More

    ದೇಶವಾಸಿಗಳಿಗೆ ಪತ್ರ ಬರೆದ ನಂತರ ‘ಮೇರಾ ಭಾರತ್, ಮೇರಾ ಪರಿವಾರ್’ ಹಾಡು ಬಿಡುಗಡೆ ಮಾಡಿದ ಮೋದಿ

    ನವದೆಹಲಿ: 2024ರ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಹಾಡಿನ ಸಾಲಿನಲ್ಲಿ ‘ಮೇರಾ ಭಾರತ್, ಮೇರಾ ಪರಿವಾರ್’ ಎಂದು ಬರೆಯಲಾಗಿದ್ದು, ತಮ್ಮ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಿದ ಕೆಲಸಗಳನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ.

    ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಈ ಹಾಡನ್ನು ಬಿಡುಗಡೆ ಮಾಡಿದ್ದು, ಈ ಹಾಡಿನಲ್ಲಿ ಕಳೆದ 10 ವರ್ಷಗಳಲ್ಲಿ ಯುವಕರು, ರೈತರು, ಮಹಿಳೆಯರು, ಬಡವರಿಗಾಗಿ ತಮ್ಮ ಸರ್ಕಾರ ಮಾಡಿದ ಎಲ್ಲಾ ಕೆಲಸಗಳನ್ನು ಹೇಳಲಾಗಿದೆ.

    ಮೋದಿ ಬಿಡುಗಡೆ ಮಾಡಿರುವ ಹಾಡು ಇಲ್ಲಿದೆ ನೋಡಿ…

    ಇದಕ್ಕೂ ಮುನ್ನ ಮೋದಿ ಶುಕ್ರವಾರ ರಾತ್ರಿ ದೇಶದ ಜನತೆಗೆ ಪತ್ರ ಬರೆದಿದ್ದರು. ಪತ್ರದಲ್ಲಿ ತಮ್ಮ ಸರ್ಕಾರದ ಕಾರ್ಯವೈಖರಿ ಜೊತೆಗೆ ಮುಂದೆ ಮಾಡುವ ಕೆಲಸಗಳಿಗೆ ಜನ ಸಾಮಾನ್ಯರಿಂದ ಅಭಿಪ್ರಾಯವನ್ನೂ ಕೇಳಿದ್ದರು. ತಮ್ಮ ಪತ್ರದಲ್ಲಿ ಮೋದಿ ಅವರು ಸಾರ್ವಜನಿಕರನ್ನು ಕುಟುಂಬದ ಸದಸ್ಯರಂತೆ ಸಂಬೋಧಿಸಿರುವುದನ್ನು ನಾವಿಲ್ಲಿ ಗಮನಿಸಬಹುದು. ಜೊತೆಗೆ ಎಲ್ಲರಿಗೂ ಉಜ್ವಲ ಭವಿಷ್ಯ ಸಿಗಲೆಂದು ಪತ್ರದಲ್ಲಿ ಮೋದಿ ಹಾರೈಸಿದ್ದಾರೆ.

    ನಿಮ್ಮ ಮತ್ತು ನಮ್ಮ ಒಗ್ಗಟ್ಟಿನಿಂದ ಈಗ ಸರ್ಕಾರ ದಶಕ ಪೂರೈಸಿದೆ ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ. “ನನ್ನ 140 ಕೋಟಿ ಕುಟುಂಬ ಸದಸ್ಯರೊಂದಿಗಿನ ನಂಬಿಕೆ, ಸಹಕಾರ ಮತ್ತು ಬೆಂಬಲದಿಂದ ಈ ಬಲವಾದ ಸಂಬಂಧ ಬೆಳೆದಿದೆ. ನನಗೆ ಸಂಬಂಧ ಎಷ್ಟು ವಿಶೇಷ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಅಭಿವೃದ್ಧಿ ಹೊಂದುವ ಭಾರತದ ಸಂಕಲ್ಪವನ್ನು ಈಡೇರಿಸಲು ನಿಮ್ಮ ಬೆಂಬಲ ಮತ್ತು ನಿಮ್ಮ ಸಲಹೆ ಬಹಳ ಮುಖ್ಯ ಎಂದು ಮೋದಿ ಹೇಳಿದ್ದಾರೆ. ಆದ್ದರಿಂದ, ದಯವಿಟ್ಟು ಯೋಜನೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಮೋದಿ.

    2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದಿದೆ. ಎನ್‌ಡಿಎ ಮಿತ್ರಪಕ್ಷಗಳೂ 50 ಸ್ಥಾನಗಳನ್ನು ಗೆದ್ದಿವೆ. ಈ ಬಾರಿ ಬಿಜೆಪಿಗೆ 370 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಆದರೆ, ಎನ್‌ಡಿಎಗೆ ಪ್ರಧಾನಿ ನರೇಂದ್ರ ಮೋದಿ 400 ದಾಟುವ ಘೋಷಣೆ ಹೊರಡಿಸಿದೆ. 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts