಎಇಇ ನರಸಿಂಹರಾಜು ಮಾತನಾಡಿ, ಯೋಜನೆಯಲ್ಲಿ ಚಿಕ್ಕನಾಯಕನಹಳ್ಳಿ ಹಾಗೂ ಬುಕ್ಕಾಪಟ್ಟಣದ 13 ಕೆರೆಗಳನ್ನು ತುಂಬಿಸಲಾಗುವುದು ಎಂದರು.
    ಜಿಪಂ ಸ್ಥಾಯಿಸಮಿತಿ ಅಧ್ಯಕ್ಷೆ ಮಂಜುಳಮ್ಮ, ತಾಪಂ ಸದಸ್ಯರಾದ ಸಿಂಗದಹಳ್ಳಿ ರಾಜ್‌ಕುವಾರ್, ಕೇಶವಮೂರ್ತಿ, ಇಂದ್ರಮ್ಮ, ಕಲಾವತಿ ಹಾಗೂ ತಾಪಂ ಮಾಜಿ ಅಧ್ಯಕ್ಷ ಎಚ್.ಆರ್.ಶಶಿಧರ್, ಬಿಜೆಪಿ ಮುಖಂಡ ನಂದಿಹಳ್ಳಿ ಶಿವಣ್ಣ ಮತ್ತಿತರರು ಇದ್ದರು.

    ಬುಕ್ಕಾಪಟ್ಟಣದ ಜನರಲ್ಲಿ ಹರ್ಷ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಚಿ.ನಾ.ಹಳ್ಳಿ ತಾಲೂಕಿನ 8 ಕೆರೆ ಮತ್ತು ಬುಕ್ಕಾಪಟ್ಟಣ ಹೋಬಳಿ 3 ಕೆರೆಗಳು ಬಿಟ್ಟು ಹೋಗಿದ್ದವು. ಆದರೆ, ಮಾಧುಸ್ವಾಮಿ ಸಚಿವರಾದ ನಂತರ ಹೊಸದಾಗಿ 11 ಕೆರೆಗಳನ್ನು ಸೇರಿಸಿ ಹೊಸದಾಗಿ ಯೋಜನೆಯನ್ನು ಆರಂಭಿಸಲಾಗಿದೆ. ಬುಕ್ಕಾಪಟ್ಟಣ, ರಾಮಲಿಂಗಪುರ, ದೊಡ್ಡ ಅಗ್ರಹಾರ ಕೆರೆಗೆ ಜೀವ ಬರಲಿದೆ. ಹುಳಿಯಾರು ಹೋಬಳಿ ಮೋಟಿಹಳ್ಳಿ ಕ್ರಾಸ್‌ನಿಂದ ನಾಲೆ ಕಾಮಗಾರಿ ಬುಕ್ಕಾಪಟ್ಟಣದವರೆಗೂ ಸಾಗಲಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ 19, ಶಿರಾ ತಾಲೂಕಿನ 41, ಹಿರಿಯೂರು ತಾಲೂಕಿನ 3 ಕೆರೆಗಳು ಈ ಮಹತ್ವಾಕಾಂಕ್ಷಿ ಯೋಜನೆಯ ಲಾಭ ಪಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts